For Quick Alerts
  ALLOW NOTIFICATIONS  
  For Daily Alerts

  ಹುಟ್ಟುಹಬ್ಬದಂದೇ 'ಉಗ್ರಾವತಾರ' ತಾಳಿದ ಉಪೇಂದ್ರ ಪತ್ನಿ ಪ್ರಿಯಾಂಕಾ

  |

  ಪ್ರಿಯಾಂಕಾ ಉಪೇಂದ್ರ ವಿವಾಹದ ಬಳಿಕವೂ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಒಂದಿಷ್ಟು ದಿನ ಮಕ್ಕಳು ಕುಟುಂಬ ಅಂತ ಬ್ರೇಕ್ ತೆಗೆದುಕೊಂಡಿದ್ದ ಪ್ರಿಯಾಂಕಾ ಉಪೇಂದ್ರ ಬಳಿಕ ನಿರಂತರವಾಗಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬಹುತೇಕ ಮಹಿಳಾ ಪ್ರಧಾನ ಚಿತ್ರಗಳಲ್ಲೇ ಹೆಚ್ಚಾಗಿ ನಟಿಸುತ್ತಿರುವ ಬೆಂಗಾಲಿ ಬೆಡಗಿಗೆ ಬೇಡಿಕೆಯೇನು ಕಮ್ಮಿಯಾಗಿಲ್ಲ. ವರ್ಷಕ್ಕೆ ಕಡಿಮೆ ಅಂದರೂ ಎರಡು ಸಿನಿಮಾಗಳು ಸೆಟ್ಟೇರುತ್ತವೆ.

  ಉಗ್ರಾವತಾರ' ತಾಳಿದ ನಟಿ ಪ್ರೀಯಾಂಕ ಉಪೇಂದ್ರ

  ಪ್ರಿಯಾಂಕಾ ಉಪೇಂದ್ರ ಪ್ರಪಂಚ ಅಂದ್ರೆ ಸಿನಿಮಾ, ಪತಿ, ಮನೆ, ಮಕ್ಕಳು. ಕತೆ ತನಗೆ ಇಷ್ಟ ಆಯ್ತು ಅಂದ್ರೆ, ಆ ಸಿನಿಮಾ ಒಪ್ಪಿಕೊಂಡು ನಟಿಸುತ್ತಾರೆ. ಪತಿನೇ ಅತ್ಯದ್ಭುತ ನಿರ್ದೇಶಕ ಆಗಿರುವುದರಿಂದ ಸಿನಿಮಾ ಆಯ್ಕೆ ವಿಚಾರದಲ್ಲಿ ಹೆಚ್ಚು ಗೊಂದಲಕ್ಕೆ ಒಳಗಾಗಬೇಕಿಲ್ಲ. ಹೀಗಾಗಿ ಪ್ರಿಯಾಂಕಾ ಉಪೇಂದ್ರಗೆ ಸಿನಿಮಾಗಳ ಆಯ್ಕೆ ಸಲೀಸು. ಇಂದು ( ನವೆಂಬರ್ 12) 44ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇದೇ ಸಂಭ್ರಮದಲ್ಲಿ ಪ್ರಿಯಾಂಕಾ ಉಪೇಂದ್ರ 'ಉಗ್ರಾವತಾರ' ತಾಳಿರುವುದು ವಿಶೇಷ.

  ಬರ್ತ್‌ಡೇ ಮೂಡ್‌ನಲ್ಲಿರಬೇಕಿದ್ದ ಪ್ರಿಯಾಂಕಾ 'ಉಗ್ರಾವತಾರ'

  ಬರ್ತ್‌ಡೇ ಮೂಡ್‌ನಲ್ಲಿರಬೇಕಿದ್ದ ಪ್ರಿಯಾಂಕಾ 'ಉಗ್ರಾವತಾರ'

  ಬೆಂಗಾಲಿ ನಟಿ, ಕರ್ನಾಟಕದ ಸೊಸೆ ಪ್ರಿಯಾಂಕಾ ಇಂದು (ನವೆಂಬರ್ 12) 44ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಪತಿ ಉಪ್ಪಿ, ಅತ್ತೆ-ಮಾವನೊಂದಿಗೆ ಕೇಕ್ ಕತ್ತರಿಸಿ ಬರ್ತ್‌ಡೇ ಆಚರಿಸಿಕೊಂಡಿದ್ದಾರೆ. ಈ ಖುಷಿಯ ಸಂದರ್ಭದಲ್ಲಿ ಪ್ರಿಯಾಂಕಾ 'ಉಗ್ರಾವತಾರ' ತಾಳಿದ್ದಾರೆ. ಅಂದ್ಹಾಗೆ, 'ಉಗ್ರಾವತಾರ' ಅವರ ಹೊಸ ಸಿನಿಮಾದ ಹೆಸರು. ಇಡೀ ಚಿತ್ರತಂಡ ಪ್ಲ್ಯಾನ್ ಮಾಡಿ ಪ್ರಿಯಾಂಕಾ ಬರ್ತ್‌ಡೇ ದಿನವೇ ಟೀಸರ್ ಲಾಂಚ್ ಮಾಡಿದ್ದಾರೆ. ಈ ಮೂಲಕ ತಮ್ಮ ಸಿನಿಮಾದ ನಾಯಕಿಗೆ ಉಡುಗೊರೆಯನ್ನು ನೀಡಿದೆ.

  ಪ್ರಿಯಾಂಕಾ ಉಪೇಂದ್ರ ಖಡಕ್ ಪೊಲೀಸ್ ಆಫೀಸರ್

  ಪ್ರಿಯಾಂಕಾ ಉಪೇಂದ್ರ ಖಡಕ್ ಪೊಲೀಸ್ ಆಫೀಸರ್

  ಪ್ರಿಯಾಂಕಾ ಉಪೇಂದ್ರ ಯಾವಾಗಲೂ ವಿಶಿಷ್ಟ ಕಥೆ ಹಾಗೂ ಪಾತ್ರಗಳನ್ನು ಹುಡುಕಿಕೊಂಡು ಹೋಗುತ್ತಾರೆ. ಕತೆಯ ಆಯ್ಕೆ ಮಾಡಿಕೊಳ್ಳುವುದರಲ್ಲಿ ಪ್ರಿಯಾಂಕಾಗೆ ಅನುಭವವಿದೆ. ಹೀಗಾಗಿ 'ಉಗ್ರಾವತಾರ' ಇವರಿಗೆ ಸ್ಪೆಷಲ್ ಸಿನಿಮಾ. ಉಗ್ರಾವತಾರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಇದು ಪ್ಯಾನ್ ಇಂಡಿಯಾ ಸಿನಿಮಾ. ಮಹಿಳಾ ಪ್ರಧಾನ ಸಿನಿಮಾವೊಂದು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ ಆಗಲಿದೆ. ಗುರುಮೂರ್ತಿ ಉಗ್ರಾವತಾರವನ್ನು ನಿರ್ದೇಶಿಸಿದ್ದು, ಸಿನಿಮಾದ ಟೀಸರ್ ಈಗಾಗಲೇ ಕುತೂಹಲ ಕೆರಳಿಸಿದೆ.

  ಸಾಲು ಸಾಲು ಸಿನಿಮಾ ಬಿಡುಗಡೆಗೆ ಬಾಕಿ ಇದೆ

  ಸಾಲು ಸಾಲು ಸಿನಿಮಾ ಬಿಡುಗಡೆಗೆ ಬಾಕಿ ಇದೆ

  ಪ್ರಿಯಾಂಕಾ ಉಪೇಂದ್ರ ನಟಿಸಿದ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಕಾದು ಕೂತಿದೆ. ಹುಟ್ಟುಹಬ್ಬದಂದು ಟೀಸರ್ ಲಾಂಚ್ ಆಗಿರುವ ಸಿನಿಮಾ ಉಗ್ರಾವತಾರ ಬಿಡುಗಡೆಗೆ ರೆಡಿಯಾಗಿದ್ದರೆ, 'ಸೇಂಟ್ ಮಾರ್ಕ್ಸ್ ರೋಡ್‌', 'ಲೈಫ್ ಈಸ್ ಬ್ಯೂಟಿಫುಲ್', 'ಕೈಮರ' ಸಿನಿಮಾಗಳು ರಿಲೀಸ್ ಆಗ್ಬೇಕಿದೆ. ಇತ್ತೀಚೆಗಷ್ಟೇ ಸರ್ಕಾರಿ ಶಾಲೆಗಳನ್ನು ಉಳಿಸುವ ವಿಶಿಷ್ಟ ಕಥೆ ಹೊಂದಿರುವ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಮಿಸ್ ನಂದಿನಿ ಅನ್ನುವ ಟೈಟಲ್ ಫಿಕ್ಸ್ ಆಗಿದ್ದು, ಇತ್ತೀಚೆಗೆ ಸೆಟ್ಟೇರಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಈ ಸಿನಿಮಾ ಮುಹೂರ್ತದಂದು ಕ್ಲಾಪ್ ಮಾಡಿ, ಶುಭ ಹಾರೈಸಿದ್ದರು. ಇಷ್ಟೇ ಅಲ್ಲದೆ ಇನ್ನೂ ಕೆಲವು ಸಿನಿಮಾಗಳು ಮಾತುಕಥೆಯ ಹಂತದಲ್ಲಿದ್ದು, ಉಪ್ಪಿಯಷ್ಟೇ ಪತ್ನಿ ಪ್ರಿಯಾಂಕಾ ಉಪೇಂದ್ರ ಕೂಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  ಉಪ್ಪಿ ನಿರ್ದೇಶಿಸಲಿರುವ ಸಿನಿಮಾ ಬಗ್ಗೆ ಹೆಚ್ಚಿದ ಕುತೂಹಲ

  ಉಪ್ಪಿ ನಿರ್ದೇಶಿಸಲಿರುವ ಸಿನಿಮಾ ಬಗ್ಗೆ ಹೆಚ್ಚಿದ ಕುತೂಹಲ

  ಪ್ರಿಯಾಂಕಾ ಉಪೇಂದ್ರ ಪ್ಯಾನ್ ಇಂಡಿಯಾ ಸಿನಿಮಾ ಉಗ್ರಾವತಾರ ಬಿಡುಗಡೆಗೆ ರೆಡಿಯಾಗಿದೆ. ಅದೇ ಇನ್ನೊಂದು ಕಡೆ ಉಪ್ಪಿ ನಿರ್ದೇಶಿಸಬೇಕಿರುವ ಮೂರು ನಾಮದ ಸಿಂಬಲ್ ಹೊಂದಿರುವ ಸಿನಿಮಾ ಯಾವಾಗ ಶುರುವಾಗುತ್ತೋ ಅಂತ ಕಾದು ಕೂತಿದ್ದಾರೆ. ಟೈಟಲ್‌ನಿಂದಲೇ ಕುತೂಹಲ ಕೆರಳಿಸುವ ಉಪೇಂದ್ರ, ಶೀರ್ಷಿಕೆಯಲ್ಲೇ ಹಲವು ಅರ್ಥಗಳನ್ನೂ ಇಟ್ಟಿರುತ್ತಾರೆ. ಹೀಗಾಗಿ ಈ ಮೂರು ನಾಮದ ಸಿಂಬಲ್ ಯಾವಾಗ ಸೆಟ್ಟೇರುತ್ತೆ? ಉಪೇಂದ್ರ ಯಾವಾಗ ಸಿನಿಮಾ ಅನೌನ್ಸ್ ಮಾಡುತ್ತಾರೆ ಅನ್ನುವ ಕುತೂಹಲ ದುಪ್ಪಟ್ಟಾಗಿದೆ.

  English summary
  Priyanka Upendra celebreting her 44th brithday on november 12th. In this occasion her new pan India film Ugravathara lunched.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X