For Quick Alerts
  ALLOW NOTIFICATIONS  
  For Daily Alerts

  ರಕ್ಷಿತ್ ಶೆಟ್ಟಿಯಿಂದ ದೂರವಾಗಿ ಹೀರೋ ಆಗ್ತಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ!

  |

  ಸ್ಯಾಂಡಲ್‌ವುಡ್ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಹೊಸ ಹೆಜ್ಜೆ ಇಡೋಕೆ ಮುಂದಾಗಿದ್ದಾರೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಮತ್ತು ಅವನೇ ಶ್ರೀಮನ್ನಾರಾಯಣ ಚಿತ್ರಗಳನ್ನು ನಿರ್ಮಾಣ ಮಾಡಿದ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು ನಟನಾಗುವ ಮೂಲಕ ತಮ್ಮ ಆಸೆಯನ್ನು ಈಡೇರಿಸಿಕೊಳ್ಳಲು ಸಜ್ಜಾಗಿದ್ದಾರೆ.

  ಪುಷ್ಕರ್ ಮಲ್ಲಿಕಾರ್ಜುನಯ್ಯ ಕನ್ನಡದಲ್ಲಿ ಸಾಕಷ್ಟು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಸದ್ಯ ಆಶಿಕಾ ರಂಗನಾಥ್ ಮತ್ತು ಶರಣ್ ಅಭಿನಯದ ಅವತಾರ ಪುರುಷ ಸಿನಿಮಾ ತೆರೆಗೆ ಬರಬೇಕಿದೆ. ಇದೇ ಬೆನ್ನಲ್ಲೇ ಈಗ ಹೊಸ ಸದ್ದಿಯೊಂದು ಕೇಳಿ ಬರುತ್ತಿದೆ. ಇನ್ನು ಮುಂದೆ ಪುಷ್ಕರ್ ಅವರು ನಿರ್ಮಾಪಕನಾಗಿ ಮಾತ್ರ ಅಲ್ಲ, ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ.

  ಹೌದು ಹಿರೋಗಳಿಗೆ ದುಡ್ಡು ಹಾಕಿ ಸಿನಿಮಾ ಮಾಡುತ್ತಿದ್ದ, ಪುಷ್ಕರ್ ಅವರು ಈಗ ಸ್ವತಃ ಅವರೆ ಹೀರೊ ಆಗುತ್ತಿದ್ದಾರೆ. ಇದಕ್ಕಾಗಿ ನಾಲ್ಕು ವರ್ಷಗಳಿಂದ ಸಾಕಷ್ಟು ತಯಾರಿ ನಡೆಸಿದ್ದಾರೆ ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಮುಂದೆ ಓದಿ.

  2 ವರ್ಷ ನಾಯಕನಾಗಲು ಪೂರ್ವ ತಯಾರಿ!

  2 ವರ್ಷ ನಾಯಕನಾಗಲು ಪೂರ್ವ ತಯಾರಿ!

  ಪುಷ್ಕರ್ ಮಲ್ಲಿಕಾರ್ಜುನ್‌ ಅವರಿಗೆ ಮೊದಲಿನಿಂದಲೂ ಹೀರೋ ಆಗ್ಬೇಕು ಎನ್ನುವ ಆಸೆ ಇದೆಯಂತೆ. ಹಾಗಾಗಿ ಹಲವು ವರ್ಷಗಳಿಂದ ಹೀರೋ ಆಗಲು ತಯಾರಿ ನಡೆಸಿದ್ದಾರಂತೆ. ತಮ್ಮ ನಟನಾ ವೃತ್ತಿಜೀವನದ ಬಗ್ಗೆ ಮಾಧ್ಯಮದೊಟ್ಟಿಗೆ ಮಾತನಾಡಿದ ಅವರು, "ಕಳೆದ ನಾಲ್ಕು ವರ್ಷಗಳಿಂದ ನಾನು ನಟನಾಗಲು ಹಂಬಲಿಸುತ್ತಿದ್ದೆ. ನಾನು 2 ವರ್ಷಗಳನ್ನು ಇದಕ್ಕಾಗಿ ಮೀಸಲಿಟ್ಟಿದ್ದೇನೆ ಮತ್ತು ನಟನೆಯ ಸೂಕ್ಷ್ಮ ವ್ಯತ್ಯಾಸಗಳನ್ನು ಕಲಿಯಲು 300 ಗಂಟೆಗಳು ಕಾರ್ಯಾಗಾರಗಳಿಗೆ ಹಾಜರಾಗಿದ್ದೇನೆ. ನಾನು ಈಗ ಆತ್ಮವಿಶ್ವಾಸ ಹೊಂದಿದ್ದೇನೆ ಮತ್ತು ಕ್ಯಾಮೆರಾವನ್ನು ಎದುರಿಸಲು ಸಿದ್ಧನಾಗಿದ್ದೇನೆ." ಎಂದಿದ್ದಾರೆ.

  ಸೂಪರ್‌ ಸ್ಟಾರ್ ಪಾತ್ರದಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ!

  ಸೂಪರ್‌ ಸ್ಟಾರ್ ಪಾತ್ರದಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ!

  ಈ ಚಿತ್ರದ ಬಗ್ಗೆ ಒಂದಷ್ಟು ಕುತೂಹಕಾರಿ ಸಂಗತಿಗಳು ಕೂಡ ಹೊರ ಬಂದಿವೆ. ಈ ಚಿತ್ರದ ಕಥೆ 'ಕೌ ಥೆರಪಿ' ಮೇಲೆ ಆಧಾರವಾಗಿ ಇದೆಯಂತೆ. ಚಿತ್ರದಲ್ಲಿ ಪುಷ್ಕರ್ ಮಲ್ಲಿಕಾರ್ಜುನಯ್ಯ ಅವರು 'ಸೂಪರ್ ಸ್ಟಾರ್' ಪಾತ್ರವನ್ನು ನಿರ್ವಹಿಸಲಿದ್ದಾರಂತೆ. ಹಾಗಾಗಿ ಪುಷ್ಕರ್ ಮಾತ್ರದ ಬಗ್ಗೆ ಹೆಚ್ಚಿನ ಕುತೂಹಲಗಳು ಹುಟ್ಟಿಕೊಂಡಿವೆ. ಸೂಪರ್ ಸ್ಟಾರ್ ಅವರಾತದಲ್ಲಿ ಪುಷ್ಕರ್ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಬಗ್ಗೆ ನಿರೀಕ್ಷೆಗಳು ಮೂಡಿವೆ.

  ಚಿತ್ರೀಕರಣಕ್ಕೆ ಸಂಪೂರ್ಣ ಸಿದ್ಧತೆ!

  ಚಿತ್ರೀಕರಣಕ್ಕೆ ಸಂಪೂರ್ಣ ಸಿದ್ಧತೆ!

  ಪುಷ್ಕರ್ ಫಿಲಂಸ್ ಬ್ಯಾನರ್‌ನಡಿಯಲ್ಲಿ ಫೆಬ್ರವರಿ 6 ರಂದು ಚಿತ್ರ ಅಧಿಕೃತವಾಗಿ ಪ್ರಾರಂಭವಾಗಲಿದೆ ಎಂದು ತಿಳಿದು ಬಂದಿದೆ. ನಂತರ ತಡ ಮಾಡದೇ ಚಿತ್ರೀಕರಣ ಪ್ರಾರಂಭಿಸಲು ಎಲ್ಲಾ ತಯಾರಿಗಳು ಮಾಡಿಕೊಳ್ಳಲಾಗಿದೆ. ಚಿತ್ರವನ್ನು ಎರಡು ಶೆಡ್ಯೂಲ್‌ಗಳಲ್ಲಿ ಚಿತ್ರೀಕರಿಸಲಾಗುವುದು. ಮುಹೂರ್ತದ ನಂತರ, ಕುದುರೆಮುಖದಲ್ಲಿ ಚಿತ್ರೀಕರಣ ನಡೆಯುತ್ತದೆ. ಅಲ್ಲೇ 50% ಭಾಗದ ಚಿತ್ರೀಕರಣ ಮಾಡಲಾಗುತ್ತದೆಯಂತೆ. ನಂತರ ಬೆಂಗೂರಿನಲ್ಲೂ ಕೂಡ ಸಿನಿಮಾ ಶೂಟಿಂಗ್ ನಡೆಯಲಿದೆಯಂತೆ.

  ಪುಷ್ಕರ್‌ಗಾಗಿ ಬಂದ ಬಾಲಿವುಡ್ ನಿರ್ದೇಶಕ!

  ಪುಷ್ಕರ್‌ಗಾಗಿ ಬಂದ ಬಾಲಿವುಡ್ ನಿರ್ದೇಶಕ!

  'ಕಪೂರ್ ಅಂಡ್ ಸನ್ಸ್‌' ಮತ್ತು ವಿಕ್ಕಿ ಕೌಶಲ್ ಅಭಿನಯದ 'ಭೂತ್' ಚಿತ್ರಕ್ಕೆ ಸಹ-ನಿರ್ದೇಶಕನಾಗಿ ಕೆಲಸ ಮಾಡಿದ ಆದಿತ್ಯ ಗುಣವಂತೆ ಹೆಲ್ಮ್ ಈ ಚಿತ್ರದ ಮೂಲಕ ಚೊಚ್ಚಲ ನಿರ್ದೇಶನ ಮಾಡಲಿದ್ದಾರೆ. ಸದ್ಯಕ್ಕೆ ಚಿತ್ರದ ಟೈಟಲ್ ಇನ್ನೂ ಕೂಡ ಫಿಕ್ಸ್ ಆಗಿಲ್ಲ. ಈ ಚಿತ್ರಕ್ಕೆ ಹರೀಶ್ ಛಾಯಾಗ್ರಹಣ ಇರಲಿದೆ. ಮತ್ತು ಸಂಗೀತವನ್ನು ನಿರ್ವಹಿಸುತ್ತಿರುವವರು ಪ್ರವೀಣ್ ಇದು ಇವರ ಮೊದಲ ಸಿನಿಮಾ ಆಗಿದೆ.

  English summary
  Producer Pushkara Mallikarjunaiah Become Hero After Controversy With Rakshith Shetty, Know More,
  Saturday, February 5, 2022, 15:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X