For Quick Alerts
  ALLOW NOTIFICATIONS  
  For Daily Alerts

  ಮಗನನ್ನು ಹೀರೋ ಆಗಿ ಲಾಂಚ್ ಮಾಡಿದ 'ಜೋಗಿ' ನಿರ್ಮಾಪಕ

  |

  'ಜೋಗಿ' ಸಿನಿಮಾದ ನಿರ್ಮಾಪಕ ಅಶ್ವಿನಿ ರಾಮ್ ಪ್ರಸಾದ್ ತಮ್ಮ ಪುತ್ರನನ್ನು ಲಾಂಚ್ ಮಾಡಿದ್ದಾರೆ. ಅಶ್ವಿನಿ ರಾಮ್ ಪ್ರಸಾದ್ ಮಗ ಅರುಣ್ ರಾಮ್ ಪ್ರಸಾದ್ ಹೀರೋ ಆಗಿ ಚಿತ್ರರಂಗಕ್ಕೆ ಬಂದಿದ್ದಾರೆ.

  ನಿನ್ನೆ (ಫೆಬ್ರವರಿ 20) ಅದ್ದೂರಿ ಕಾರ್ಯಕ್ರಮದ ಮೂಲಕ ಅರುಣ್ ರಾಮ್ ಪ್ರಸಾದ್ ಲಾಂಚ್ ಆಗಿದ್ದಾರೆ. 'ಫಾರ್ಗಾ' ಅವರ ಮೊದಲ ಸಿನಿಮಾವಾಗಿದೆ. ಚಿತ್ರದಲ್ಲಿ ಒಬ್ಬ ಕಾದಂಬರಿಕಾರನ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಎಂ ಶಶಿ ಪ್ರಸಾದ್ ಸಿನಿಮಾದ ನಿರ್ದೇಶನ ಮಾಡಿದ್ದಾರೆ.

  12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಚಿತ್ರಗಳ ಪಟ್ಟಿ12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಚಿತ್ರಗಳ ಪಟ್ಟಿ

  'ಫಾರ್ಗಾ' ಒಬ್ಬ ಖುಷಿ ಮುನಿಯ ಹೆಸರಾಗಿದ್ದು, ಆ ಹೆಸರನ್ನು ತಮ್ಮ ಸಿನಿಮಾಗೆ ನಿರ್ದೇಶಕರು ಇಟ್ಟಿದ್ದಾರೆ. ಸಿನಿಮಾದಲ್ಲಿ ಒಂದು ಊರಿನ ಹೆಸರು ಇದಾಗಿದೆ. ಇಲ್ಲಿ ಕಥೆಯೇ ಹೀರೋ ಎನ್ನುವ ನಿರ್ದೇಶಕರು ಸಸ್ಪೆನ್ಸ್, ಥಿಲ್ಲರ್, ಆಕ್ಷನ್ ಹೀಗೆ ಎಲ್ಲ ಅಂಶಗಳು ಹೊಂದಿರುವ ಕಥೆಯನ್ನು ಮಾಡಿಕೊಂಡಿದ್ದಾರಂತೆ.

  ಅರುಣ್ ರಾಮ್ ಪ್ರಸಾದ್ ನಟನೆಗೆ ಬೇಕಾದ ತಯಾರಿ ಮಾಡಿಕೊಂಡಿದ್ದಾರೆ. ಪುನೀತ್ ರಾಜ್ ಕುಮಾರ್, ದರ್ಶನ್, ಶಿವರಾಜ್ ಕುಮಾರ್ ಹೀಗೆ ಸ್ಟಾರ್ ನಟರನ್ನು ಮಾದರಿಯಾಗಿ ತೆಗೆದುಕೊಳ್ಳುವಂತೆ ತಂದೆಯಿಂದ ಸಲಹೆ ಸೂಚನೆ ಅವರಿಗೆ ಸಿಕ್ಕಿದೆ.

  'ಇದು ಬ್ಯಾರೆನೆ ಐತಿ': ಚುಟು ಚುಟು ನಂತರ ಮತ್ತೊಂದು ಜವಾರಿ ಹಾಡು'ಇದು ಬ್ಯಾರೆನೆ ಐತಿ': ಚುಟು ಚುಟು ನಂತರ ಮತ್ತೊಂದು ಜವಾರಿ ಹಾಡು

  ಸದ್ಯ, ಚಿತ್ರದ ಒಂದು ಲಿರಿಕಲ್ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಆಡಿಯೋ ಕಂಪನಿ ಮಾಲೀಕರು ಆಗಿರುವ ಕಾರಣ ಸಂಗೀತಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ. ರಾಘವಿ ಗೌಡ ಚಿತ್ರದ ನಾಯಕಿಯಾಗಿದ್ದಾರೆ. ನಟ, ನಟಿ ಹಾಗೂ ನಿರ್ದೇಶಕ ಮೂವರಿಗೂ ಇದು ಮೊದಲ ಪ್ರಯತ್ನವಾಗಿದೆ.

  English summary
  'Jogi' Producer Ashwini Ramprasad launched his son Arun from 'Gharga' movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X