»   » 'ಡೆತ್ ನೋಟ್' ಬರೆದಿಟ್ಟು ಆಸ್ಪತ್ರೆ ಸೇರಿದ ನಿರ್ಮಾಪಕ

'ಡೆತ್ ನೋಟ್' ಬರೆದಿಟ್ಟು ಆಸ್ಪತ್ರೆ ಸೇರಿದ ನಿರ್ಮಾಪಕ

Posted By:
Subscribe to Filmibeat Kannada

ನಿರ್ಮಾಪಕ ಜಯಸಿಂಹ ಮುಸುರಿ ಅವರ ಸಹನೆಯ ಕಟ್ಟೆ ಒಡೆದಿದೆ. ಕಳೆದ ಮೂರು ದಿನಗಳಿಂದ ನಿರ್ಮಾಪಕರ ಸಮಸ್ಯೆ ಪರಿಹಾರ ಆಗಬೇಕು ಅಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ ಖ್ಯಾತ ಹಾಸ್ಯನಟ ಮುಸುರಿ ಕೃಷ್ಣಮೂರ್ತಿ ಪುತ್ರ ಜಯಸಿಂಹ ಮುಸುರಿ.

ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡು ಮೂರು ದಿನಗಳಾಗಿದ್ದರೂ, ಹಿರಿಯ ನಟಿ ಜಯಮಾಲಾ ಒಬ್ಬರನ್ನ ಬಿಟ್ಟರೆ, ಬೇರೆ ಕಲಾವಿದರ್ಯಾರು ಫಿಲ್ಮ್ ಚೇಂಬರ್ ನತ್ತ ಮುಖ ಮಾಡಿಲ್ಲ. [ಇಂದಿನಿಂದ ನಿರ್ಮಾಪಕರ ಸರಣಿ ಉಪವಾಸ ಸತ್ಯಾಗ್ರಹ]

Producer Jayasimha Musuri Hospitalized; Writes Death note

ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ ಕೈಗೊಂಡಿರುವ ಜಯಸಿಂಹ ಮುಸುರಿ ಅವರು ಅಸ್ವಸ್ಥಗೊಂಡಿದ್ದಾರೆ. ಅವರ ಆರೋಗ್ಯ ಸ್ಥಿತಿಯಲ್ಲಿ ಏರುಪೇರಾಗಿರುವ ಕಾರಣ, ಅವರನ್ನ ಹತ್ತಿರದ ಮಲ್ಲಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. [ನಿರ್ಮಾಪಕರ ಉಪವಾಸ ಸತ್ಯಾಗ್ರಹ ; ಅಂಬರೀಶ್ ಹೊಸ ವರಸೆ]

Producer Jayasimha Musuri Hospitalized; Writes Death note

ಕನ್ನಡದಲ್ಲಿ 50ಕ್ಕೂ ಹೆಚ್ಚು ಚಿತ್ರಗಳನ್ನ ನಿರ್ಮಾಣ ಮಾಡಿರುವ ಜಯಸಿಂಹ ಮುಸುರಿ ಈ ವೇಳೆ 'ಡೆತ್ ನೋಟ್' ಒಂದನ್ನ ಬರೆದಿಟ್ಟಿದ್ದಾರೆ. ''ನನ್ನ ಆರೋಗ್ಯದಲ್ಲಿ ಏನಾದರೂ ಹೆಚ್ಚು ಕಮ್ಮಿ ಉಂಟಾದಲ್ಲಿ, ಅದಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಕಲಾವಿದರ ಸಂಘ ನೇರ ಹೊಣೆ'' ಅಂತ ಡೆತ್ ನೋಟ್ ನಲ್ಲಿ ಬರೆದಿದ್ದಾರೆ. [''ರೆಬೆಲ್ ಸ್ಟಾರ್ ಅಂಬರೀಶ್ ಗೆ ಧಿಕ್ಕಾರ...ಧಿಕ್ಕಾರ...'']

Producer Jayasimha Musuri Hospitalized; Writes Death note

ಈಗಾಗಲೇ ಅಸ್ವಸ್ಥರಾಗಿರುವ ಜಯಸಿಂಹ ಮುಸುರಿ, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನಾದರೂ ಕಲಾವಿದರು ಎಚ್ಚೆತ್ತುಕೊಳ್ಳದೇ ಇದ್ದರೆ, ಪರಿಸ್ಥಿತಿ ವಿಕೋಪಕ್ಕೆ ತಲುಪುವುದು ಖಂಡಿತ. [ಹಿರಿಯ ನಟಿ ಜಯಮಾಲಾ ಮಾತಿಗೆ ಬೆಲೆಯಿಲ್ಲ!]

English summary
Due to the Hunger strike of Kannada Film Producers since 3 days, Producer Jayasimha Musuri's health condition has turned critical and has been Hospitalized. Meanwhile, Jayasimha Musuri has written a death note stating that KFCC and Artists Association is responsible for further consequences.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada