»   » 'ಅರ್ಜುನ್ ಗೌಡ' ಚಿತ್ರಕ್ಕೆ ನಾಯಕಿ ಆದ ಪ್ರಿಯಾಂಕಾ

'ಅರ್ಜುನ್ ಗೌಡ' ಚಿತ್ರಕ್ಕೆ ನಾಯಕಿ ಆದ ಪ್ರಿಯಾಂಕಾ

Posted By:
Subscribe to Filmibeat Kannada

'ಪಟಾಕಿ' ಚಿತ್ರದಲ್ಲಿ ಗಣೇಶ್ ಜೊತೆಗೆ ನಟಿಸಿದ್ದ ನಟಿ ಪ್ರಿಯಾಂಕಾ ತಿಮ್ಮೇಶ್ ಇದೀಗ ಪ್ರಜ್ವಲ್ ದೇವರಾಜ್ ಜೊತೆ ತೆರೆಹಂಚಿಕೊಳ್ಳಲು ಸಿದ್ದವಾಗಿದ್ದಾರೆ.

ಲಕ್ಕಿ ಶಂಕರ್ ನಿರ್ದೇಶನದ 'ಅರ್ಜುನ್ ಗೌಡ' ಚಿತ್ರದಲ್ಲಿ ನಟಿಸಲು ಪ್ರಜ್ವಲ್ ದೇವರಾಜ್ ಗ್ರೀನ್ ಸಿಗ್ನಲ್ ಕೊಟ್ಟಿರುವ ಸುದ್ದಿ ನಿಮಗೆ ಗೊತ್ತೇ ಇದೆ. ಇದೀಗ ಅದೇ ಚಿತ್ರಕ್ಕೆ ನಾಯಕಿ ಆಗಿ ಪ್ರಿಯಾಂಕಾ ತಿಮ್ಮೇಶ್ ಆಯ್ಕೆ ಆಗಿದ್ದಾರೆ.

'ಇನ್ಸ್ ಪೆಕ್ಟರ್ ವಿಕ್ರಂ', 'ಚಿಲಂ' ಚಿತ್ರಗಳಲ್ಲೂ ಪ್ರಿಯಾಂಕಾ ಬಣ್ಣ ಹಚ್ಚಿದ್ದಾರೆ. ಈ ನಡುವೆ 'ಅರ್ಜುನ್ ಗೌಡ' ಚಿತ್ರಕ್ಕೂ ಅವಕಾಶ ಸಿಕ್ಕಿರುವುದಕ್ಕೆ ಪ್ರಿಯಾಂಕಾ ಫುಲ್ ಖುಷಿಯಾಗಿದ್ದಾರೆ. ಹೇಳಿ ಕೇಳಿ 'ಅರ್ಜುನ್ ಗೌಡ' ಕೋಟಿ ರಾಮು ನಿರ್ಮಾಣದ ಚಿತ್ರ. ಬಿಗ್ ಬ್ಯಾನರ್ ನಲ್ಲಿ ನಟಿಸುವ ಚಾನ್ಸ್ ಸಿಕ್ಕಿರುವುದಕ್ಕೆ ಪ್ರಿಯಾಂಕಾ ಸಂತಸ ವ್ಯಕ್ತಪಡಿಸಿದ್ದಾರೆ.

ಕನ್ನಡದಲ್ಲಿ ಅರ್ಜುನ್ ಗೌಡ ಆಗಲಿರುವ ಪ್ರಜ್ವಲ್

Priyanka Thimmesh to pair opposite Prajwal Devaraj in Arjun Gowda.

''ನಾನು ಅದೃಷ್ಟವಂತೆ. ಬಿಗ್ ಬ್ಯಾನರ್ ಚಿತ್ರದಲ್ಲಿ ನಟಿಸುವುದು ನನ್ನ ಕನಸಾಗಿತ್ತು. ಅದೀಗ 'ಅರ್ಜುನ್ ಗೌಡ' ಮೂಲಕ ಈಡೇರುತ್ತಿದೆ'' ಅಂತ ಹೇಳ್ತಾರೆ ಪ್ರಿಯಾಂಕಾ ತಿಮ್ಮೇಶ್.

ಈ ಹಿಂದೆ ಪೂಜಾ ಗಾಂಧಿ ನಟಿಸಿದ್ದ 'ಜಿಲೇಬಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಲಕ್ಕಿ ಶಂಕರ್ ಇದೀಗ 'ಅರ್ಜುನ್ ಗೌಡ' ಚಿತ್ರದ ನಿರ್ದೇಶಕರು. ಇದೇ ಸಿನಿಮಾದಲ್ಲಿ 'ಸ್ಪರ್ಶ' ರೇಖಾ ಕೂಡ ನಟಿಸುತ್ತಿರುವುದು ವಿಶೇಷ. ಮೇ ತಿಂಗಳ ಅಂತ್ಯದಲ್ಲಿ 'ಅರ್ಜುನ್ ಗೌಡ' ಸಿನಿಮಾ ಸೆಟ್ಟೇರಲಿದೆ.

English summary
Kannada Actress Priyanka Thimmesh to pair opposite Prajwal Devaraj in Kannada Movie 'Arjun Gowda'.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X