For Quick Alerts
  ALLOW NOTIFICATIONS  
  For Daily Alerts

  'ಗೂಗ್ಲಿ' ಟೈಟಲ್ ಬೇಡ ಅಂದಿದ್ದರು ಜಯಣ್ಣ, ಶೀರ್ಷಿಕೆ ಬಗ್ಗೆ ಇಂಟರೆಸ್ಟಿಂಗ್ ಕಥೆ ಬಿಚ್ಚಿಟ್ಟ ಒಡೆಯರ್!

  |

  ರಾಕಿಂಗ್ ಸ್ಟಾರ್ ಯಶ್ ಹಾಗೂ ಕೃತಿ ಕರಬಂಧ ನಟಿಸಿದ್ದ ಸೂಪರ್ ಹಿಟ್ ಸಿನಿಮಾ ಗೂಗ್ಲಿ. ಯಶ್ ಅವರ ವೃತ್ತಿ ಜೀವನದಲ್ಲಿ ಅತಿ ದೊಡ್ಡ ಯಶಸ್ಸು ಕಂಡ ಚಿತ್ರಗಳ ಪೈಕಿ ಗೂಗ್ಲಿ ಸಹ ದಿ ಬೆಸ್ಟ್. ನಟಿ ಕೃತಿ ಕರಬಂಧ ಅವರಿಗೂ ಈ ಸಿನಿಮಾ ದೊಡ್ಡ ಬ್ರೇಕ್ ಕೊಟ್ಟಿತ್ತು.

  Kanaka , Duniya Vijay ತೆರೆ ಹಿಂದಿನ ಶ್ರಮ | Filmibeat Kannada

  ನಿರ್ದೇಶಕ ಪವನ್ ಒಡೆಯರ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ವಿಷಯ ಏನಪ್ಪಾ ಅಂದ್ರೆ ಗೂಗ್ಲಿ ಅಂತ ಚಿತ್ರಕ್ಕೆ ಟೈಟಲ್ ಇಡೋದು ಬೇಡ ಅಂದಿದ್ದರಂತೆ ನಿರ್ಮಾಪಕ ಜಯಣ್ಣ. ಟೈಟಲ್ ಒಂಥರಾ ಇದೆ ಅಲ್ವಾ ಎಂದು ನಿರಾಕರಿಸಿದ್ದರಂತೆ.

  ಈ ಇಬ್ಬರು ನಟರೊಂದಿಗೆ ಸಿನಿಮಾ ಮಾಡುವಂತೆ ಪವನ್ ಒಡೆಯರ್‌ ಗೆ ಒತ್ತಾಯಈ ಇಬ್ಬರು ನಟರೊಂದಿಗೆ ಸಿನಿಮಾ ಮಾಡುವಂತೆ ಪವನ್ ಒಡೆಯರ್‌ ಗೆ ಒತ್ತಾಯ

  ಆದರೆ, ಹಠ ಬಿಡದ ನಿರ್ದೇಶಕ ಪವನ್ ಒಡೆಯರ್ 'ಏನಾದರೂ ಮಾಡಿ ಗೂಗ್ಲಿ ಅಂತ ಟೈಟಲ್ ಫಿಕ್ಸ್ ಮಾಡಲೇಬೇಕು ಅಂತ, ಅದಕ್ಕೊಂದು ವಿಡಿಯೋ ಸಹ ಮಾಡಿ ನಿರ್ಮಾಪಕರನ್ನು ಒಪ್ಪಿಸಿದ್ದರಂತೆ. ಗೂಗ್ಲಿ ಟೈಟಲ್ ಬಗ್ಗೆ ಸ್ವತಃ ಪವನ್ ಒಡೆಯರ್ ಫಿಲ್ಮಿಬೀಟ್ ಜೊತೆ ಒಂದಿಷ್ಟು ಇಂಟರೆಸ್ಟಿಂಗ್ ಮಾಹಿತಿ ಹಂಚಿಕೊಂಡಿದ್ದಾರೆ. ಮುಂದೆ ಓದಿ....

  ಜಯಣ್ಣ ಏಕೆ 'ಗೂಗ್ಲಿ' ಟೈಟಲ್ ಬೇಡ ಅಂದ್ರು?

  ಜಯಣ್ಣ ಏಕೆ 'ಗೂಗ್ಲಿ' ಟೈಟಲ್ ಬೇಡ ಅಂದ್ರು?

  ಗೋವಿಂದಾಯ ನಮಃ ಸಿನಿಮಾದ ಬಳಿಕ ಒಂದೊಳ್ಳೆ ಲವ್ ಸ್ಟೋರಿ ಮಾಡೋಣ ಅಂತ ಕಥೆ ಮಾಡಿದ್ದ ಪವನ್ ಒಡೆಯರ್ ಅದಕ್ಕೆ ಗೂಗ್ಲಿ ಅಂತ ಟೈಟಲ್ ಇಟ್ಟರು. ಆದ್ರೆ, ಈ ಟೈಟಲ್ ನಿರ್ಮಾಪಕ ಜಯಣ್ಣ ಅವರಿಗೆ ಇಷ್ಟ ಆಗ್ಲಿಲ್ಲ. ಸಿನಿಮಾ ಕಥೆಗೆ ಇದು ಸೂಕ್ತ ಎಂದು ನಿರ್ದೇಶಕರು ವಿವರಿಸಿದರು ಜಯಣ್ಣ ಯಾಕೋ ಮನಸ್ಸು ಮಾಡಿಲ್ಲ. ಈ ಟೈಟಲ್ ಇಡಲೇಬೇಕು ಅಂತ ಹಠಕ್ಕೆ ಬಿದ್ದಿದ್ದ ಪಡೆಯರ್ ಅಲ್ಲೊಂದು ಐಡಿಯಾ ಮಾಡಿದ್ರು.

  ಟ್ರೈಲರ್ ಮಾಡಿ ಓಕೆ ಮಾಡಿಬಿಟ್ರು

  ಟ್ರೈಲರ್ ಮಾಡಿ ಓಕೆ ಮಾಡಿಬಿಟ್ರು

  ಗೂಗ್ಲಿ ಅಂದ್ರೆ ಏನು ಎಂದು ಜನರ ಬಳಿ ಕೇಳಿದರು. ಗೂಗ್ಲಿ ಪದದ ಬಗ್ಗೆ ಒಂದು ಟ್ರೈಲರ್ ಮಾಡಿದ್ರು. ಗೂಗ್ಲಿ ಅಂದ್ರೆ ಜನರ ಮನಸ್ಸಿನಲ್ಲಿ ಏನು ಅಂದುಕೊಂಡಿದ್ದಾರೆ ಎಂದು ಅಭಿಪ್ರಾಯ ಸಂಗ್ರಹಿಸಿದರು. ಗೂಗ್ಲಿ ಪದಕ್ಕೆ ಒಬ್ಬೊಬ್ಬರು ಒಂದೊಂದು ಅರ್ಥ ಕಲ್ಪಿಸಿಕೊಂಡಿದ್ದರು. ಇದನ್ನು ಜಯಣ್ಣ ಅವರಿಗೆ ತೋರಿಸಿ ಗೂಗ್ಲಿ ವರ್ಕೌಟ್ ಆಗುತ್ತೆ ಎಂದು ಒಪ್ಪಿಸಿದರು. ಆಮೇಲೆ ಗೂಗ್ಲಿ ಟೇಕ್ ಆನ್ ಆಯ್ತು. ಹಿಟ್ ಆಯ್ತು.

  ಯಶ್ ಗೆ ಕಥೆ ಇಷ್ಟ ಆಗಿತ್ತು

  ಯಶ್ ಗೆ ಕಥೆ ಇಷ್ಟ ಆಗಿತ್ತು

  ಯಶ್ ಆಗ ಡ್ರಾಮಾ ಸಿನಿಮಾ ಮಾಡ್ತಿದ್ರು. ಆಗ ಗೂಗ್ಲಿ ಸಿನಿಮಾ ಕಥೆ ಹೇಳಿದೆ. ಯಶ್ ಗೆ ಕಥೆ ಇಷ್ಟ ಆಯ್ತು. ಅವರೇ ಜಯಣ್ಣ ಅವರನ್ನು ಪರಿಚಯ ಸಹ ಮಾಡಿಕೊಟ್ಟರು. ಅಲ್ಲಿಂದ ಸಿನಿಮಾ ಶುರುವಾಯ್ತು' ಎಂದು ಪವನ್ ಒಡೆಯರ್ ಫಿಲ್ಮಿಬೀಟ್ ಜೊತೆ ಹಳೆಯ ನೆನಪು ಬಿಚ್ಚಿಟ್ಟರು.

  ಬಾಕ್ಸ್ ಆಫೀಸ್ ಹಿಟ್

  ಬಾಕ್ಸ್ ಆಫೀಸ್ ಹಿಟ್

  2013ರಲ್ಲಿ ತೆರೆಕಂಡಿದ್ದ ಗೂಗ್ಲಿ ಬಾಕ್ಸ್ ಆಫೀಸ್ ಹಿಟ್ ಆಗಿತ್ತು. ಯಶ್, ಕೃತಿ ಕರಬಂಧ, ಅನಂತ್ ನಾಗ್, ಸುಧಾ ಬೆಳವಾಡಿ, ಸಾಧುಕೋಕಿಲಾ, ಅಶೋಕ್ ಸೇರಿದಂತೆ ಹಲವರು ಅಭಿನಯಿಸಿದ್ದರು. ಜೋಶುವಾ ಶ್ರೀಧರ್ ಸಂಗೀತ ಹಾಗೂ ಅನೂಪ್ ಸೀಳಿನ್ ಹಿನ್ನೆಲೆ ಸಂಗೀತ ಚಿತ್ರಕ್ಕಿತ್ತು. ಹಾಕಿದ ಬಂಡವಾಳಕ್ಕಿಂತ ಹೆಚ್ಚು ಲಾಭ ಸಹ ಮಾಡಿತ್ತು.

  English summary
  Producer Jayanna had initially rejected the Googly title. then, director Pawan Wadeyar convinced the producers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X