For Quick Alerts
  ALLOW NOTIFICATIONS  
  For Daily Alerts

  ಮತ್ತೆ ತೆರೆಯ ಮೇಲೆ ಒಂದಾಗ್ತಾರಾ ಕುಚಿಕು ಗೆಳೆಯರು.?

  By Suneetha
  |

  ಬಾಕ್ಸಾಫೀಸ್ ಸುಲ್ತಾನ ದರ್ಶನ್ ಅವರು 'ಚಕ್ರವರ್ತಿ' ಎಂಬ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ ಎಂಬ ವಿಷಯ ಎಲ್ಲರಿಗೂ ಗೊತ್ತೇ ಇದೆ. ಈ ಚಿತ್ರದಲ್ಲಿ ದರ್ಶನ್ ಅವರಿಗೆ ನಾಯಕಿಯಾಗಿ ದಕ್ಷಿಣ ಭಾರತದ ಖ್ಯಾತ ನಟಿ ಅಂಜಲಿ ಅವರು ಕಾಣಿಸಿಕೊಳ್ಳುತ್ತಾರೆ ಎಂಬ ವಿಚಾರವನ್ನು ನಾವು ನಿಮಗೆ ಇದೇ ಫಿಲ್ಮಿಬೀಟಲ್ಲಿ ಹೇಳಿದ್ವಿ.

  ಇದೀಗ ಈ ಚಿತ್ರತಂಡದಿಂದ ಹೊರಬಿದ್ದಿರುವ ಖಾಸ್ ಖಬರ್ ಏನಪ್ಪಾ ಅಂದ್ರೆ ಈ ಚಿತ್ರದಲ್ಲಿ ದರ್ಶನ್ ಅವರ ಜೊತೆ ಅವರ ಖಾಸ ದೋಸ್ತ್ ನಟ 'ಡೆಡ್ಲಿ' ಆದಿತ್ಯ ಅವರು ಮಿಂಚಲಿದ್ದಾರೆ ಅನ್ನೋ ಮಾಹಿತಿ ಹೊರಬಿದ್ದಿದೆ. ಮಾತ್ರವಲ್ಲದೇ ಇದೇ ತಿಂಗಳು 24 ರಂದು ಸಿನಿಮಾ ಸೆಟ್ಟೇರಿ ಶೂಟಿಂಗ್ ಆರಂಭವಾಗಲಿದೆ.[ದರ್ಶನ್ ಅವರ 'ಚಕ್ರವರ್ತಿ' ಚಿತ್ರದ ನಾಯಕಿ ಇವರೇ]

  ಅಂದಹಾಗೆ ಈ ಚಿತ್ರಕ್ಕೆ ನಿರ್ಮಾಪಕ ಅನಜಿ ನಾಗರಾಜ್ ಅವರು ಬಂಡವಾಳ ಹೂಡಲಿದ್ದಾರೆ. ಈ ಮೊದಲು ನಿರ್ಮಾಪಕ ಸತ್ಯ (ಸತ್ಯಪ್ರಕಾಶ್) ಅವರು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ ಎಂದಾಗಿತ್ತು. ಇದೀಗ ಕೆಲವು ಬದಲಾವಣೆಗಳಿಂದ ಹಾಗೂ ಕೆಲವು ಕಾರಣಗಳಿಂದ ಚಿತ್ರಕ್ಕೆ 'ಸ್ನೇಹನಾ ಪ್ರೀತಿನಾ' ಖ್ಯಾತಿಯ ನಿರ್ಮಾಪಕ ಅನಜಿ ನಾಗರಾಜ್ ಬಂಡವಾಳ ಹೂಡುತ್ತಿದ್ದಾರೆ.[ಹೊಸ ಅವತಾರ ಎತ್ತಿದ ಚಾಲೆಂಜಿಂಗ್ ಸ್ಟಾರ್ ದರ್ಶನ್]

  ದರ್ಶನ್ ಮತ್ತು ಆದಿತ್ಯ ಅವರು ಈ ಮೊದಲು 'ಸ್ನೇಹನಾ ಪ್ರೀತಿನಾ' ಚಿತ್ರದಲ್ಲಿ ಒಂದಾಗಿ ತೆರೆ ಹಂಚಿಕೊಂಡಿದ್ದರು. ಇದೀಗ ನವ ನಿರ್ದೇಶಕ ಚಿಂತನ್ ಅವರು ಆಕ್ಷನ್-ಕಟ್ ಹೇಳುತ್ತಿರುವ 'ಚಕ್ರವರ್ತಿ' ಚಿತ್ರದಲ್ಲಿ ಕೂಡ ದರ್ಶನ್ ಮತ್ತು ಆದಿತ್ಯ ಕಮಾಲ್ ಮಾಡುತ್ತಾರ ಅಂತ ಕಾದು ನೋಡಬೇಕಿದೆ.['ಡೆಡ್ಲಿ' ಆದಿತ್ಯರ 'ಬೆಂಗಳೂರು ಅಂಡರ್ ವರ್ಲ್ಡ್'ಗೆ ದರ್ಶನ್ ಸಾಥ್]

  ಈಗಾಗಲೇ 'ಚಕ್ರವರ್ತಿ' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದ್ದು, ಭಾರಿ ರೆಸ್ಪಾನ್ಸ್ ಕೂಡ ಗಿಟ್ಟಿಸಿಕೊಂಡಿದೆ. ಈ ಚಿತ್ರದಲ್ಲಿ ದರ್ಶನ್ ಅವರು ವಿಭಿನ್ನ ಲುಕ್ ನಲ್ಲಿ ಮಿಂಚಲಿದ್ದು, ಭೂಗತ ಲೋಕದ ಕಥೆಯನ್ನು ಈ ಸಿನಿಮಾದಲ್ಲಿ ಎಳೆ-ಎಳೆಯಾಗಿ ಬಿಚ್ಚಿಡಲು ನಿರ್ದೇಶಕ ಚಿಂತನ್ ಅವರು ಪ್ಲ್ಯಾನ್ ಮಾಡುತ್ತಿದ್ದಾರೆ.

  English summary
  'Snehana Preethina' movie fame Producer Anaji Nagaraj has taken over Darshan's upcoming 'Chakravathy' and the film is all set to be launched on the 24th of this month. The movie is directed by Chintan. Sources said Actor Aditya will be acting in this film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X