»   » ದೊಡ್ಡ ನಟಿಯಾಗಬೇಕು ಅಂದರೆ ಕಾಂಪ್ರೊಮೈಸ್ ಆಗಬೇಕಾ..?

ದೊಡ್ಡ ನಟಿಯಾಗಬೇಕು ಅಂದರೆ ಕಾಂಪ್ರೊಮೈಸ್ ಆಗಬೇಕಾ..?

Posted By:
Subscribe to Filmibeat Kannada

'ಸಿನಿಮಾರಂಗದಲ್ಲಿ ದೊಡ್ಡ ನಟಿಯಾಗಿ ಮಿಂಚಬೇಕು ಎಂದರೆ ಕಾಂಪ್ರೊಮೈಸ್ ಆಗಬೇಕಾ?' ಈ ರೀತಿಯ ಪ್ರಶ್ನೆ ಅನೇಕ ಬಾರಿ ಕೇಳಿ ಬಂದಿವೆ. ಈಗಲೂ ಕೇಳಿ ಬರುತ್ತಿವೆ. ಆದ್ರೆ, ಇದರ ಬಗ್ಗೆ ಬಾಯ್ಬಿಟ್ಟು ಮಾತನಾಡುವವರ ಸಂಖ್ಯೆ ಮಾತ್ರ ತೀರಾ ಬೆರಳೆಣಿಕೆಯಷ್ಟು. ಅಂಥವರಲ್ಲಿ, ನಟಿ ಸಿಂಧು ಲೋಕನಾಥ್ ಕೂಡ ಒಬ್ಬರು.

ಸಿಂಧು ಲೋಕನಾಥ್ ಅಭಿನಯದ 'ಹೀಗೊಂದು ದಿನ' ಚಿತ್ರದ ಪತ್ರಿಕಾಗೋಷ್ಠಿ ನಿನ್ನೆ (ಆಗಸ್ಟ್21) ನಡೆಯಿತು. ಈ ವೇಳೆ ಮಾತನಾಡಿದ ಚಿತ್ರದ ನಿರ್ಮಾಪಕ ಚಂದ್ರಶೇಖರ್, ''ಸಿಂಧು ಒಳ್ಳೆಯ ನಟಿ. ಆದರೆ, ಅವರಿಗೆ ಹೆಚ್ಚು ಅವಕಾಶಗಳಿಲ್ಲ. ಕನ್ನಡದಲ್ಲಿ ನಟಿಯರು ಕಾಂಪ್ರೊಮೈಸ್, ಕಮಿಟ್ ಮೆಂಟ್ ಮಾಡಿಕೊಂಡರೆ ಮಾತ್ರ ಅವಕಾಶ ಸಿಗುತ್ತದೆ. ಇಲ್ಲದಿದ್ದರೆ ಕಷ್ಟ'' ಎಂಬ ಹೇಳಿಕೆ ನೀಡಿದ್ದರು.

Producer Chandrashekar speaks about Casting Couch in Film Industry

ಬಳಿಕ ಮಾತನಾಡಿದ ನಟಿ ಸಿಂಧು ಲೋಕನಾಥ್ ''ನನಗಂತೂ ಈವರೆಗೆ ಆ ರೀತಿಯ ಅನುಭವ ಆಗಿಲ್ಲ. ಪರಭಾಷೆಯ ಚಿತ್ರರಂಗಗಳಲ್ಲಿ ಇಂತಹ ಸುದ್ದಿ ಕೇಳಿಬರುತ್ತವೆ. ನನಗೆ ಅಂತಹ ಅನುಭವಗಳೇನೂ ಆಗಿಲ್ಲ'' ಅಂತ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡುವ ಜೋಷ್ ನಲ್ಲಿ ನಿರ್ಮಾಪಕರು ಒಂದು ಹೆಜ್ಜೆ ಮುಂದಕ್ಕೆ ಹೋಗಿ ಮಾತನಾಡಿಬಿಟ್ಟಿದ್ದರು. ಇದರಿಂದ ವಿವಾದದಲ್ಲಿ ಸಿಲುಕಿದಂತೆ ಕಂಡ ನಟಿ ಸಿಂಧು ಎಲ್ಲರಿಗೂ ಸ್ಪಷ್ಟನೆ ಕೊಡುವ ಪರಿಸ್ಥಿತಿ ಎದುರಾಯ್ತು.

English summary
Kannada Movie 'Heegondu Dina; Producer Chandrashekar speaks about Casting Couch in Film Industry

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada