»   » ಕೆ ಮಂಜು ಮಗನ ಸಿನಿಮಾ ಎಂಟ್ರಿಗೆ ಕಿಚ್ಚನಿಂದ ಸ್ವಾಗತ

ಕೆ ಮಂಜು ಮಗನ ಸಿನಿಮಾ ಎಂಟ್ರಿಗೆ ಕಿಚ್ಚನಿಂದ ಸ್ವಾಗತ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಗಂಡುಗಲಿ ನಿರ್ಮಾಪಕ ಅಂತಾಲೇ ಹೆಸರು ಪಡೆದಿರುವ ನಿರ್ಮಾಪಕ ಕೆ.ಮಂಜು ಅವರ ಮಗನನ್ನ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ ಎಂಬ ಸುದ್ದಿಯಾಗಿತ್ತು. ಇದೀಗ, ಈ ಚಿತ್ರಕ್ಕೆ ಟೈಟಲ್ ಕೂಡ ಅಂತಿಮವಾಗಿದೆ.

ಕೆ ಮಂಜು ಅವರ ಮಗ ಶ್ರೇಯಸ್ ಅಭಿನಯಿಸಲಿರುವ ಚೊಚ್ಚಲ ಚಿತ್ರಕ್ಕೆ 'ಪಡ್ಡೆಹುಲಿ' ಎಂದು ನಾಮಕರಣ ಮಾಡಲಾಗಿದೆ. ಪಡ್ಡೆಹುಲಿ ಅಂದಾಕ್ಷಣ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ರಾಜಾಹುಲಿ' ಸಿನಿಮಾ ನೆನಪಾಗುತ್ತಿದದೆ ಅಲ್ವಾ.! ಅಂದ್ಹಾಗೆ, 'ರಾಜಾಹುಲಿ' ಚಿತ್ರವನ್ನ ಕೂಡ ಇದೇ ಕೆ ಮಂಜು ನಿರ್ಮಾಣ ಮಾಡಿದ್ದರು. ಇದೀಗ, ಮಗನ ಚಿತ್ರಕ್ಕೆ ಹುಲಿ ಅಂತ ಹೆಸರಿಟ್ಟಿದ್ದು, ದೊಡ್ಡ ಸೌಂಡ್ ಮಾಡುವ ನಿರೀಕ್ಷೆ ಹುಟ್ಟಿಸಿದೆ.

ಹೊಸ ವರ್ಷಕ್ಕೆ ಸ್ಯಾಂಡಲ್ ವುಡ್ ಗೆ ಹೊಸ ನಾಯಕನ ಎಂಟ್ರಿ

 producer K Manju son movie titled paddehuli

'ರಾಜಾಹುಲಿ' ಚಿತ್ರವನ್ನ ನಿರ್ದೇಶನ ಮಾಡಿದ್ದ ಗುರುದೇಶಪಾಂಡೆ ಈ ಪಡ್ಡೆಹುಲಿ ಚಿತ್ರಕ್ಕೂ ಆಕ್ಷನ್ ಕಟ್ ಹೇಳಲಿದ್ದಾರೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಪ್ರೇಮಲೋಕ ಚಿತ್ರವನ್ನ ಈಗಿನ ಜನರೇಷನ್ ಯುವಕನಿಂದ ನೋಡಲು ಸಾಧ್ಯವೆಂದು ಈ ಕಥೆ ಮಾಡಿದ್ದಾರಂತೆ.

ಇನ್ನು ವಿಶೇಷ ಅಂದ್ರೆ, ನಿರ್ಮಾಪಕ ಕೆ ಮಂಜು ಅವರ ಮಗನ ಎಂಟ್ರಿಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಶುಭಕೋರಿದ್ದಾರೆ. ಟ್ವಿಟ್ಟರ್ ನಲ್ಲಿ ಶ್ರೇಯಸ್ ಗೆ ಸ್ವಾಗತ ಕೋರಿರುವ ಕಿಚ್ಚ, ಈ ಚಿತ್ರಕ್ಕೆ ಒಳ್ಳೆಯದಾಗಲಿ, ಈ ಯುವಕ ಮಿಂಚಲಿ ಎಂದು ಆಶಿಸಿದ್ದಾರೆ.

 producer K Manju son movie titled paddehuli

ಸದ್ಯ, ಚಿತ್ರಕಥೆ ಮತ್ತು ನಾಯಕನನ್ನ ನಿಗಧಿ ಮಾಡಿಕೊಂಡಿರುವ ಚಿತ್ರತಂಡ, ಕನ್ನಡದ ಹುಡುಗಿಯನ್ನೇ ನಾಯಕಿಯನ್ನಾಗಿಸಲು ಚಿಂತಿಸಿದೆಯಂತೆ. ಎಲ್ಲ ಅಂದುಕೊಂಡಂತೆ ಆದ್ರೆ, ಮುಂದಿನ ತಿಂಗಳು ಈ ಸಿನಿಮಾ ಸೆಟ್ಟೇರಲಿದೆಯಂತೆ.

English summary
Kannada cinema producer K Manju is introducing his son Sreyas to sandalwood, while Shreyas movie will be set in 2018, its titled as a paddehuli.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X