'ಕಲಿ' ಸಿನಿಮಾ ಬರುತ್ತಾ ಇಲ್ವಾ? : ನಿರ್ಮಾಪಕರ ಕಡೆಯಿಂದ ಬಂದ ಸ್ಪಷ್ಟನೆ

By Naveen

Recommended Video

TheVillain : ಪ್ರೇಮ್ ಕೈ ಬಿಟ್ಟ ಕಲಿ ಮತ್ತೆ ಸೆಟ್ಟೇರಲಿದ್ಯಾ..? | Filmibeat Kannada

ಅಂದುಕೊಂಡಂತೆ ಆಗಿದ್ದರೆ 'ದಿ ವಿಲನ್' ಸಿನಿಮಾದ ರೀತಿ 'ಕಲಿ' ಸಿನಿಮಾ ಸದ್ದು ಮಾಡಬೇಕಿತ್ತು. ಆದರೆ, ಈ ಸಿನಿಮಾ ಶುರು ಆಗುವುದಕ್ಕೆ ಮೊದಲೇ ನಿಂತು ಹೋಯ್ತು. ಅದ್ದೂರಿಯಾಗಿ ಮುಹೂರ್ತ ಆದ ಈ ಚಿತ್ರದ ಚಿತ್ರೀಕರಣವೆ ಶುರು ಆಗಲಿಲ್ಲ.

ಪ್ರೇಮ್ ಕೂಡ 'ಕಲಿ' ಚಿತ್ರವನ್ನು ಕೈ ಬಿಟ್ಟು 'ದಿ ವಿಲನ್' ಸಿನಿಮಾವನ್ನು ಶುರು ಮಾಡಿದರು. ಆ ಸಿನಿಮಾದ ನಟರಾದ ಶಿವರಾಜ್ ಕುಮಾರ್ ಹಾಗೂ ಸುದೀಪ್ ಅವರೆ 'ದಿ ವಿಲನ್' ನಲ್ಲಿ ನಟಿಸಿದರು. ಹಾಗಾದರೆ, 'ಕಲಿ' ಸಿನಿಮಾ ನಿಂತು ಹೋಯ್ತಾ ಎನ್ನುವ ಪ್ರಶ್ನೆ ಎಲ್ಲರಿಗೂ ಮೂಡಿತ್ತು. ಈ ಬಗ್ಗೆ ಇದೀಗ ಚಿತ್ರ ನಿರ್ಮಾಪಕ ಸಿ.ಆರ್.ಮನೋಹರ್ ಮಾತನಾಡಿದ್ದಾರೆ.

''ಕಲಿ' ನನ್ನ ಕನಸಿನ ಪ್ರಾಜೆಕ್ಟ್. ಆ ಸಿನಿಮಾವನ್ನು ಇಂದಲ್ಲ ನಾಳೆ ನಿರ್ಮಾಣ ಮಾಡುತ್ತೇನೆ. 'ಬಾಹುಬಲಿ' ರೇಂಜ್ ನಲ್ಲಿ ಆ ಸಿನಿಮಾ ಮಾಡುವ ಚಿಂತನೆ ಇದೆ. 'ಕಲಿ' ಒಂದು ಹಿಸ್ಟಾರಿಕಲ್ ಸಿನಿಮಾ. ನಾಲ್ಕು ಭಾಷೆಗಳಲ್ಲಿ ತಯಾರಾಗಲಿದೆ. ಪ್ರೇಮ್ ಅವರ ಪ್ರತಿ ಸಿನಿಮಾದಲ್ಲಿಯೂ ತಾಯಿಯ ಸೆಂಟಿಮೆಂಟ್ ಇರುತ್ತದೆ. ಅದೇ ರೀತಿ 'ಕಲಿ' ಚಿತ್ರದಲ್ಲಿ ಕೂಡ ತಾಯಿಯ ಮಮತೆ ಇರಲಿದೆ'' ಎಂದು ಹೇಳಿದ್ದಾರೆ.

producer c r manohar spoke about kali kannada movie

'ಕಲಿ' ಚಿತ್ರ ಬಿಟ್ಟು 'ದಿ ವಿಲನ್' ಸಿನಿಮಾಗೆ ಬಂಡವಾಳ ಹಾಕಿದ್ದ ನಿರ್ಮಾಪಕ ಸಿ ಆರ್ ಮನೋಹರ್ 'ಕಲಿ' ಚಿತ್ರದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಆ ಸಿನಿಮಾ ಮಾಡುತ್ತೇನೆ ಎಂದು ಸಿ ಆರ್ ಮನೋಹರ್ ತಿಳಿಸಿದ್ದಾರೆ.

producer c r manohar spoke about kali kannada movie

ಅಂದಹಾಗೆ, ಇತ್ತೀಚಿಗಷ್ಟೆ 'ದಿ ವಿಲನ್' ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆದಿದ್ದು, ಈ ವೇಳೆ 'ಕಲಿ' ಸಿನಿಮಾದ ಬಗ್ಗೆ ಆರ್ ಮನೋಹರ್ ಮಾತನಾಡಿದ್ದಾರೆ.

More from Filmibeat

English summary
Producer C R Manohar spoke about 'Kali' kannada movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X