For Quick Alerts
  ALLOW NOTIFICATIONS  
  For Daily Alerts

  ಪ್ರಿಯಾಂಕಾ ಹುಟ್ಟುಹಬ್ಬ: ಮುದ್ದು ಮಡದಿಗೆ ಉಪೇಂದ್ರ ಕೊಟ್ಟ ಸ್ಪೆಷಲ್ ಗಿಫ್ಟ್ ಇದೇ.!

  By Harshitha
  |

  ಇತ್ತೀಚೆಗಷ್ಟೇ ರಿಯಲ್ ಸ್ಟಾರ್ ಉಪೇಂದ್ರ ಮುದ್ದು ಮಡದಿ ಪ್ರಿಯಾಂಕಾ ತಮ್ಮ 39ನೇ ಹುಟ್ಟುಹಬ್ಬವನ್ನ ಗ್ರ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿಕೊಂಡರು. ಕತ್ರಿಗುಪ್ಪೆಯಲ್ಲಿರುವ ತಮ್ಮ ನಿವಾಸದಲ್ಲೇ ಪ್ರಿಯಾಂಕಾ ಉಪೇಂದ್ರ ಬರ್ತಡೇ ಸೆಲೆಬ್ರೇಷನ್ ಅದ್ಧೂರಿಯಾಗಿ ನಡೆಯಿತು.

  ರೆಬೆಲ್ ಸ್ಟಾರ್ ಅಂಬರೀಶ್, ರೋರಿಂಗ್ ಸ್ಟಾರ್ ಶ್ರೀಮುರಳಿ, ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ಕನ್ನಡ ಚಿತ್ರರಂಗದ ಖ್ಯಾತ ತಾರೆಯರು ಪ್ರಿಯಾಂಕಾ ಉಪೇಂದ್ರ ಬರ್ತಡೇ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. [ಚಿತ್ರಗಳು: ಪ್ರಿಯಾಂಕ ಉಪೇಂದ್ರ ಬರ್ತ್ ಡೇ ಪಾರ್ಟಿಯಲ್ಲಿ ಸ್ಟಾರ್ಸ್ ಮೋಜು-ಮಸ್ತಿ]

  ಪ್ರೀತಿಯ ಹೆಂಡ್ತಿ ಬರ್ತಡೇ ಇಷ್ಟೊಂದು ಗ್ರ್ಯಾಂಡ್ ಆಗಿ ನಡೆಯುತ್ತಿರುವಾಗ, ಸ್ಪೆಷಲ್ ಗಿಫ್ಟ್ ಕೊಡಲೇಬೇಕಲ್ವಾ ಅಂತ ರಿಯಲ್ ಸ್ಟಾರ್ ಉಪೇಂದ್ರ ಒಂದು ಪ್ಲಾನ್ ಮಾಡಿ 'ವಿಭಿನ್ನ ಉಡುಗೊರೆ' ತಂದಿದ್ದರು. ಮುಂದೆ ಓದಿ...

  ಏನು ಆ ಉಡುಗೊರೆ?

  ಏನು ಆ ಉಡುಗೊರೆ?

  ಪ್ರಿಯಾಂಕಾ ಉಪೇಂದ್ರ ಕೇಕ್ ಕಟ್ ಮಾಡುತ್ತಿದ್ದ ಹಾಗೆ, ಅವರ ಕೈಗೆ 'ಬುದ್ಧಿವಂತ' ಉಪೇಂದ್ರ ಒಂದು ಎನ್ವೆಲಪ್ ಇಟ್ಟರು. ಅದರಲ್ಲಿ ಏನಿತ್ತು ಗೊತ್ತಾ.?

  2000 ರೂಪಾಯಿ ನೋಟು.!

  2000 ರೂಪಾಯಿ ನೋಟು.!

  ಹೌದು, ಪ್ರಿಯಾಂಕಾ ಉಪೇಂದ್ರ ರವರ 39ನೇ ಹುಟ್ಟುಹಬ್ಬಕ್ಕೆ ಪತಿ ಉಪೇಂದ್ರ ಕೊಟ್ಟ ಬೊಂಬಾಟ್ ಉಡುಗೊರೆ ಇದೇ...2000 ರೂಪಾಯಿ ಮುಖಬೆಲೆಯ ಹೊಸ ನೋಟು.!

  ಪ್ರಿಯಾಂಕಾಗೆ ಆಶ್ಚರ್ಯ.!

  ಪ್ರಿಯಾಂಕಾಗೆ ಆಶ್ಚರ್ಯ.!

  ಎನ್ವೆಲಪ್ ಕವರ್ ಒಳಗೆ ಹೊಸ ಕರೆನ್ಸಿ (2000) ನೋಟು ನೋಡಿ ಪ್ರಿಯಾಂಕಾ ಉಪೇಂದ್ರ ಪಟ್ಟ ಅಚ್ಚರಿ ಅಷ್ಟಿಷ್ಟಲ್ಲ.

  ಉಪೇಂದ್ರ ಐಡಿಯಾ ಏನು.?

  ಉಪೇಂದ್ರ ಐಡಿಯಾ ಏನು.?

  ''ಕ್ಯೂ ನಲ್ಲಿ ನಿಲ್ಲದೇ, ಪ್ರಿಯಾಂಕಾಗೆ ಹೊಸ ನೋಟು ಸಿಕ್ಕಿದೆ. ಹೀಗಾಗಿ ಇದು ಅವರಿಗೆ ಸ್ಪೆಷಲ್ ಗಿಫ್ಟ್'' ಎನ್ನುತ್ತಾರೆ ರಿಯಲ್ ಸ್ಟಾರ್ ಉಪೇಂದ್ರ.

  ಪ್ರಿಯಾಂಕಾ ಉಪೇಂದ್ರ ಏನಂದರು.?

  ಪ್ರಿಯಾಂಕಾ ಉಪೇಂದ್ರ ಏನಂದರು.?

  ''ಉಪ್ಪಿ ಹಾಗೇ ಈ ಗಿಫ್ಟ್ ಕೂಡ ತುಂಬಾ ಸ್ಪೆಷಲ್. ಉಪೇಂದ್ರ ಆಲೋಚನೆ ಅದ್ಭುತ ಎನ್ನುವುದಕ್ಕೆ ಇದೇ ಸಾಕ್ಷಿ. ಪ್ರತಿ ಬಾರಿ ಹೀಗೆ ಏನಾದರೂ ಒಂದು ಸರ್ ಪ್ರೈಸ್ ಕೊಡ್ತಾನೇ ಇರ್ತಾರೆ'' ಅಂತಾರೆ ಪ್ರಿಯಾಂಕಾ ಉಪೇಂದ್ರ.

  ಇಂತಹ ಪತಿ ಯಾರಿಗುಂಟು ಯಾರಿಗಿಲ್ಲ!

  ಇಂತಹ ಪತಿ ಯಾರಿಗುಂಟು ಯಾರಿಗಿಲ್ಲ!

  ಪತ್ನಿಗೆ ಹೊಸ ಕರೆನ್ಸಿ ಗಿಫ್ಟ್ ಮಾಡಿ ಬ್ಯಾಂಕ್/ಎ.ಟಿ.ಎಂ ಮುಂದೆ ಗಂಟೆಗಟ್ಟಲೆ ಕ್ಯೂನಲ್ಲಿ ನಿಲ್ಲುವುದನ್ನ ಉಪೇಂದ್ರ ತಪ್ಪಿಸಿದ್ದಾರೆ. ಹೀಗಾಗಿ ಈ ಗಿಫ್ಟ್ ತುಂಬಾ 'ಅಮೂಲ್ಯ'ವಾದದ್ದೇ.!

  ಮೋದಿ ನಡೆಗೆ ಉಪೇಂದ್ರ ಪ್ರಶಂಸೆ

  ಮೋದಿ ನಡೆಗೆ ಉಪೇಂದ್ರ ಪ್ರಶಂಸೆ

  ''ಮೋದಿ ರವರ ನಡೆ ಪ್ರಶಂಸನೀಯ. ಒಳ್ಳೆಯ ದಿನಗಳು ಬಂದ್ವು'' ಅಂತ ರಿಯಲ್ ಸ್ಟಾರ್ ಉಪೇಂದ್ರ ಟ್ವೀಟ್ ಕೂಡ ಮಾಡಿದ್ದರು.

  English summary
  Real Star Upendra gifted Rs.2000 Currency Note for his wife Priyanka Upendra on her 39th Birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X