For Quick Alerts
  ALLOW NOTIFICATIONS  
  For Daily Alerts

  'ಪಡ್ಡೆಹುಲಿ' ಶ್ರೇಯಸ್ ಸ್ಟಂಟ್ ನೋಡಿ ಸುದೀಪ್ ಹೇಳಿದ್ದೇನು?

  |

  ಸ್ಯಾಂಡಲ್ ವುಡ್ ನ ಖ್ಯಾತ ನಿರ್ಮಾಪಕ ಕೆ ಮಂಜು ಪುತ್ರ ಶ್ರೇಯಸ್ ಮಂಜು ಪಡ್ಡೆಹುಲಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾ ರಿಲೀಸ್ ಆಗಿ ತಿಂಗಳುಗಳೆ ಕಳೆಯಿತು, ಆದ್ರೆ ಮುಂದಿನ ಸಿನಿಮಾಗೆ ಇನ್ನು ಗ್ರೀನ್ ಸಿಗ್ನಲ್ ನೀಡಿಲ್ಲ ಶ್ರೇಯಸ್.

  ಒಂದೇ ಸಿನಿಮಾ ಮಾಡಿದ ನಂತರ ಶ್ರೇಯಸ್ ಈಗ ಏನ್ಮಾಡ್ತಿದ್ದಾರೆ ಎನ್ನುವುದು ಚಿತ್ರಾಭಿಮಾನಿಗಳಲ್ಲಿ ಕಾಡುತ್ತಿತ್ತು. ಆದ್ರೀಗ ಆ ಪ್ರಶ್ನೆಗ ಉತ್ತರ ಸಿಕ್ಕಿದೆ. ಶ್ರೇಯರ್ ಈಗ ಮತ್ತೊಂದು ಕಲೆಯನ್ನು ಕರಗತಮಾಡಿಕೊಳ್ಳುವಲ್ಲಿ ಬ್ಯುಸಿಯಾಗಿದ್ದಾರೆ. ಹೌದು, ಶ್ರೇಯಸ್ ಈಗ ಕೊರಿಯನ್ ಮಾರ್ಷಲ್ ಆರ್ಟ್ ಟೇಕ್ವಾಂಡೋ ಕಲಿಯುತ್ತಿದ್ದಾರೆ.

  ಸಿನಿಮಾ ಲೇಖಕರಿಗೆ ನಿರ್ಮಾಪಕ ಕೆ ಮಂಜು ಅವರಿಂದ ಭರ್ಜರಿ ಅವಕಾಶ

  ಈಗಾಗಲೆ ಸಾಕಷ್ಟು ಮಾರ್ಷಲ್ ಆರ್ಟ್ ಅನ್ನು ಅಭ್ಯಾಸ ಮಾಡಿದ್ದಾರೆ ಶ್ರೇಯಸ್. ಅಭ್ಯಾಸದ ಒಂದು ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ ಶ್ರೇಯಶ್. ಈ ವೀಡಿಯೋ ನೋಡಿದ ಕಿಚ್ಚ ಸುದೀಪ್ ಶ್ರೇಯಸ್ ಸ್ಟಂಟ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  "ಅದ್ಭುತ ಶ್ರೇಯಸ್ ಮಂಜು. ನಿಮ್ಮ ಉತ್ಸಾಹ ಇನ್ನು ಹೆಚ್ಚಾಗಲಿ" ಎಂದು ಎಂದು ಟ್ವೀಟ್ ಮಾಡಿದ್ದಾರೆ. ಯುವ ಪ್ರತಿಭೆಗಳಿಗೆ ಕಿಚ್ಚ ಸದಾ ಸಾಥ್ ನೀಡುತ್ತಲೆ ಇರುತ್ತಾರೆ. ಸದ್ಯ ಶ್ರೇಯಸ್ ಗೂ ಪ್ರೋತ್ಸಾಹ ನೀಡಿದ್ದಾರೆ ಮಾಣಿಕ್ಯ.

  ಈಗಾಗಲೆ ಸಿನಿಮಾಗಾಗಿ ಅಭಿನಯ ಮತ್ತು ನೃತ್ಯ ಕಲಿತಿರುವ ಶ್ರೇಯಸ್ ಈಗ ಮಾರ್ಷಲ್ ಆರ್ಟ್ ಕೂಡ ಕರಗತ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಪಡ್ಡೆಹುಲಿ ಮೂಲಕ ಮಿಂಚಿರುವ ಶ್ರೇಯಸ್ ಮುಂದಿನ ಸಿನಿಮಾ ಯಾವುದು ಎನ್ನುವ ಕುತೂಹಲ ಚಿತ್ರಾಭಿಮಾನಿಗಳಲ್ಲಿ ಇದೆ. ಸದ್ಯ ಕಲಿಯುತ್ತಿರುವ ಕಲೆಯನ್ನು ಮುಂದಿನ ಸಿನಿಮಾದಲ್ಲಿ ಅಳವಡಿಸಿಕೊಳ್ಳುತ್ತಾರಾ ಎನ್ನುವುದು ಕಾದು ನೋಡಬೇಕು.

  English summary
  Kannada famous producer K. Manju son Shreyas Manju is practicing Korean martial art Taekwondo. Kiccha Sudeep encourage to Shreyas Manju.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X