»   » 'ಬುಕ್ ಮೈ ಶೋ' ಅಕ್ರಮದ ವಿರುದ್ಧ ಗುಡುಗಿದ ನಿರ್ಮಾಪಕ ಕೆ.ಮಂಜು

'ಬುಕ್ ಮೈ ಶೋ' ಅಕ್ರಮದ ವಿರುದ್ಧ ಗುಡುಗಿದ ನಿರ್ಮಾಪಕ ಕೆ.ಮಂಜು

Posted By:
Subscribe to Filmibeat Kannada

ಕನ್ನಡದ ಖ್ಯಾತ ನಿರ್ಮಾಪಕ ಕೆ.ಮಂಜು 'ಬುಕ್ ಮೈ ಶೋ' ವಿರುದ್ಧ ಆಕ್ರೋಶಗೊಂಡಿದ್ದಾರೆ. ಸದ್ಯ, ಕೆ.ಮಂಜು ನಿರ್ಮಾಣ ಮಾಡಿರುವ 'ಸತ್ಯ ಹರಿಶ್ಚಂದ್ರ' ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಈ ಚಿತ್ರಕ್ಕೆ ಮೋಸವಾಗುತ್ತಿದೆ ಎಂದು ಕೆಂಡಾಮಂಡಲರಾಗಿದ್ದಾರೆ.

ಕನ್ನಡ ಚಿತ್ರಗಳಿಗೆ ಬುಕ್ ಮೈ ಶೋ ಕಡೆಯಿಂದ ದೊಡ್ಡ ಮೋಸವಾಗುತ್ತಿದೆ ಎಂಬ ಆರೋಪ ಆಗಾಗ ಕೇಳಿ ಬರುತ್ತಲೇ ಇತ್ತು. ಆದ್ರೀಗ, ಕೆ.ಮಂಜು ಅವರು ಬುಕ್ ಮೈ ಶೋ ಅವರ ಅಕ್ರಮವನ್ನ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

ಅಷ್ಟಕ್ಕೂ, ಕೆ.ಮಂಜು ಅವರ ಆಕ್ರೋಶಕ್ಕೆ ನಿಜವಾದ ಕಾರಣವೇನು? ಕನ್ನಡ ಚಿತ್ರಗಳಿಗೆ ಬುಕ್ ಮೈ ಶೋ ಮಾಡುತ್ತಿರುವ ಮೋಸವೇನು? ಎಂದು ಮುಂದೆ ಓದಿ......

ದುಡ್ಡ ಕೊಟ್ಟರೇ ಒಳ್ಳೆ ವಿಮರ್ಶೆ

ಬುಕ್ ಮೈ ಶೋ ಅವರಿಗೆ ಕೇಳಿದಷ್ಟು ದುಡ್ಡು ಕೊಟ್ಟರೇ ಒಳ್ಳೆಯ ವಿಮರ್ಶೆ ಕೊಡುತ್ತಾರೆ. ಇಲ್ಲವಾದಲ್ಲಿ, ಕೆಟ್ಟ ವಿಮರ್ಶೆ ಕೊಡುತ್ತಾರೆ ಎಂಬ ಸ್ಪೋಟಕ ಮಾಹಿತಿಯನ್ನ ನಿರ್ಮಾಪಕ ಕೆ.ಮಂಜು ಅವರು ಬಹಿರಂಗಪಡಿಸಿದ್ದಾರೆ.

'ಸತ್ಯ ಹರಿಶ್ಚಂದ್ರ' ಚಿತ್ರಕ್ಕೆ ಮೋಸ

ಶರಣ್ ಅಭಿನಯದ 'ಸತ್ಯ ಹರಿಶ್ಚಂದ್ರ' ಚಿತ್ರಕ್ಕೆ ಬುಕ್ ಮೈ ಶೋ ಅವರು ಕಡಿಮೆ ರೇಟಿಂಗ್ ಕೊಟ್ಟಿದ್ದಾರೆ ಎಂಬ ಆಕ್ರೋಶವನ್ನ ನಿರ್ಮಾಪಕರು ಹೊರಹಾಕಿದ್ದಾರೆ. ಫೋನ್ ಮಾಡಿ ದುಡ್ಡು ಕೊಟ್ಟರೇ ಜಾಸ್ತಿ ರೇಟಿಂಗ್ ಕೊಡ್ತಿವಿ ಎಂದು ಹೇಳುತ್ತಾರೆ ಎಂದು ಕೆ.ಮಂಜು ಆರೋಪಿಸಿದ್ದಾರೆ.

ಪರಭಾಷಾ ಚಿತ್ರಗಳಿಗೆ ಆಧ್ಯತೆ

ಹೀಗೆ, ಪರಭಾಷಾ ಚಿತ್ರಗಳಿಗೆ ಹೆಚ್ಚು ಆಧ್ಯತೆ ನೀಡುವ ಬುಕ್ ಮೈ ಶೋ, ಅವರಿಂದ ದುಡ್ಡು ತಗೊಂಡು ಹೀಗೆ ಮಾಡುತ್ತಿವೆ. ಕನ್ನಡ ಚಿತ್ರಗಳಿಗೆ ಟಿಕೆಟ್ ಬುಕ್ಕಿಂಗ್ ಮಾಡುವಾಗ ಹೌಸ್ ಫುಲ್ ಎಂದು ತೋರಿಸಿ, ನಂತರ ಪ್ರದರ್ಶನದ ವೇಳೆ ಖಾಲಿ ಚಿತ್ರಮಂದಿರ ತೋರಿಸಿ ನಮಗೆ ನಷ್ಟವಾಗುತ್ತಿದೆ ಎಂದು ಮೋಸ ಮಾಡುತ್ತಿದ್ದಾರೆ ಎಂದು ಕೆ.ಮಂಜು ಗುಡುಗಿದ್ದಾರೆ.

ವಾಣಿಜ್ಯ ಮಂಡಳಿಗೆ ದೂರು

ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಲು ನಿರ್ಧರಿಸಿದ್ದಾರೆ ನಿರ್ಮಾಪಕ ಕೆ.ಮಂಜು. ಶರಣ್ ಈ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದು, ಸಂಚಿತಾ ಪಡುಕೋಣೆ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಚಿತ್ರವನ್ನ ದಯಾಳ್ ಪದ್ಮನಾಭನ್ ನಿರ್ದೇಶನ ಮಾಡಿದ್ದಾರೆ.

English summary
Kannada Producer K Manju express his outrage against Book My Show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada