Just In
Don't Miss!
- Automobiles
ಆಕ್ಸೆಸ್ 125 ಸ್ಕೂಟರ್ ಬೆಲೆಯನ್ನು ಹೆಚ್ಚಿಸಿದ ಸುಜುಕಿ ಮೋಟಾರ್ಸೈಕಲ್
- News
ಕೊಲೆ ಪ್ರಕರಣ: ವಿನಯ್ ಕುಲಕರ್ಣಿ ಜಾಮೀನು ಅರ್ಜಿ ವಜಾಗೊಳಿಸಿದ ಹೈಕೋರ್ಟ್!
- Sports
ಆಸ್ಟ್ರೇಲಿಯಾ ತಂಡದ ಬದ್ಧತೆ ಹಾಗೂ ಪೈನ್ ನಾಯಕತ್ವವನ್ನು ಪ್ರಶ್ನಿಸಿದ ಮಾಜಿ ಆಸಿಸ್ ಕ್ರಿಕೆಟಿಗ
- Lifestyle
ಈ 3 ವಸ್ತುಗಳನ್ನು ಹಾಕಿ ಮಾಡಿದ ಜ್ಯೂಸ್ ಕುಡಿದರೆ ಬೊಜ್ಜು ಕರುಗುತ್ತೆ, ಸೌಂದರ್ಯ ಹೆಚ್ಚುತ್ತೆ
- Finance
1986ರಿಂದ 2021 ಸೆನ್ಸೆಕ್ಸ್ ಪ್ರಮುಖ ಮೈಲುಗಲ್ಲುಗಳು: 50,000 ಪಾಯಿಂಟ್ ದಾಖಲೆ ಹಾದಿ
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
Exclusive: ದ್ವಾರಕೀಶ್-ಜಯಣ್ಣ ಗಲಾಟೆ ಹಿಂದಿನ '5 ಕೋಟಿ' ವ್ಯವಹಾರದ ಅಸಲಿ ಸತ್ಯ
ಹಿರಿಯ ನಟ, ನಿರ್ಮಾಪಕ ದ್ವಾರಕೀಶ್ ಮನೆಗೆ ನುಗ್ಗಿ ನಿರ್ಮಾಪಕ ಜಯಣ್ಣ ಹಾಗೂ ರಮೇಶ್ ಗಲಾಟೆ ಮಾಡಿದ್ದಾರೆ ಎಂದು ಎಚ್ ಎಸ್ ಆರ್ ಲೇ ಔಟ್ ನಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ನಿರ್ಮಾಪಕ ಜಯಣ್ಣ 'ಫಿಲ್ಮಿಬೀಟ್ ಕನ್ನಡ'ಕ್ಕೆ ಪ್ರತಿಕ್ರಿಯೆ ನೀಡಿದ್ದು, ಅಸಲಿ ಕಥೆ ಬಿಚ್ಚಿಟ್ಟಿದ್ದಾರೆ.
''ದ್ವಾರಕೀಶ್ ಪುತ್ರ ಯೋಗೇಶ್ ದ್ವಾರಕೀಶ್ ತಮಗೆ 5 ಕೋಟಿ ಹಣ ನೀಡಬೇಕಾಗಿತ್ತು. ಹಣ ನೀಡದೆ ಸತಾಯಿಸುತ್ತಿದ್ದರು. ಹೀಗಾಗಿ ಅವರನ್ನು ಹುಡುಕಿಕೊಂಡು ಮನೆಗೆ ಹೋದೆವು. ಆ ವೇಳೆ ದ್ವಾರಕೀಶ್ ಮನೆಯಲ್ಲಿ ಇದ್ದರು. ಅವರ ಕಾಲಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆದು ಮಗನಿಂದ ಹಣ ವಾಪಸ್ ಕೊಡಿಸಿ ಎಂದು ಕೇಳಿದವು ಅಷ್ಟೇ'' ಎಂದಿದ್ದಾರೆ.
ಸಾಲದ ಹಣ ವಾಪಸ್ ನೀಡಿಲ್ಲ ಎಂದು ದ್ವಾರಕೀಶ್ ಮನೆಯಲ್ಲಿ ನಿರ್ಮಾಪಕರ ಗಲಾಟೆ
''ನಾನು ಮತ್ತು ರಮೇಶ್ ಶುಕ್ರವಾರ ರಾತ್ರಿ ದ್ವಾರಕೀಶ್ ಮನೆಗೆ ಹೋಗಿದ್ದು ನಿಜ, ಆದರೆ ಗಲಾಟೆ ಮಾಡಿಲ್ಲ. ಅವರಿಗೆ ಹಣ ನೀಡಿ ಎಂದು ಮನವಿ ಮಾಡಿದ್ದೇವೆ ಅಷ್ಟೇ. ಆದರೆ, ನಮ್ಮನ್ನು ಎದುರಿಸಲು ನಿರ್ಮಾಪಕ ರಮೇಶ್ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.'' ಎಂದು ಜಯಣ್ಣ ತಿಳಿಸಿದ್ದಾರೆ.
ಅಷ್ಟಕ್ಕೂ ದ್ವಾರಕೀಶ್ ಮಗ ಯೋಗೇಶ್ ಹಾಗೂ ಜಯಣ್ಣ ನಡುವೆ ನಡೆದ ಹಣಕಾಸಿನ ವ್ಯವಹಾರ ಏನು, 5 ಕೋಟಿ ಹಿಂದಿನ ಅಸಲಿ ಕಥೆ ಏನು ಎಂದು ಜಯಣ್ಣ ಫಿಲ್ಮಿಬೀಟ್ ಕನ್ನಡಕ್ಕೆ ವಿವರಿಸಿದ್ದಾರೆ.

3 ಕೋಟಿ 80 ಲಕ್ಷ ರೂಪಾಯಿ
ದ್ವಾರಕೀಶ್ ನಿರ್ಮಾಣದ 'ಅಮ್ಮ ಐ ಲವ್ ಯೂ' ಸಿನಿಮಾದ ವಿತರಣೆ ಹಕ್ಕನ್ನು ಜಯಣ್ಣ ತೆಗೆದುಕೊಂಡಿದ್ದರಂತೆ. ಈ ವೇಳೆ ನಡೆದ ಹಣಕಾಸಿನ ವ್ಯವಹಾರದಲ್ಲಿ 80 ಲಕ್ಷ ಹಣವನ್ನು ಜಯಣ್ಣಗೆ ಯೋಗೇಶ್ ದ್ವಾರಕೀಶ್ ನೀಡಬೇಕಾಗಿತ್ತು. ಅದರ ನಂತರ 'ಆಯುಷ್ಮಾನ್ ಭವ' ಸಿನಿಮಾವನ್ನು ಕೂಡ ಜಯಣ್ಣ ವಿತರಣೆ ಮಾಡಿದ್ದು, ಆಗ 3 ಕೋಟಿ ಹಣವನ್ನು ಯೋಗೇಶ್ ನೀಡಬೇಕಾಯಿತು.

ಡಬ್ಬಿಂಗ್ ರೈಟ್ಸ್ ಹಾಗೂ ಡಿಜಿಟಲ್ ಹಕ್ಕು
'ಆಯುಷ್ಮಾನ್ ಭವ' ಚಿತ್ರದ ವಿತರಣೆ ಹಕ್ಕು ಮೊದಲು 3 ಕೋಟಿಗೆ ಮಾತುಕತೆ ಮಾಡಲಾಗಿತ್ತು. ಆದರೆ, ಆ ನಂತರ 5 ಕೋಟಿಗೆ ಯೋಗೇಶ್ ದ್ವಾರಕೀಶ್ ಡಿಮ್ಯಾಂಡ್ ಮಾಡಿದರಂತೆ. ಜಯಣ್ಣ ಒಪ್ಪದೆ ಇದ್ದಾಗ ಡಬ್ಬಿಂಗ್ ರೈಟ್ಸ್ ಹಾಗೂ ಡಿಜಿಟಲ್ ಹಕ್ಕು ನೀಡುವುದಾಗಿ ಹೇಳಿದರಂತೆ. ಆದರೆ, ಅದನ್ನು ಬೇರೆಯವರಿಗೆ ಅದಾಗಲೇ ಮಾರಾಟ ಮಾಡಿದ್ದರು ಎಂದು ಜಯಣ್ಣ ಆರೋಪ ಮಾಡಿದ್ದಾರೆ.

ಫೈನಾನ್ಸರ್ ರಿಂದ 5 ಕೋಟಿ
ಸಿನಿಮಾ ಬಿಡುಗಡೆ ನಂತರ ಪೂರ್ತಿ ಹಣ ಹಿಂತಿರುಗಿಸುತ್ತೇನೆ ಎಂದು ಕೇಳಿಕೊಂಡ ಬಳಿಕ ಫೈನಾನ್ಸರ್ ರಿಂದ 5 ಕೋಟಿ ಹಣವನ್ನು ಯೋಗೇಶ್ ದ್ವಾರಕೀಶ್ ಗೆ ಜಯಣ್ಣ ಕೊಡಿಸಿದರಂತೆ. ಸಿನಿಮಾ ಸೋತ ಕಾರಣ ಯೋಗೇಶ್ ದ್ವಾರಕೀಶ್ ಹಣ ನೀಡುವುದು ಮತ್ತಷ್ಟು ತಡ ಆಯ್ತು. ನಿರ್ಮಾಪಕ ಸೂರಪ್ಪ ಬಾಬು, ಶ್ರೀಕಾಂತ್, ಕೆ ಮಂಜು ಹಾಗೂ ರಮೇಶ್ ಈ ವೇಳೆ ಮಧ್ಯಸ್ಥಿಕೆ ವಹಿಸಿದ್ದರು. ಜನವರಿ 30ರ ಒಳಗೆ ಹಣ ನೀಡುವುದಾಗಿ ಹೇಳಿದ್ದರು. ಆದರೆ, ಜನವರಿ 27ರ ನಂತರ ಜಯಣ್ಣ ಮೊಬೈಲ್ ನಂಬರ್ ಅನ್ನು ಬ್ಲಾಕ್ ಮಾಡಿದರಂತೆ.

ಮನೆಗೆ ಹೋಗಿದ್ದು ನಿಜ, ಗಲಾಟೆ ಮಾಡಿಲ್ಲ
ಹಣ ನೀಡದೆ ಮೊಬೈಲ್ ಕೂಡ ಬ್ಲಾಕ್ ಮಾಡಿದ ಕಾರಣ ಯೋಗೇಶ್ ಹುಡುಕಿಕೊಂಡು ದ್ವಾರಕೀಶ್ ಮನೆಗೆ ಜಯಣ್ಣ ಹೋಗಿದ್ದಾರೆ. ಈ ವೇಳೆ ಹಣಕಾಸಿನ ಮಧ್ಯಸ್ಥಿಕೆ ವಹಿಸಿದ್ದ ಕಾರಣ ರಮೇಶ್ ರನ್ನು ಕರೆದುಕೊಂಡು ಹೋಗಿದ್ದಾರೆ. ದ್ವಾರಕೀಶ್ ರೊಂದಿಗೆ ಕೆಟ್ಟದಾಗಿ ನಡೆದುಕೊಂಡಿಲ್ಲ. ಅವರನ್ನು ನೋಡಿದರೆ, ಹಾಗೆಲ್ಲ ಮಾಡಬೇಕು ಅನಿಸುತ್ತದೆಯೇ?, ಸದ್ಯಕ್ಕೆ ಫೈನಾನ್ಸರ್ ಹಣ 5 ಕೋಟಿಯನ್ನಾದರೂ ಕೊಡಿಸಿ ಎಂದು ಕೇಳಿದೆವು ಅಷ್ಟೇ'' ಎಂದು ಘಟನೆಯ ಬಗ್ಗೆ ಜಯಣ್ಣ ಹೇಳಿದರು.

ಸಂಪರ್ಕಕ್ಕೆ ಸಿಗದ ಯೋಗೇಶ್, ರಮೇಶ್
ಘಟನೆಯ ಬಗ್ಗೆ ಪೂರ್ಣ ವಿವರವನ್ನು ನಿರ್ಮಾಪಕ ಜಯಣ್ಣ ಫಿಲ್ಮಿಬೀಟ್ ಕನ್ನಡಕ್ಕೆ ತಿಳಿಸಿದ್ದಾರೆ ಮತ್ತೊಂದು ಕಡೆ, ಈ ಬಗ್ಗೆ ವಿವರ ಪಡೆಯಲು ನಿರ್ಮಾಪಕ ಯೋಗೇಶ್ ದ್ವಾರಕೀಶ್ ಗೆ ಕರೆ ಮಾಡಿದಾಗ ಅವರು ಕರೆ ಸ್ವೀಕರಿಸಲಿಲ್ಲ. ಹಾಗೂ ನಿರ್ಮಾಪಕ ರಮೇಶ್ ಕೂಡ ಸಂಪರ್ಕಕ್ಕೆ ಸಿಗಲಿಲ್ಲ.