»   » 'ಮುನಿರತ್ನ ಕುರುಕ್ಷೇತ್ರ' ಸೃಷ್ಟಿಯಾಗಿದ್ದು ಇದೇ ಕಾರಣದಿಂದ.!

'ಮುನಿರತ್ನ ಕುರುಕ್ಷೇತ್ರ' ಸೃಷ್ಟಿಯಾಗಿದ್ದು ಇದೇ ಕಾರಣದಿಂದ.!

Posted By:
Subscribe to Filmibeat Kannada

'ಕುರುಕ್ಷೇತ್ರ' ಸಿನಿಮಾದ ಹವಾ ಜೋರಾಗಿದೆ. ಕನ್ನಡದಲ್ಲಿ ಈ ರೀತಿಯ ದೊಡ್ಡ ಬಜೆಟ್ ಸಿನಿಮಾ ಬರುತ್ತಿರುವುದನ್ನು ನೋಡಿ ಎಲ್ಲರೂ ಹೆಮ್ಮೆ ಪಡುತ್ತಿದ್ದಾರೆ. ಆದರೆ ನಿರ್ಮಾಪಕ ಮುನಿರತ್ನ ಇಂತಹ ಮಹತ್ವಾಕಾಂಕ್ಷೆಯ ಸಿನಿಮಾ ಮಾಡುವುದಕ್ಕೂ ಒಂದು ಕಾರಣ ಇದೆ.

'ಕುರುಕ್ಷೇತ್ರ'ಕ್ಕೆ ಅದ್ಧೂರಿ ಚಾಲನೆ: ಎಲ್ಲ ಊಹಾಪೋಹಗಳಿಗೆ ಸಿಕ್ತು ಉತ್ತರ

ನಿರ್ಮಾಪಕ ಮುನಿರತ್ನ 'ಕುರುಕ್ಷೇತ್ರ' ಚಿತ್ರವನ್ನು ಕೈಗೆತ್ತಿಕೊಂಡಿದ್ದು, ಯಾಕೆ ಅಂತ ಹೇಳಿದ್ದಾರೆ. ''ನಾವು ಪರಭಾಷೆ ಸಿನಿಮಾಗಳಿಗೆ ಪೈಪೋಟಿ ಕೊಡಬೇಕು. ಅದು ನನ್ನ ಗುರಿ. ಕನ್ನಡ ಚಿತ್ರರಂಗದ 75 ವರ್ಷಗಳ ಇತಿಹಾಸದಲ್ಲಿ ಸಂಪೂರ್ಣ ಕುರುಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವ ಸಿನಿಮಾವೂ ತೆರೆ ಕಂಡಿಲ್ಲ. ಜೊತೆಗೆ ಹಿಂದೆ ಬರುತ್ತಿದ್ದ ಅದ್ಧೂರಿ ಪೌರಾಣಿಕ ಸಿನಿಮಾಗಳು ಈಗ ಕಡಿಮೆ ಆಗಿದೆ. ಅದಕ್ಕೆ ನಾವು 'ಕುರುಕ್ಷೇತ್ರ' ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದೇವೆ'' ಎಂದು ಮುನಿರತ್ನ ಹೇಳಿಕೊಂಡಿದ್ದಾರೆ.

'ಕುರುಕ್ಷೇತ್ರ' ಚಿತ್ರದ ಯಾವ್ಯಾವ ಪಾತ್ರಗಳಲ್ಲಿ ಯಾವ್ಯಾವ ನಟರು ಮಿಂಚಲಿದ್ದಾರೆ ನೋಡಿ..

Producer Munirathna spoke about 'Kurukshetra' movie.

ಅಂದಹಾಗೆ, ಮುನಿರತ್ನ ಅವರ 'ಕುರುಕ್ಷೇತ್ರ' ಚಿತ್ರವನ್ನು ನಾಗಣ್ಣ ನಿರ್ದೇಶನ ಮಾಡುತ್ತಿದ್ದಾರೆ. ದರ್ಶನ್ ಅವರ 50ನೇ ಸಿನಿಮಾ ಇದಾಗಿದ್ದು, ಚಿತ್ರದ ಮುಹೂರ್ತ ಆಗಸ್ಟ್ 6ರಂದು ಅದ್ಧೂರಿಯಾಗಿ ನೆರವೇರಿತು.

English summary
Producer Munirathna spoke about 'Kurukshetra' movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada