For Quick Alerts
  ALLOW NOTIFICATIONS  
  For Daily Alerts

  ಬಾಲಿವುಡ್ ನಲ್ಲೂ ಮಿನುಗಲಿರುವ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು'

  By Suneetha
  |

  ಗಾಂಧಿನಗರದಲ್ಲಿ ಎಲ್ಲರ ಕಣ್ಣಲ್ಲಿ ನೀರುಕ್ಕಿಸಿ ಅದ್ಭುತ ರೆಸ್ಪಾನ್ಸ್ ಗಿಟ್ಟಿಸಿಕೊಂಡ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ತಮಿಳು-ತೆಲುಗಿಗೆ ರೀಮೇಕ್ ಆಗುತ್ತೆ ಅಂತ ನಾವು ಈ ಮೊದಲೇ ನಿಮಗೆ ಸಿಹಿ ಸುದ್ದಿ ನೀಡಿದ್ದೆವು.

  ಈ ಸಿಹಿ ಸುದ್ದಿಯನ್ನು ಕನ್ನಡಾಭಿಮಾನಿಗಳು ಅರಗಿಸಿಕೊಳ್ಳೋ ಮುಂಚೆ ಇನ್ನೊಂದು ಸಿಹಿ ಸುದ್ದಿ ನೀಡುತ್ತಿದ್ದೇವೆ. ಅದೇನಪ್ಪಾ ಅಂದ್ರೆ ಈ ಅಪರೂಪದ ಚಿತ್ರ ಬರೀ ತಮಿಳು-ತೆಲುಗಿಗೆ ಮಾತ್ರವಲ್ಲದೇ, ಇದೀಗ ಹಿಂದಿಗೂ ರೀಮೇಕ್ ಆಗಲಿದೆ.[ತಮಿಳು-ತೆಲುಗು ಅಂಗಳಕ್ಕೆ ಜಿಗಿದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು']

  ತಮಿಳು-ತೆಲುಗು ರೀಮೇಕ್ ಹಕ್ಕನ್ನು ಬಹುಭಾಷಾ ನಟ ಕಮ್ ನಿರ್ದೇಶಕ ಪ್ರಕಾಶ್ ರಾಜ್ ಖರೀದಿ ಮಾಡಿದರೆ, ಹಿಂದಿ ಹಕ್ಕನ್ನು ಬಾಲಿವುಡ್ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಅವರು ಭರ್ಜರಿ 50 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದಾರೆ.

  ಕನ್ನಡದಲ್ಲಿ ನಟ ರಕ್ಷಿತ್ ಶೆಟ್ಟಿ ಮಾಡಿದ್ದ ಪಾತ್ರವನ್ನು ಹಿಂದಿಯಲ್ಲಿ ನಟ ಶಾಹೀದ್ ಕಪೂರ್ ಅವರು ಮಾಡಲಿದ್ದು, ಕನ್ನಡದಲ್ಲಿ ನಟ ಅನಂತ್ ನಾಗ್‌ ಅವರು ಮಾಡಿದ್ದ ಪಾತ್ರವನ್ನು ಹಿಂದಿಯಲ್ಲಿ ಮಾಡಲು ಈ ಮೊದಲು ಹಿರಿಯ ನಟ ಅನುಪಮ್ ಖೇರ್ ಅವರ ಹೆಸರು ಕೇಳಿ ಬಂದಿತ್ತು. ಆದರೆ ತದನಂತರ ಕೆಲವು ಬದಲಾವಣೆಗಳಾದ ಕಾರಣ ಇದೀಗ ಬಿಗ್ ಬಿ ಅಮಿತಾಭ್ ಬಚ್ಚನ್ ಅವರು ಮಾಡಲಿದ್ದಾರೆ ಎನ್ನಲಾಗುತ್ತಿದೆ.[ಅನಂತ್ ನಾಗ್ ಜೊತೆ ಕಳೆದು ಹೋದ ವಿಮರ್ಶಕರು]

  Producer Boney Kapoor all set to remake 'GBSM' in Hindi

  ಮರೆವಿನ ಖಾಯಿಲೆ ಇರುವ ಪಾತ್ರಕ್ಕೆ ಬಿಗ್ ಬಿ ಅಮಿತಾಭ್ ಅವರು ಸರಿಯಾಗಿ ಹೋಲಿಕೆಯಾಗುತ್ತಾರೆ. ಇದಕ್ಕಿಂತ ಮೊದಲು ಅವರು 'ಪಾ' ಮತ್ತು 'ಪೀಕು' ಚಿತ್ರದಲ್ಲಿ ಅತ್ಯುತ್ತಮ ಅಭಿನಯ ತೋರಿ ಮೆಚ್ಚುಗೆ ಗಳಿಸಿದ್ದರು.

  ಮರೆವಿನ ಖಾಯಿಲೆಯಿಂದ ಬಳಲುತ್ತಿರುವ ವೆಂಕೋಬ್ ರಾವ್ ಎಂಬ ಪಾತ್ರ ಮಾಡಿದ್ದ ನಟ ಅನಂತ್ ನಾಗ್ ಅವರು ತಮ್ಮ ಮುಗ್ದ ನಟನೆಯ ಮೂಲಕ ಎಲ್ಲರ ಕಣ್ಣಲ್ಲಿ ನೀರು ತರಿಸಿದ್ದು, ಮಾತ್ರವಲ್ಲದೇ, ಅದ್ಭುತ ನಟನೆಗೆ ಎಲ್ಲರಿಂದ ಭೇಷ್ ಎನಿಸಿಕೊಂಡಿದ್ದರು.['ಗೋಧಿ ಬಣ್ಣ' ವಿಮರ್ಶೆ: ಅಪ್ಪ-ಮಗನ ಅ'ಸಾಧಾರಣ' ಭಾವ-ಬಂಧ]

  ನವ ನಿರ್ದೇಶಕ ಹೇಮಂತ್ ರಾವ್ ನಿರ್ದೇಶನ ಮಾಡಿದ್ದ ಈ ಚಿತ್ರಕ್ಕೆ ಪುಷ್ಪಕರ ಮಲ್ಲಿಕಾರ್ಜುನ ಅವರು ಬಂಡವಾಳ ಹೂಡಿದ್ದರು. ಜೂನ್ 3 ರಂದು ತೆರೆಕಂಡಿದ್ದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಂಡಿದ್ದು, ಕಳೆದ ವಾರ ಅಮೆರಿಕದಲ್ಲೂ ತೆರೆಕಂಡು ಸುಮಾರು 25 ಸೆಂಟರ್ ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.['ಗೋಧಿ ಬಣ್ಣ' ಚಿತ್ರವನ್ನು ತಂದೆಗೆ ಅರ್ಪಿಸಿದ ರಕ್ಷಿತ್ ಶೆಟ್ಟಿ]

  ಕನ್ನಡದಲ್ಲಿ ಅತ್ಯುತ್ತಮ ರೆಸ್ಪಾನ್ಸ್ ಗಿಟ್ಟಿಸಿಕೊಂಡ ಈ ಸಿನಿಮಾ ಇನ್ನು ತಮಿಳು-ತೆಲುಗು ಮತ್ತು ಹಿಂದಿಯಲ್ಲಿ ಯಾವ ರೀತಿ ಯಶಸ್ವಿ ಕಾಣಬಹುದು ಅನ್ನೋದು ಕನ್ನಡಿಗರ ಕುತೂಹಲ.

  ಆದರೂ ಎಷ್ಟೇ ಆಗಲಿ ಕನ್ನಡದ ಎವರ್ ಗ್ರೀನ್ ನಟ ಅನಂತ್ ನಾಗ್ ಅವರ ನಟನೆಯನ್ನು ಮೀರಿಸಲು ಯಾರಿಂದಲೂ ಸಾಧ್ಯ ಇಲ್ಲ ಅನ್ನೋದು ನಮ್ಮ ಕನ್ನಡಾಂಬೆಯ ಮಕ್ಕಳ ಅಭಿಪ್ರಾಯ.

  English summary
  Kannada movie 'Godhi Banna Sadharna Mykattu' will have a Hindi version. Earlier Actor-producer Prakash Rai had announced that he is remaking the movie in Tamil and Telugu. Now the film's Hindi rights have been taken by Bollywood's popular producer Boney Kapoor. The deal is worth Rs 50 lakh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X