For Quick Alerts
  ALLOW NOTIFICATIONS  
  For Daily Alerts

  50 ವರ್ಷ ತುಂಬಿದ ಚಿನ್ನೇಗೌಡ ದಾಂಪತ್ಯ ಜೀವನ

  |

  ''ಅಜ್ಜ ಆಲದ ಮರ.. ಅಜ್ಜಿ ಮಾವಿರ ಮರ.. ಹಕ್ಕಿಗಳು ನಾವೆಲ್ಲ..'' ಎನ್ನುವ ಹಾಡನ್ನು ನಿರ್ಮಾಪಕ ಚಿನ್ನಗೌಡ ಕುಟುಂಬ ಹಾಡುತ್ತಿದೆ. ಅವರ ಇಡೀ ಕುಟುಂಬದಲ್ಲಿ ಈಗ ಸಂಭ್ರಮ ಮನೆ ಮಾಡಿದೆ.

  ನಿರ್ಮಾಪಕ ಚಿನ್ನಗೌಡ ಹಾಗೂ ಜಯಮ್ಮ ದಾಂಪತ್ಯಕ್ಕೆ 50 ವರ್ಷ ತುಂಬಿದೆ. ಈ ವಿಶೇಷವಾಗಿ ಅವರಿಬ್ಬರ ವಿವಾಹ ವಾರ್ಷಿಕೋತ್ಸವದ ಸಂಭ್ರಮ ಅದ್ದೂರಿಯಾಗಿ ನಡೆದಿದೆ. ಮತ್ತೊಮ್ಮೆ ತಾಳಿ ಕಟ್ಟಿಸುವ ಮೂಲಕ ಸಂಭ್ರಮಾಚರಣೆಯನ್ನು ಮಾಡಿಸಲಾಗಿದೆ.

  ಆ ದಿನ ಸತ್ತಿದ್ದೀನಾ, ಬದುಕಿದ್ದೀನಾ ಎಂದು ಯಾರೂ ಬಂದು ನೋಡಿಲ್ಲ

  ಈ ಕಾರ್ಯಕ್ರಮದಲ್ಲಿ ಚಿನ್ನಗೌಡರವರ ಪುತ್ರ ವಿಜಯ ರಾಘವೇಂದ್ರ, ಶ್ರೀಮುರಳಿ, ಇಬ್ಬರು ಸೊಸೆಯರು, ಮೊಮ್ಮಕ್ಕಳು ಹೀಗೆ ಇಡೀ ಫ್ಯಾಮಿಲಿ ಭಾಗಿಯಾಗಿದೆ. ನಟ ಶ್ರೀ ಮುರಳಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ಪ ಅಮ್ಮನ ಸಂಭ್ರಮದ ಕ್ಷಣಗಳ ಫೋಟೋವನ್ನು ಹಂಚಿಕೊಂಡಿದ್ದಾರೆ.

  ''ನನ್ನ ಸುಂದರ ತಂದೆ, ತಾಯಿಯ ಐವತ್ತನೇ ವಿವಾಹ ವಾರ್ಷಿಕೋತ್ಸವ. ಐವತ್ತು ವರ್ಷದ ನಂತರ ಮತ್ತೆ ಅಪ್ಪ ಅಮ್ಮನಿಗೆ ಮೂರು ಗಂಟು ಹಾಕಿದ್ದಾರೆ. ಅವರ ಜೀವನಕ್ಕೆ ಖುಷಿಯನ್ನು ಬಯಸುತ್ತಿದ್ದೆವೆ.'' ಎಂದು ತಂದೆ ತಾಯಿಗೆ ಪ್ರೀತಿಯ ಶುಭಾಶಯ ತಿಳಿಸಿದ್ದಾರೆ.

  ಶ್ರೀಮುರಳಿ ಲವ್ ಸ್ಟೋರಿ ಯಾವ ಸಿನಿಮಾಗೂ ಕಮ್ಮಿ ಇಲ್ಲ

  ಅಂದಹಾಗೆ, ಚಿನ್ನೆಗೌಡ ಅವರು ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್ ಅವರ ಸಹೋದರ. ನಿರ್ಮಾಪಕ ಹಾಗೂ ವಿತರಕರಾಗಿದ್ದ ಇವರು, ಪ್ರಸ್ತುತ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ.

  English summary
  Kannada producer, karnataka film chamber of commerce precedent Chinne Gowda celebrating 50th wedding anniversary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X