»   » ಯುವ ನಿರ್ದೇಶಕನ ಪ್ರಯೋಗಕ್ಕೆ ಬೆಚ್ಚಿಬಿದ್ದ ಗಾಂಧಿನಗರ.!

ಯುವ ನಿರ್ದೇಶಕನ ಪ್ರಯೋಗಕ್ಕೆ ಬೆಚ್ಚಿಬಿದ್ದ ಗಾಂಧಿನಗರ.!

Posted By:
Subscribe to Filmibeat Kannada

ಗಾಂಧಿನಗರದಲ್ಲಿ ಈಗ ಹೊಸಬರದ್ದೇ ಹವಾ. ಅದರಲ್ಲೂ ಹಾರರ್ ಚಿತ್ರಗಳದ್ದೇ ಕಾಲ. ಯುವ ನಿರ್ದೇಶಕರು ತಯಾರು ಮಾಡಿದ್ದ 'ರಂಗಿತರಂಗ', 'ಕರ್ವ' ಸೇರಿದಂತೆ ಹಲವಾರು ಸಸ್ಪೆನ್ಸ್-ಥ್ರಿಲ್ಲರ್ ಚಿತ್ರಗಳು ಸ್ಯಾಂಡಲ್ ವುಡ್ ನಲ್ಲಿ ಹೊಸ ಸಂಚಲನ ಹುಟ್ಟು ಹಾಕಿತ್ತು. ಈಗ ಅದೇ ಪಟ್ಟಿಗೆ ಸೇರ್ಪಡೆ ಆಗುತ್ತಿರುವ ಹೊಸ ಸಿನಿಮಾ 'ಮಮ್ಮಿ....ಸೇವ್ ಮಿ'.

ಪ್ರಿಯಾಂಕಾ ಉಪೇಂದ್ರ ಮತ್ತು ಪುಟಾಣಿ ಯುವಿನಾ ಪಾರ್ಥವಿ ಅಭಿನಯದ ಹಾರರ್ ಸಿನಿಮಾ 'ಮಮ್ಮಿ....ಸೇವ್ ಮಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿರುವುದು ಯುವ ನಿರ್ದೇಶಕ ಲೋಹಿತ್.ಎಚ್. ['ಮಮ್ಮಿ' ಆದ ಪ್ರಿಯಾಂಕಾ ಉಪೇಂದ್ರ ಜೊತೆ ಸಣ್ಣ ಮಾತುಕತೆ]

priyanka-upendra-starrer-mummy-save-me-crosses-1-lakh-views-in-youtube

ನೈಜ ಘಟನೆಯನ್ನು ಆಧರಿಸಿ, ಫ್ರೇಮ್ ಟು ಫ್ರೇಮ್ ಬೆಚ್ಚಿ ಬೀಳುವ ರೀತಿಯಲ್ಲಿ ಕಥೆ ಹೆಣೆದಿರುವ ಇನ್ನೂ ಇಪ್ಪತ್ತೆರಡರ ಹರೆಯದ ಲೋಹಿತ್.ಎಚ್, ನಟಿ ಪ್ರಿಯಾಂಕಾ ಉಪೇಂದ್ರ ರವರ ಮನಸ್ಸು ಗೆದ್ದಿದ್ದಾರೆ.

ಪ್ರಿಯಾಂಕಾ ಉಪೇಂದ್ರ ಮಾತ್ರ ಅಲ್ಲ, ಲೋಹಿತ್ ರವರ ಕೈಚಳಕದ ಝಲಕ್ ಇರುವ 'ಮಮ್ಮಿ...ಸೇವ್ ಮಿ' ಟ್ರೈಲರ್ ನೋಡಿ ಅಕ್ಷರಶಃ ಗಾಂಧಿನಗರ ಬೆಚ್ಚಿಬಿದ್ದಿದೆ. ಸಿನಿ ಪ್ರಿಯರಂತೂ ಚಪ್ಪಾಳೆ ಹೊಡೆದಿದ್ದಾರೆ. [ಸಖತ್ ಥ್ರಿಲ್ಲಿಂಗ್ ಆಗಿದೆ 'ಮಮ್ಮಿ-ಸೇವ್ ಮಿ' ಟ್ರೈಲರ್]

priyanka-upendra-starrer-mummy-save-me-crosses-1-lakh-views-in-youtube

ಕೆಲವೇ ದಿನಗಳ ಹಿಂದೆ ಬಿಡುಗಡೆ ಆಗಿದ್ದ 'ಮಮ್ಮಿ....ಸೇವ್ ಮಿ' ಟ್ರೈಲರ್ ಯೂಟ್ಯೂಬ್ ನಲ್ಲಿ ಹಿಟ್ ಆಗಿದೆ. ಇಲ್ಲಿಯವರೆಗೂ ಬರೋಬ್ಬರಿ ಒಂದು ಲಕ್ಷದ ಮೂವತ್ನಾಲ್ಕು ಸಾವಿರಕ್ಕೂ ಅಧಿಕ ಮಂದಿ ಯೂಟ್ಯೂಬ್ ನಲ್ಲಿ 'ಮಮ್ಮಿ....ಸೇವ್ ಮಿ' ಟ್ರೈಲರ್ ವೀಕ್ಷಿಸಿದ್ದಾರೆ.

ಗಂಡನನ್ನು ಕಳೆದುಕೊಂಡಿರುವ ಏಳು ತಿಂಗಳ ಗರ್ಭಿಣಿ ಹಾಗೂ ಪುಟ್ಟ ಮಗು ಅಗೋಚರ ಶಕ್ತಿಗಳ ನಡುವೆ ನಡುಗುವ ಕಥೆ 'ಮಮ್ಮಿ...ಸೇವ್ ಮಿ'. ಆಗಸ್ಟ್ ಕೊನೆಯ ವಾರ 'ಮಮ್ಮಿ...ಸೇವ್ ಮಿ' ಬಿಡುಗಡೆ ಆಗಲಿದೆ.

ನೀವಿನ್ನೂ ಟ್ರೈಲರ್ ನೋಡಿಲ್ಲ ಅಂದ್ರೆ, ಈಗ ಮಿಸ್ ಮಾಡ್ಬೇಡಿ....

English summary
Kannada Actress Priyanka Upendra and Yuvina Parthavi starrer Kannada Movie 'Mummy Save Me' has crossed 1 lakh views in YouTube. The movie is Directed by Lohith and produced by K.Ravikumar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada