»   » ನಾ'ಪತ್ತೆ'ಯಾಗಿದ್ದಾರೆ 'ಗಂಡುಗಲಿ' ನಿರ್ಮಾಪಕ ಕೆ.ಮಂಜು

ನಾ'ಪತ್ತೆ'ಯಾಗಿದ್ದಾರೆ 'ಗಂಡುಗಲಿ' ನಿರ್ಮಾಪಕ ಕೆ.ಮಂಜು

Posted By:
Subscribe to Filmibeat Kannada

'ಗಂಡುಗಲಿ' ಅಂತಲೇ ಗಾಂಧಿನಗರದಲ್ಲಿ ಖ್ಯಾತಿ ಪಡೆದಿರುವ ನಿರ್ಮಾಪಕ ಕೆ.ಮಂಜು. ಒಂದ್ಕಾಲದಲ್ಲಿ ಸೂಪರ್ ಹಿಟ್ ಚಿತ್ರಗಳ ಸರದಾರನಾಗಿದ್ದ ಕೆ.ಮಂಜು, ಇತ್ತೀಚೆಗಂತೂ ಗಾಂಧಿನಗರದಲ್ಲಿ ಪತ್ತೆನೇ ಇಲ್ಲ.

ಕಳೆದ ವರ್ಷ ಕೆ.ಮಂಜು ಮೂರು ಚಿತ್ರಗಳನ್ನ ನಿರ್ಮಿಸಿದ್ದರು. ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ದಿಲ್ ರಂಗೀಲಾ', ರಾಗಿಣಿ ನಟಿಸಿರುವ 'ರಾಗಿಣಿ ಐ.ಪಿ.ಎಸ್' ಮತ್ತು ರಿಯಲ್ ಸ್ಟಾರ್ ಉಪ್ಪಿಯ 'ಸೂಪರ್ ರಂಗ'. ಆದ್ರೆ, ಕೆ.ಮಂಜು ದುರಾದೃಷ್ಟಕ್ಕೆ ಈ ಮೂರೂ ಚಿತ್ರಗಳು ಮಕಾಡೆ ಮಲಗಿತು.

Producer K.Manju to launch two new movies soon

ಇದರಿಂದ ''ಕೈ ಸುಟ್ಟುಕೊಂಡಿರುವ ಕೆ.ಮಂಜು ನಾಪತ್ತೆಯಾಗಿದ್ದಾರೆ. ಸ್ಯಾಂಡಲ್ ವುಡ್ ಕಡೆ ಅವರು ಮುಖ ಮಾಡ್ತಿಲ್ಲ. ಕೊಬ್ರಿ ಮಂಜು ಖಜಾನೆ ಖಾಲಿಯಾಗಿದೆ'', ಅಂತೆಲ್ಲಾ ಗಾಂಧಿನಗರದವ್ರು ಮಾತನಾಡಿಕೊಂಡಿದ್ದರು. ಆದ್ರೆ, ಅವರೆಲ್ಲರ ಲೆಕ್ಕಾಚಾರ ತಲೆಕೆಳಗಾಗುವ ಹಾಗೆ ಸದ್ದಿಲ್ಲದೇ ಕೆಲಸ ಶುರು ಮಾಡಿದ್ದಾರೆ ಕೆ.ಮಂಜು. [ಉಪೇಂದ್ರ ಸೂಪರೋ ರಂಗ; ಮಂಜು ಬಂಡವಾಳ]

ಇಮ್ರಾನ್ ಸರ್ದಾರಿಯಾ ನೃತ್ಯ ನಿರ್ದೇಶನದಿಂದ, ಚಿತ್ರ ನಿರ್ದೇಶನಕ್ಕೆ ಅಡಿಯಿಡುತ್ತಿರುವ ಸುದ್ದಿ ಹಳೆಯದ್ದೇ. ಸೈಲೆಂಟಾಗಿ ಸ್ಕ್ರಿಪ್ಟ್ ಮಾಡಿರುವ ಇಮ್ರಾನ್ ಸರ್ದಾರಿಯಾ ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ಬಂಡವಾಳ ಹಾಕುತ್ತಿರುವುದು ಇದೇ ಕೆ.ಮಂಜು.

Producer K.Manju to launch two new movies soon

'ಉಪ್ಪು-ಹುಳಿ-ಖಾರ' ಅನ್ನುವ ಟೈಟಲ್ ನಡಿ, ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಕ್ಕೆ ಕೆ.ಮಂಜು ಚಾಲನೆ ನೀಡಿದ್ದಾರೆ. ಈ ಚಿತ್ರದೊಂದಿಗೆ ಯಶ್ ಕಾಲ್ ಶೀಟ್ ಕೂಡ ಕೆ.ಮಂಜು ಜೇಬ್ ನಲ್ಲಿದ್ದು, ರಾಕಿಂಗ್ ಸ್ಟಾರ್ ಗಾಗಿ ಸಬ್ಜೆಕ್ಟ್ ಹುಡುಕಾಟದಲ್ಲಿದ್ದಾರೆ. [ಇಮ್ರಾನ್ ಸರ್ದಾರಿಯಾ ಮಲ್ಟಿ ಸ್ಟಾರರ್ ಚಿತ್ರಕ್ಕೆ ಸಜ್ಜು]

ಸಿನಿಮಾ ಇಲ್ಲ, ಕಾಲ್ ಶೀಟ್ ಇಲ್ಲ...ಕೆ.ಮಂಜು ಖಾಲಿ ಅನ್ನುತ್ತಿದ್ದವರ ಬಾಯಿಗೆ ಸದ್ಯದಲ್ಲೇ ತಮ್ಮ ಹೊಸ ಚಿತ್ರ ಲಾಂಚ್ ಮಾಡುವ ಮೂಲಕ ಕೆ.ಮಂಜು ಬೀಗ ಜಡಿಯಲಿದ್ದಾರೆ. (ಫಿಲ್ಮಿಬೀಟ್ ಕನ್ನಡ)

English summary
Producer K.Manju, who had disappeared from Sandalwood since few months, is said to be busy with the Pre-Production work of two big projects.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada