For Quick Alerts
  ALLOW NOTIFICATIONS  
  For Daily Alerts

  ಪತಿ ಮತ್ತು ತಾಯಿಯ ಮೇಲೆ ಕಣ್ಣಿಡಲು ಗೂಢಚಾರಿಯನ್ನು ಬಿಟ್ಟಿದ್ದರಂತೆ ಪ್ರಿಯಾಂಕಾ ಚೋಪ್ರಾ

  |

  ಬಾಲಿವುಡ್ ನ ಖ್ಯಾತ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಪತಿ ನಿಕ್ ಜೋನಸ್ ಜೊತೆ ವಿದೇಶದಲ್ಲಿ ನೆಲೆಸಿದ್ದಾರೆ. ಬಾಲಿವುಡ್ ನಲ್ಲಿ ಪ್ರಿಯಾಂಕಾ ಸಿನಿಮಾಗಳು ಕಡಿಮೆಯಾದರೂ ಸದಾ ಸುದ್ದಿಯಲ್ಲಿರುತ್ತಾರೆ. ಕೊನೆಯದಾಗಿ ವೈಟ್ ಟೈಗರ್ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದ ಪ್ರಿಯಾಂಕಾ, ಇದೀಗ ಹಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  ಈ ನಡುವೆ ಪ್ರಿಯಾಂಕಾ ತನ್ನ ಆತ್ಮಚರಿತ್ರೆಯನ್ನು ಬಿಡುಗಡೆ ಮಾಡಲು ಕಾತರರಾಗಿದ್ದಾರೆ. ಪ್ರಿಯಾಂಕಾ ಚೋಪ್ರಾ ಆತ್ಮಚರಿತ್ರೆ 'ಅನ್ ಫಿನಿಶಿಡ್' ಈಗಾಗಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆತ್ಮಚರಿತ್ರೆಯ ಕೆಲವು ಇಂಟರೆಸ್ಟಿಂಗ್ ಭಾಗಗಳು ವೈರಲು ಆಗುತ್ತಿದೆ.

  ಪ್ರಿಯಾಂಕಾಗೆ ಸ್ತನದ ಗಾತ್ರ ಹೆಚ್ಚಿಸಿಕೊಳ್ಳಬೇಕು ಎಂದಿದ್ದರಂತೆ ನಿರ್ದೇಶಕರು: ಆತ್ಮಚರಿತ್ರೆಯಲ್ಲಿ ಶಾಕಿಂಗ್ ಘಟನೆ ರಿವೀಲ್

  ಆತ್ಮಚರಿತ್ರೆಯಲ್ಲಿ ಪ್ರಿಯಾಂಕಾ ತನ್ನ ತಾಯಿ ಮತ್ತು ಪತಿಯ ವಿರುದ್ಧ ಗೂಢಚಾರಿಯನ್ನು ಬಿಟ್ಟಿದ್ದ ಘಟನೆಯನ್ನು ಉಲ್ಲೇಖ ಮಾಡಿದ್ದಾರೆ. ಪ್ರಿಯಾಂಕಾ ನಿಕ್ ಜೋನಸ್ ಕೈಹಿಡಿಯುವ ಮೊದಲು, ನಿಕ್ ಜೋನಸ್, ಪ್ರಿಯಾಂಕಾ ಭಾರತಕ್ಕೆ ಬರಲು ಬಯಸಿದ್ದರಂತೆ. ಭಾರತಕ್ಕೆ ಬಂದಾಗ ನಿಕ್ ಪ್ರಿಯಾಂಕಾ ಮನೆಗೆ ಭೇಟಿ ನೀಡಿದ ಸಮಯದಲ್ಲಿ ನಡೆದ ಇಂಟರೆಸ್ಟಿಂಗ್ ಘಟನೆಯನ್ನು ರಿವೀಲ್ ಮಾಡಿದ್ದಾರೆ.

  ನಿಕ್ ಮನೆಗೆ ಬಂದಾಗ ತಾಯಿ ಬಳಿ ಏನು ಮಾತನಾಡುತ್ತಾರೆ ಎನ್ನುವ ಚಿಂತೆ ಶುರುವಾಗಿತ್ತಂತೆ. ನಿಕ್ ಪ್ರಿಯಾಂಕಾ ತಾಯಿ ಮಧು ಚೋಪ್ರಾ ಅವರನ್ನು ಊಟಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ ರೆಸ್ಟೊರೆಂಟ್ ಗೆ ತಾಯಿಯನ್ನು ಕರೆದುಕೊಂಡು ಹೋಗುತ್ತಾರೆ. ಇದು ಪ್ರಿಯಾಂಕಾ ಅವರನ್ನು ಮತ್ತಷ್ಟು ಚಿಂತೆಮಾಡುವಂತೆ ಮಾಡಿತು ಎಂದು ಹೇಳಿದ್ದಾರೆ.

  'ಕೆಲವರು ತಾಯಿಯನ್ನು ಊಟಕ್ಕೆ ಕರೆದುಕೊಂಡು ಹೋಗಿದ್ದಾರೆ ಎಷ್ಟು ಒಳ್ಳೆಯವರಲ್ಲವಾ ಎಂದು ಯೋಚಿಸಬಹುದು. ಆದರೆ ನಾನು ಹಾಗಲ್ಲ. ಅವರು ನನ್ನ ತಾಯಿಯನ್ನು ಯಾಕೆ ಕರೆದುಕೊಂಡು ಹೋದರು. ಅವರು ಏನು ಮಾತನಾಡುತ್ತಾರೆ? ನನ್ನನ್ನು ಮುಜುಗರಕ್ಕೀಡುಮಾಡುವಂತ ಏನನ್ನಾದರೂ ಹೇಳುತ್ತಾರಾ? ಎನ್ನುವ ಯೋಚನೆಯಲ್ಲಿದ್ದೆ'

  ಆ ಸಮಯದಲ್ಲಿ ನಾನು ಮೀಟಿಂಗ್ ನಲ್ಲಿ ಕುಳಿತಿದ್ದೆ. ಆದರೆ ಮೀಟಿಂಗ್ ಕಡೆ ಗಮನ ಇರಲಿಲ್ಲ. ತಾಯಿ ಮತ್ತು ನಿಕ್ ಏನು ಮಾತನಾಡುತ್ತಾರೆ ಎನ್ನುವುದು ನನ್ನ ಯೋಚನೆಯಾಗಿತ್ತು. ಬಳಿಕ ನನ್ನ ಭದ್ರತಾ ಸಿಬ್ಬಂದಿಯನ್ನು ಕರೆದು ಅವರು ಹೋದ ರೆಸ್ಟೊರೆಂಟ್ ಗೆ ಹೋಗಿ ಅವರ ಮೇಲೆ ಕಣ್ಣಿಡಲು ಹೇಳಿದೆ. ಅವರ ಫೋಟೋವನ್ನು ತೆಗೆದು ಕಳುಹಿಸುವಂತೆ ಹೇಳಿದೆ. ಕ್ಯಾಂಟಿಕೋ ಕೌಶಲ್ಯವನ್ನು ಬಳಸಿದೆ' ಎಂದಿದ್ದಾರೆ.

  ಸಲ್ಮಾನ್ ಖಾನ್ ಗೋಸ್ಕರ ದೇಶಬಿಟ್ಟು ಬಂದಿದ್ದ ನಟಿ | Filmibeat Kannada

  ಆದರೆ ಆ ದಿನ ನಿಕ್ ಜೋನಸ್, ಪ್ರಿಯಾಂಕಾ ತಾಯಿಯನ್ನು ಹೊರಗೆ ಕರೆದುಕೊಂಡು ಹೇಗಿದ್ದು ಪ್ರಿಯಾಂಕಾರನ್ನು ಮದುವೆಯಾಗಲು ಅನುಮತಿ ಪಡೆಯಲು. ಈ ಘಟನೆಯನ್ನು ಪ್ರಿಯಾಂಕಾ ತನ್ನ ಆತ್ಮಚರಿತ್ರೆಯಲ್ಲಿ ಬರೆದುಕೊಂಡಿದ್ದಾರೆ.

  English summary
  Bollywood Actress Priyanka Chopra reveals once she sent someone to spy on Nick and her mother.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X