For Quick Alerts
  ALLOW NOTIFICATIONS  
  For Daily Alerts

  'ಸ್ನೇಹಿತರು' ವಿರುದ್ಧ ತಿರುಗಿಬಿದ್ದ ಬಾ.ಮಾ. ಹರೀಶ್

  By Rajendra
  |

  ಇತ್ತೀಚೆಗಷ್ಟೇ ತೆರೆಕಂಡು ಪ್ರದರ್ಶನ ಕಾಣುತ್ತಿರುವ 'ಸ್ನೇಹಿತರು' ಚಿತ್ರದಲ್ಲಿ ತಮ್ಮನ್ನು ತೇಜೇವಧೆ ಮಾಡಲಾಗಿದೆ ಎಂದು ಕನ್ನಡ ಚಿತ್ರಗಳ ನಿರ್ಮಾಪಕ ಬಾ.ಮಾ.ಹರೀಶ್ ಆರೋಪಿಸಿದ್ದಾರೆ. ಈ ಸಂಬಂಧ ಅವರು ಚಲನಚಿತ್ರ ವಾಣಿಜ್ಯ ಮಂಡಳಿಗೆ ಗುರುವಾರ (ಅ.18) ದೂರು ನೀಡಿದರು.

  'ಸ್ನೇಹಿತರು' ಚಿತ್ರದಲ್ಲಿ ನನ್ನ ತರಹದ್ದೇ ಒಂದು ಪಾತ್ರವನ್ನು ಸೃಷ್ಟಿಸಲಾಗಿದೆ. ಪ್ರತಿಯೊಬ್ಬರಿಗೂ ಅವರದೇ ಆದಂತಹ ಮ್ಯಾನರಿಜಂ ಇರುತ್ತದೆ. ನನ್ನ ಮ್ಯಾನರಿಸಂನ್ನು ಅನುಕರಿಸಲಾಗಿದ್ದು, ಆ ಪಾತ್ರಕ್ಕೆ ಬಾಮ್ಮಾ ಹರೀಶ್ ಎಂದು ಕರೆದು ತೇಜೋವಧೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು.

  ಹೋಟೆಲ್ ಮಾಣಿಯನ್ನು ಬಾಮ್ಮಾ ಹರೀಶ್ ಎಂದು ಕರೆಯುವ ಸನ್ನಿವೇಶ ಚಿತ್ರದಲ್ಲಿದೆ ಎಂದು ನನ್ನ ಗೆಳೆಯರು ಗಮನಕ್ಕೆ ತಂದರು. ಚಿತ್ರದಲ್ಲಿ ಒಂದೆರಡು ಬಾರಿ ತಮ್ಮ ಹೆಸರನ್ನು ಬಳಸಲಾಗಿದೆ. ಇದನ್ನು ಕೇಳಿದಾಗ ನನ್ನ ಮನಸ್ಸಿಗೆ ಬಹಳ ನೋವಾಯಿತು.

  ಈ ಸಂಬಂಧ ನಾನು 'ಸ್ನೇಹಿತರು' ಚಿತ್ರದ ನಿರ್ಮಾಪಕ ಸೌಂದರ್ಯ ಜಗದೀಶ್ ಅವರಿಗೆ ಕರೆ ಮಾಡಿದೆ. ಅವರು ಈ ಬಗ್ಗೆ ನನಗೇನು ಗೊತ್ತಿಲ್ಲ. ದಯವಿಟ್ಟು ನಮ್ಮ ನಿರ್ದೇಶಕರಾದ ರಾಮ್ ನಾರಾಯಣ್ ಅವರನ್ನು ಸಂಪರ್ಕಿಸುವಂತೆ ಹೇಳಿದರು. ಅವರನ್ನು ಸಂಪರ್ಕಿಸಿದಾಗ ಅವರು ಫೋನಿಗೆ ಸಿಗುತ್ತಿಲ್ಲ ಎಂದಿದ್ದಾರೆ ಭಾ.ಮಾ.ಹರೀಶ್.

  ಚಿತ್ರದಲ್ಲಿ ತಮ್ಮ ಹೆಸರನ್ನು ಬಳಸಿಕೊಂಡು ತಮ್ಮನ್ನು ತೇಜೋವಧೆ ಮಾಡಲಾಗಿದೆ. 'ಸ್ನೇಹಿತರು' ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರು ತಮ್ಮನ್ನು ಬಹಿರಂಗ ಕ್ಷಮೆಯಾಚಿಸಬೇಕು. ಹಾಗೆಯೇ ತಮ್ಮ ಹೆಸರುವ ಸನ್ನಿವೇಶದ ಧ್ವನಿಯನ್ನು ಮ್ಯೂಟ್ ಮಾಡಬೇಕು ಎಂದು ಹರೀಶ್ ಆಗ್ರಹಿಸಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  Kannada films producer Bha.Ma. Harish has lodged a complaints against the makers of Kannada film Snehitaru in Karnataka Film Chamber of Commerce (KFCC). In his complaint, Harish has alleged that the producers used his name in a particular scene in the movie, which is degrading him and defaming his image in the public.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X