»   » ಮತ್ತೆರಡು ತಮಿಳು ಚಿತ್ರಗಳು ಕನ್ನಡಕ್ಕೆ ರೀಮೆಕ್

ಮತ್ತೆರಡು ತಮಿಳು ಚಿತ್ರಗಳು ಕನ್ನಡಕ್ಕೆ ರೀಮೆಕ್

Posted By:
Subscribe to Filmibeat Kannada

ಕಾಲಿವುಡ್ ಸೂಪರ್ ಸ್ಟಾರ್ ರಜನಿಕಾಂತ್ ಅವರ 'ಲಿಂಗಾ' ಚಿತ್ರಕ್ಕೆ ಬಂಡವಾಳ ಹೂಡಿ, ತದನಂತರ ಬಾಲಿವುಡ್ ನ ಬಾಕ್ಸಾಫೀಸ್ ಸುಲ್ತಾನ ಸಲ್ಮಾನ್ ಖಾನ್ ಅವರ ಸೂಪರ್ ಹಿಟ್ 'ಭಜರಂಗಿ ಭಾಯ್ ಜಾನ್' ಚಿತ್ರಕ್ಕೆ ಬಂಡವಾಳ ಹಾಕಿ ಖ್ಯಾತಿ ಗಳಿಸಿದ ಕನ್ನಡದ ನಟ ಕಮ್ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಇದೀಗ ಹೊಸ ಸಾಹಸ ಮಾಡಲು ಹೊರಟಿದ್ದಾರೆ.

ತಮಿಳು ನಟ ಧನುಷ್ ಅವರ 'ವಿಐಪಿ' (ವೇಲೈಯಿಲಾ ಪಟ್ಟದಾರಿ) ಹಾಗೂ 'ವಿಸಾರಣೈ' ಎಂಬ ಎರಡು ತಮಿಳು ಚಿತ್ರಗಳನ್ನು ಕನ್ನಡಕ್ಕೆ ರೀಮೆಕ್ ಮಾಡುವ ಹೊಸ ಯೋಜನೆಯೊಂದನ್ನು ಹಾಕಿಕೊಂಡಿದ್ದಾರೆ.['ವೀಕೆಂಡ್ ವಿತ್ ರಮೇಶ್' ಬಗ್ಗೆ ವೀಕ್ಷಕರಲ್ಲಿ ಭುಗಿಲೆದ್ದ ಅಸಮಾಧಾನ.!]

Producer Rockline Chooses Dhanush's Movies To Remake In Kannada

ಈಗಾಗಲೇ ತೆಲುಗಿನ 'ಭಲೇ ಭಲೇ ಮಗಾಡಿವೊಯ್' ಚಿತ್ರದ ರೀಮೆಕ್ ಹಕ್ಕನ್ನು ಖರೀದಿಸಿರುವ ರಾಕ್ ಲೈನ್ ವೆಂಕಟೇಶ್ ಅವರು ಕನ್ನಡದಲ್ಲಿ 'ಗಂಡು ಎಂದರೆ ಗಂಡು' ಎಂಬುದಾಗಿ ಹೊರತಂದಿದ್ದಾರೆ.

ಬಹುತೇಕ ಚಿತ್ರದ ಶೂಟಿಂಗ್ ಸಾಗುತ್ತಿದ್ದು, ಮೊದಲ ಹಂತದ ಶೂಟಿಂಗ್ ಕೂಡ ಮುಗಿದಿದೆ. ಚಿತ್ರದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ನಟಿ ಶಾನ್ವಿ ಶ್ರೀವಾತ್ಸವ್ ಅವರು ಮಿಂಚುತ್ತಿದ್ದು, ರಮೇಶ್ ಅರವಿಂದ್ ಅವರು ಆಕ್ಷನ್-ಕಟ್ ಹೇಳುತ್ತಿದ್ದಾರೆ.[ರಮೇಶ್-ಗಣೇಶ್ ಕಾಂಬಿನೇಷನ್ ನ ಚಿತ್ರದ ಹೆಸರೇನು ಗೊತ್ತಾ?]

ಇದೀಗ 'ಗಂಡು ಎಂದರೆ ಗಂಡು' ಪೂರ್ತಿ ಆಗೋ ಮೊದಲೇ ಧನುಷ್ ಅವರ ನಿರ್ಮಾಣದ 'ವಿಸಾರಣೈ' ಹಾಗೂ ಅವರ ನಟನೆಯ 'ವೇಲೈಯಿಲಾ ಪಟ್ಟದಾರಿ' ಎಂಬ ಸೂಪರ್ ಹಿಟ್ ಎರಡು ತಮಿಳು ಚಿತ್ರಗಳನ್ನು ಕನ್ನಡಕ್ಕೆ ತರುವ ಪೂರ್ವ ತಯಾರಿ ನಡೆಸುತ್ತಿದ್ದಾರೆ. ಇತ್ತೀಚೆಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಖ್ಯಾತ ಕಾರ್ಯಕ್ರಮ 'ವೀಕೆಂಡ್ ವಿತ್ ರಮೇಶ್' ಸಾಧಕರ ಸೀಟ್ ನಲ್ಲಿ ತಮ್ಮ ಮನದಾಳ ಮಾತನ್ನು ಬಿಚ್ಚಿಟ್ಟಿದ್ದರು.

'ವಿಸಾರಣೈ' ಚಿತ್ರದ ರೀಮೆಕ್ ಹಕ್ಕನ್ನು ಈಗಾಗಲೇ ಚಿತ್ರದ ನಿರ್ದೇಶಕ ವೆಟ್ರಿಮಾರನ್ ಅವರಿಂದ ಖರೀದಿ ಮಾಡಿರುವ ರಾಕ್ ಲೈನ್ ವೆಂಕಟೇಶ್ ಅವರು ಈ ಚಿತ್ರವನ್ನು ಕನ್ನಡ ಮತ್ತು ಹಿಂದಿ ಭಾಷೆಯಲ್ಲಿ ತರಲು ಯೋಚಿಸುತ್ತಿದ್ದಾರೆ.[ಫೆಬ್ರವರಿಯಲ್ಲಿ 'ಭಲೇ ಭಲೇ' ಅಂತಾರೆ ರಮೇಶ್-ಗಣೇಶ್]

ಅತ್ಯುತ್ತಮ ತಮಿಳು ಚಿತ್ರ ರಾಷ್ಟ್ರಪ್ರಶಸ್ತಿ [ಅಮಿತಾಬ್ ಬಚ್ಚನ್, ಕಂಗನಾಗೆ ರಾಷ್ಟ್ರ ಪ್ರಶಸ್ತಿ] ಗೆದ್ದ 'ವಿಸಾರಣೈ' ಪೊಲೀಸರ ದೌರ್ಜನ್ಯ ಮತ್ತು ಆಡಳಿತಶಾಹಿಯ ಭ್ರಷ್ಟಾಚಾರದ ಬಗೆಗಿನ ಈ ಸಿನಿಮಾ ಸುಮಾರು ಮೂರು ವಿಭಾಗಗಳಲ್ಲಿ ರಾಷ್ಟ್ರಪ್ರಶಸ್ತಿ ಗಳಿಸಿತ್ತು. ಜೊತೆಗೆ ವೆನಿಸ್ ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲೂ ಪ್ರಶಸ್ತಿ ಗಳಿಸಿತ್ತು.

ಸದ್ಯಕ್ಕೆ 'ಗಂಡು ಎಂದರೆ ಗಂಡು' ಸಿನಿಮಾದ ಮಾತಿನ ಭಾಗದ ಕೆಲಸಗಳು ಮುಗಿದ ನಂತರ 'ವಿಸಾರಣೈ' ಕೈಗೆತ್ತಿಕೊಳ್ಳಲಾಗುವುದು ಎಂದು ರಾಕ್ ಲೈನ್ ತಿಳಿಸಿದ್ದಾರೆ. ಏಪ್ರಿಲ್ 15 ರಿಂದ ಚಿತ್ರದ ಸೆಕೆಂಡ್ ಶೆಡ್ಯೂಲ್ ಆರಂಭವಾಗಲಿದೆ. 'ಗಂಡು ಎಂದರೆ ಗಂಡು' ಮತ್ತು 'ವಿಸಾರಣೈ' ಚಿತ್ರದ ಶೂಟಿಂಗ್ ಸ್ಟಿಲ್ಸ್ ನೋಡಿ ಸ್ಲೈಡ್ಸ್ ಗಳಲ್ಲಿ..

-
ಮತ್ತೆರಡು ತಮಿಳು ಚಿತ್ರಗಳು ಕನ್ನಡಕ್ಕೆ ರೀಮೆಕ್

ಮತ್ತೆರಡು ತಮಿಳು ಚಿತ್ರಗಳು ಕನ್ನಡಕ್ಕೆ ರೀಮೆಕ್

-
-
-
-
-
-
-
-
-
-
-
-
English summary
Sandalwood's renowned actor turned producer Rockline Venkatesh is soon to remake Tamil hit movies in Kannada. The Lingaa and Bajrangi Bhaijaan producer Rockline Venkatesh has chosen Tamil Actor Dhanush's movies 'VIP' (Velaiyilla Pattathari) and 'Visaranai' to be remade in Kannada.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada