»   » ಕನ್ನಡದ 'ಮಮ್ಮಿ-2' ಶುರು ಯಾವಾಗ.? ಪ್ರಿಯಾಂಕಾ ಉಪೇಂದ್ರ ಏನ್ಮಾಡ್ತಿದ್ದಾರೆ.?

ಕನ್ನಡದ 'ಮಮ್ಮಿ-2' ಶುರು ಯಾವಾಗ.? ಪ್ರಿಯಾಂಕಾ ಉಪೇಂದ್ರ ಏನ್ಮಾಡ್ತಿದ್ದಾರೆ.?

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಮುದ್ದು ಮಡದಿ ಪ್ರಿಯಾಂಕಾ ಉಪೇಂದ್ರ ಏಳು ತಿಂಗಳ ತುಂಬು ಗರ್ಭಿಣಿ ಪಾತ್ರದಲ್ಲಿ ಅಭಿನಯಿಸಿದ 'ಮಮ್ಮಿ ಸೇವ್ ಮಿ' ಸಿನಿಮಾ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣ್ತು. ನಿರ್ದೇಶಕ ಲೋಹಿತ್ ಚೊಚ್ಚಲ ಬಾರಿಗೆ ಆಕ್ಷನ್ ಕಟ್ ಹೇಳಿದ ಈ ಚಿತ್ರ ಭರ್ಜರಿ 50 ದಿನಗಳನ್ನ ಪೂರೈಸಿತು. ಅಷ್ಟರಮಟ್ಟಿಗೆ, ಹಾರರ್ ಚಿತ್ರವಾಗಿದ್ದ 'ಮಮ್ಮಿ ಸೇವ್ ಮಿ' ಕನ್ನಡ ಪ್ರೇಕ್ಷಕರನ್ನ ಗಡಗಡ ನಡುಗಿಸುವಲ್ಲಿ ಯಶಸ್ವಿ ಆಯ್ತು.[ವಿಮರ್ಶೆ: ಗುಂಡಿಗೆ ಗಟ್ಟಿ ಮಾಡಿಕೊಂಡು ಮಿಸ್ ಮಾಡದೇ 'ಮಮ್ಮಿ' ನೋಡಿ]

'ಮಮ್ಮಿ ಸೇವ್ ಮಿ' ಯಶಸ್ವಿ ಆಗುತ್ತಿದ್ದಂತೆಯೇ, ಅದರ ಮುಂದುವರಿದ ಭಾಗ 'ಮಮ್ಮಿ-2' ಚಿತ್ರ ತಯಾರು ಮಾಡುವುದಾಗಿ ಚಿತ್ರತಂಡ ಘೋಷಿಸಿತು. ಹಾಗಾದ್ರೆ, 'ಮಮ್ಮಿ-2' ಸಿನಿಮಾ ಸೆಟ್ಟೇರುವುದು ಯಾವಾಗ.? ಈ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿರಿ....

ಪ್ರಿಯಾಂಕಾ ಉಪೇಂದ್ರ ಬಿಜಿ

'ಮಮ್ಮಿ ಸೇವ್ ಮಿ' ಚಿತ್ರದ ನಂತರ ಯೋಗಿ ಎಂಬುವರು ನಿರ್ದೇಶನ ಮಾಡುತ್ತಿರುವ ಇನ್ನೂ ಹೆಸರಿಡದ ಚಿತ್ರದಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಅಭಿನಯಿಸುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಮುಗಿದ ನಂತರ ಲೋಹಿತ್ ಆಕ್ಷನ್ ಕಟ್ ಹೇಳಲಿರುವ ಚಿತ್ರಕ್ಕೆ ಪ್ರಿಯಾಂಕಾ ಉಪೇಂದ್ರ ಕಾಲ್ ಶೀಟ್ ನೀಡಲಿದ್ದಾರೆ.[ವೀರೇಶ್ ಚಿತ್ರಮಂದಿರದಲ್ಲಿ ಸತತ ಹೌಸ್ ಫುಲ್ ಬೋರ್ಡ್ ಬಿದ್ದಿದ್ದು ಈ ಚಿತ್ರಕ್ಕೆ.!]

ಲೋಹಿತ್ ಜೊತೆಗೆ ಪ್ರಿಯಾಂಕಾ ಎರಡು ಸಿನಿಮಾ

'ಮಮ್ಮಿ ಸೇವ್ ಮಿ' ನಿರ್ದೇಶಕ ಲೋಹಿತ್ ಜೊತೆಗೆ ಎರಡು ಸಿನಿಮಾ ಮಾಡಲು ಪ್ರಿಯಾಂಕಾ ಉಪೇಂದ್ರ ಒಪ್ಪಿಕೊಂಡಿದ್ದಾರೆ. ಅದರಲ್ಲಿ 'ಮಮ್ಮಿ-2' ಚಿತ್ರ ಕೂಡ ಒಂದು.

ಮತ್ತೊಂದು ಸಿನಿಮಾ ಯಾವುದು.?

ಲೋಹಿತ್ ನಿರ್ದೇಶನದ ಹಾರರ್ ಅಲ್ಲದ ಮತ್ತೊಂದು ಚಿತ್ರದಲ್ಲಿ ನಟಿಸಲು ಪ್ರಿಯಾಂಕಾ ಗ್ರೀನ್ ಸಿಗ್ನಲ್ ನೀಡಿದ್ದಾರೆ.

'ಮಮ್ಮಿ-2' ಶುರು ಯಾವಾಗ.?

ವರದಿಗಳ ಪ್ರಕಾರ, ಈ ವರ್ಷಾಂತ್ಯಕ್ಕೆ 'ಮಮ್ಮಿ-2' ಸಿನಿಮಾ ಸೆಟ್ಟೇರಲಿದೆ. ಇನ್ನೂ ಇಂಟ್ರೆಸ್ಟಿಂಗ್ ಅಂದ್ರೆ, ಉಪೇಂದ್ರ ರವರ 50ನೇ ಚಿತ್ರದ ಮುಹೂರ್ತ ಉಪ್ಪಿ ಹುಟ್ಟುಹಬ್ಬದಂದು ನೆರವೇರಲಿದೆ. ಆ ಚಿತ್ರದ ಪ್ರೀ-ಪ್ರೊಡಕ್ಷನ್ ವರ್ಕ್ ನಲ್ಲೂ ಪ್ರಿಯಾಂಕಾ ತೊಡಗಿದ್ದಾರೆ.

English summary
Priyanka Upendra starrer Lohit Directorial 'Mummy 2' to go on floors by the end of 2017.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada