For Quick Alerts
  ALLOW NOTIFICATIONS  
  For Daily Alerts

  ನವೀನ್ ಸಜ್ಜು 'ಏನ್ ಚಂದನೋ ತಕ್ಕೋ' ಹಾಡಿನ ವಿರುದ್ಧ ಗಂಭೀರ ಆರೋಪ

  |

  ಗಾಯಕ ನವೀನ್ ಸಜ್ಜು ಹಾಡಿರುವ 'ಏನ್ ಚಂದನೋ ತಕ್ಕೋ' ಹಾಡು ಇತ್ತೀಚಿಗಷ್ಟೆ ರಿಲೀಸ್ ಆಗಿದೆ. ಈ ಹಾಡು ರಿಲೀಸ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದರ ಜೊತೆಗೀಗ ಈ ವಿರುದ್ಧ ಗಂಭೀರ ಆರೋಪ ಕೂಡ ಕೇಳಿ ಬರುತ್ತಿದೆ.

  ಒಂದಾದ್ರು ಚಂದನ್ ಶೆಟ್ಟಿ, ನವೀನ್ ಸಜ್ಜು..! | FILMIBEAT KANNADA

  ಹೌದು, ಈ ಹಾಡಿನ ಮೂಲಕ ಒಕ್ಕಲಿಗರ ಸಮುದಾಯದ ಹೆಣ್ಣು ಮಕ್ಕಳನ್ನು ತೇಜೋವಧೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಹಾಗಾಗಿ ನವೀನ್ ಸಜ್ಜು ಕ್ಷಮೆ ಕೇಳಬೇಕು ಎಂದು ಒತ್ತಾಯ ಮಾಡಲಾತ್ತಿದೆ. ಈ ಹಾಡಿನ ವಿರುದ್ಧ ನಿರ್ಮಾಪಕ ಬಾಮಾ ಹರೀಶ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಆರೋಪ ಮಾಡಿದ್ದಾರೆ.

  ಹೀರೋ ಆದ 'ಬಿಗ್ ಬಾಸ್' ಖ್ಯಾತಿಯ ಗಾಯಕ ನವೀನ್ ಸಜ್ಜು

  "ನವೀನ್ ಸಜ್ಜು ಹಾಡಿರುವ 'ಏನ್ ಚಂದನೋ ತಕ್ಕೊ' ಹಾಡಿನಲ್ಲಿ ಒಕ್ಕಲಿಗರ ಮನೆಯ ಹೆಣ್ಣುಮಕ್ಕಳ ತೇಜೋವಧೆಯಾಗಿದ್ದು, ಹಾಡಿನಿಂದ ಇಡೀ ಒಕ್ಕಲಿಗ ಸಮುದಾಯಕ್ಕೆ ಅಪಮಾನವಾಗಿದೆ. ಈ ಕೂಡಲೇ, ಹಾಡನ್ನು ಸ್ಥಗಿತಗೊಳಿಸಿ, ಒಕ್ಕಲಿಗ ಸಮುದಾಯಕ್ಕೆ ಕ್ಷಮೆಯನ್ನು ಕೋರಬೇಕು. ಕಲಾ ಜಗತ್ತಿನಲ್ಲಿ ಯಾವುದೇ ಧರ್ಮ ಜಾತಿಗಳ ತೇಜೋವಧೆ ಆಗಬಾರದು. ಇಲ್ಲಿ ಕಲೆ ಮುಖ್ಯ" ಎಂದು ಬರೆದುಕೊಂಡಿದ್ದಾರೆ.

  ಆದ್ರೆ ಈ ಬಗ್ಗೆ ನವೀನ್ ಸಜ್ಜು "ನಾನೋಬ್ಬ ಗಾಯಕ ಅಷ್ಟೆ. ಇಲ್ಲಿ ಹೆಣ್ಣು ಮಕ್ಕಳ ತೇಜೋವಧೆ ಆಗಿಲ್ಲ. ಗೌಡ್ರು ಅಂದ್ರೆ ಕೇವಲ ಒಕ್ಕಲಿಗರಲ್ಲ. ಎಲ್ಲಾ ಸಮುದಾಯದಲ್ಲೂ ಗೌಡ್ರು ಇರುತ್ತಾರೆ. ಗೌಡ್ರು ಅಂದ್ರೆ ಮುಖ್ಯಸ್ಥ, ಯಜಮಾನ. ಸಿನಿಮಾದಲ್ಲಿ ಬರುವ ಒಂದು ದೃಶ್ಯದಲ್ಲಿ ಈ ಹಾಡು ಬರುತ್ತೆ. ಇಲ್ಲಿ ಯಾರಿಗೂ ಅವಮಾನ ಮಾಡುವ ಉದ್ದೇಶ ನಮಗಿಲ್ಲ" ಎಂದಿದ್ದಾರೆ

  ಅಂದ್ಹಾಗೆ ಇದು ಬಡ್ಡೀ ಮಗನ್ ಲೈಫು ಚಿತ್ರದ ಹಾಡಾಗಿದೆ. ಒಂದು ಹುಡುಗಿ ಲವ್ ಮಾಡಿ ಓಡೋದ್ರೆ ಅಕ್ಕ ಪಕ್ಕದ ಮನೆಯ ಹೆಂಗಸರು ಅದನ್ನು ಹೇಗೆ ಆಡಿಕೊಳ್ಳುತ್ತಾರೆ ಎನ್ನುವುದನ್ನು ಹಾಡಿನ ಮೂಲಕ ಹೇಳಲಾಗಿದೆ. ಈ ಹಾಡನ್ನು ನವೀನ್ ಸಜ್ಜು ಹಾಡಿದ್ರೆ, ನಿನಗಾಗಿ ವೀರು ಈ ಹಾಡನ್ನು ಬರೆದಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಬಡ್ಡೀ ಮಗನ್ ಲೈಫು ಚಿತ್ರಕ್ಕೆ ಪವನ್ ಪ್ರಸಾದ್ ಆಕ್ಷನ್ ಕಟ್ ಹೇಳಿದ್ದಾರೆ.

  English summary
  Producer Ba Ma Harish complaint against Singer Naveen Sajju new song.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X