»   » ಮತ್ತೆ 'ಮಮ್ಮಿ' ಜೊತೆ ಸಿನಿಮಾ ಮಾಡ್ತಾರಂತೆ ಲೋಹಿತ್!

ಮತ್ತೆ 'ಮಮ್ಮಿ' ಜೊತೆ ಸಿನಿಮಾ ಮಾಡ್ತಾರಂತೆ ಲೋಹಿತ್!

Posted By:
Subscribe to Filmibeat Kannada

ಸದ್ಯ, ಸ್ಯಾಂಡಲ್ ವುಡ್ ಗಲ್ಲಾಪೆಟ್ಟಿಗೆಯನ್ನ ಕೊಳ್ಳೆ ಹೊಡೆಯುತ್ತಿರುವ ಚಿತ್ರ 'ಮಮ್ಮಿ ಸೇವ್ ಮಿ'. ಪ್ರಿಯಾಂಕಾ ಉಪೇಂದ್ರ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ದ ಈ ಹಾರರ್ ಚಿತ್ರ ಕನ್ನಡ ಪ್ರೇಕ್ಷಕರನ್ನ ಸಿಕ್ಕಾಪಟ್ಟೆ ಭಯ ಪಡಿಸುತ್ತಿದೆ.

ಹೀಗೆ, ಚೊಚ್ಚಲ ಚಿತ್ರದಲ್ಲಿಯೇ ಗೆಲುವಿನ ನಗೆ ಬೀರಿದ ಯುವ ನಿರ್ದೇಶಕನಿಗೆ ಈಗ ಮತ್ತೊಂದು ಆಫರ್ ಬಂದಿದೆ.['ಮಮ್ಮಿ ಸೇವ್ ಮಿ' ಚಿತ್ರತಂಡದ ಕಡೆಯಿಂದ ಬಂದ ಇಂಟ್ರೆಸ್ಟಿಂಗ್ ನ್ಯೂಸ್ ]

ಹೌದು, ಮೊದಲ ಸಿನಿಮಾದ ಮೂಲಕ ಇಡೀ ಕನ್ನಡ ಚಿತ್ರರಂಗದ ಗಮನ ಸೆಳೆದಿರುವ ಲೋಹಿತ್ ನಿರ್ದೇಶನಕ್ಕೆ, ಪ್ರಿಯಾಂಕಾ ಉಪೇಂದ್ರ ಅವರು ಬೋಲ್ಡ್ ಆಗಿದ್ದಾರೆ. ಇದರ ಪರಿಣಾಮ 'ಮಮ್ಮಿ' ನಿರ್ದೇಶಕನಿಗೆ ಸೆಕೆಂಡ್ ಸಿನಿಮಾ ಮಾಡುವ ಜವಾಬ್ದಾರಿ ಸಿಕ್ಕಿದೆ.

'ಮಮ್ಮಿ' ನಿರ್ದೇಶಕನಿಗೆ ಮತ್ತೊಂದು ಆಫರ್

'ಮಮ್ಮಿ ಸೇವ್ ಮಿ' ಚಿತ್ರದ ಯಶಸ್ಸಿನಲ್ಲಿರುವ ನಿರ್ದೇಶಕ ಲೋಹಿತ್, ಈಗ ಎರಡನೇ ಸಿನಿಮಾದ ತಯಾರಿಯಲ್ಲಿದ್ದಾರೆ. ಈಗಾಗಲೇ ಎರಡನೇ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಸ್ಕ್ರಿಪ್ಟ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರಂತೆ.['ಮಮ್ಮಿ' ದೆವ್ವ ನೋಡಿ ಭಯ ಭೀತಗೊಂಡ ವಿಮರ್ಶಕರು.!]

ಪ್ರಿಯಾಂಕಾ ಜೊತೆಯಲ್ಲಿ 2ನೇ ಚಿತ್ರ

'ಮಮ್ಮಿ ಸೇವ್ ಮಿ' ಚಿತ್ರದಲ್ಲಿ ಅಮೋಘ ನಟನೆ ಮಾಡಿದ್ದ, ಪ್ರಿಯಾಂಕಾ ಉಪೇಂದ್ರ, ಲೋಹಿತ್ ಅವರ ಎರಡನೇ ಚಿತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಮೊದಲೇ ಕಥೆ ಅಂತಿಮವಾಗಿತ್ತು. ಆದ್ರೆ, 'ಮಮ್ಮಿ' ಚಿತ್ರದ ರೆಸ್ ಪಾನ್ಸ್ ಗಾಗಿ ಕಾಯುತ್ತಿದ್ದ, ಪ್ರಿಯಾಂಕಾ ಅವರು, ಈ ಎರಡನೇ ಸಿನಿಮಾದ ಬಗ್ಗೆ ಬಹಿರಂಗಪಡಿಸಿದ್ದಾರೆ.

ಭಾವನಾತ್ಮಕ ಥ್ರಿಲ್ಲರ್

'ಮಮ್ಮಿ ಸೇವ್ ಮಿ' ಹಾರರ್ ಸಿನಿಮಾ. ಇಲ್ಲಿ ಭಾವನಾತ್ಮಕ ಅಂಶಗಳನ್ನ ಸೇರಿಸಿದ್ದರು, ಹಾಗಾಗಿ 'ಮಮ್ಮಿ' ಸಿನಿಮಾ ಹಾರರ್ ವಿಭಾಗಕ್ಕೆ ಸೇರುತ್ತದೆ. ಆದ್ರೆ, ಮುಂದಿನ ಸಿನಿಮಾ 'ಭಾವನಾತ್ಮಕ ಥ್ರಿಲ್ಲರ್' ಕಥೆ ಹೊಂದಿದ್ದು, ಕೊಲ್ಕತ್ತಾದಲ್ಲಿ ನಡೆಯುವ ಕಥೆಯನ್ನ ಒಳಗೊಂಡಿದೆಯಂತೆ.

'ಮಮ್ಮಿ ಸೇವ್ ಮಿ' ಸೂಪರ್ ಹಿಟ್

ಸೆಪ್ಟಂಬರ್ 2 ರಂದು ಬಿಡುಗಡೆಯಾಗಿದ್ದ 'ಮಮ್ಮಿ ಸೇವ್ ಮಿ' ಚಿತ್ರ, ಯಶಸ್ವಿ ಎರಡು ವಾರ ಮುಗಿಸಿ, ಮೂರನೇ ವಾರ ಪ್ರದರ್ಶನವಾಗುತ್ತಿದೆ. ಪ್ರಿಯಾಂಕಾ ಉಪೇಂದ್ರ, ಬೇಬಿ ಯುವಿನಾ, ಐಶ್ವರ್ಯ ಸಿಂಧೋಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಅಜನೀಶ್ ಲೋಕನಾಥ್ ಚಿತ್ರಕ್ಕೆ ಹಿನ್ನೆಲೆ ಸಂಗೀತ ಚಿತ್ರಕ್ಕಿತ್ತು.

ಭರ್ಜರಿ ಕಲೆಕ್ಷನ್ ಮಾಡಿದ 'ಮಮ್ಮಿ'

ಬಿಡುಗಡೆಯಾದ 10 ದಿನಗಳಲ್ಲಿ 'ಮಮ್ಮಿ' ಸಿನಿಮಾ ಸುಮಾರು 3.5 ಕೋಟಿ ಬಿಸ್ ನೆಸ್ ಮಾಡಿದೆಯಂತೆ. ಈ ವಾರ ತೆಲುಗಿನಲ್ಲಿ 'ಚಿನ್ನಾರಿ' ಎಂಬ ಶೀರ್ಷಿಕೆಯಲ್ಲಿ ರಿಲೀಸ್ ಆಗುತ್ತಿದೆ. ಇನ್ನೂ ಹಿಂದಿಯಲ್ಲೂ ಚಿತ್ರದ ರಿಮೇಕ್ ಹಕ್ಕು ಕೊಳ್ಳುವ ಆಸಕ್ತಿ ತೋರಿದ್ದಾರಂತೆ.[ಚಿಲ್ಲರೆ ಸಮಸ್ಯೆ ಇದ್ದರೂ 'ಮಮ್ಮಿ' ನೋಡಲು ನೂಕುನುಗ್ಗಲು.! ]

English summary
The success of the recently released Mummy-Save Me brings actor Priyanka Upendra and director H Lohith together again. The duo’s next is to be an emotional thriller. The script, approved by the actress, is on an incident that takes place in Kolkata.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada