For Quick Alerts
  ALLOW NOTIFICATIONS  
  For Daily Alerts

  ಡಾ.ವಿಷ್ಣುವರ್ಧನ್ ಹೆಸರಿಗೆ ಅಕ್ಷರಶಃ ಶೋಭೆ ತರುವ ಕೆಲಸ ಇದು.!

  By Harshitha
  |

  'ನಾಗರಹಾವು' ಎಂದ ತಕ್ಷಣ ಪುಟ್ಟಣ್ಣ ಕಣಗಾಲ್ ನಿರ್ದೇಶನದ, ಡಾ.ವಿಷ್ಣುವರ್ಧನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ ಮೊದಲ ಸಿನಿಮಾ ನೆನಪಾಗಬಹುದು.

  ಅದರ ಜೊತೆಗೆ ಇನ್ನೂ ಬಿಡುಗಡೆಗೆ ಸಿದ್ಧವಾಗುತ್ತಿರುವ ವಿಷ್ಣುದಾದಾ ರವರ 201ನೇ ಸಿನಿಮಾ ಕೂಡ ಕನ್ನಡ ಸಿನಿಪ್ರಿಯರ ಬಾಯಲ್ಲಿ ನುಲಿದಾಡುತ್ತಿದೆ. ಅಷ್ಟರಮಟ್ಟಿಗೆ ಪ್ರಚಾರ ಗಿಟ್ಟಿಸುವಲ್ಲಿ 'ನಾಗರಹಾವು' ಸಿನಿಮಾ ಯಶಸ್ವಿ ಆಗಿದೆ. [ಬುಸುಗುಡುವ 'ನಾಗರಹಾವು' ಟೀಸರ್ ಸೂಪರ್ರೋ ಸೂಪರ್.!]

  ಎಲ್ಲಾ ದೃಷ್ಟಿಯಿಂದಲೂ ಅದ್ಧೂರಿಯಾಗಿರಬೇಕೆಂಬ ಆಸಯಿಂದ 'ನಾಗರಹಾವು' ಚಿತ್ರ ನಿರ್ಮಾಣಕ್ಕಿಳಿದವರು ಸೊಹೈಲ್ ಅನ್ಸಾರಿ ಮತ್ತು ಸಾಜಿದ್ ಖುರೇಶಿ. ಅದರ ಮುಂದುವರಿದ ಭಾಗವಾಗಿ ಆಡಿಯೋ ಬಿಡುಗಡೆ ಕಾರ್ಯಕ್ರಮವನ್ನೂ ಝಗಮಗಿಸುವ ವೇದಿಕೆಯಲ್ಲಿ ಸೂಪರ್ ಸ್ಟಾರ್ ರಜಿನಿಕಾಂತ್, ಅನುಷ್ಕಾ ಶೆಟ್ಟಿ ಸೇರಿದಂತೆ ಅನೇಕ ಬಹುಭಾಷಾ ತಾರೆಯರೊಂದಿಗೆ ನಡೆಸಲು ಸಂಪೂರ್ಣ ತಯಾರಿ ನಡೆಸಲಾಗಿತ್ತು. ಅದಕ್ಕಾಗಿ 25 ಲಕ್ಷ ರೂಪಾಯಿ ಖರ್ಚು ಮಾಡಲು ನಿರ್ಮಾಪಕ ಸಾಜಿದ್ ಖುರೇಶಿ ರೆಡಿಯಿದ್ದರು.

  ಆದರೆ, ಪ್ರಚಾರದ ದೃಷ್ಟಿಯಿಂದ 25 ಲಕ್ಷ ರೂಪಾಯಿ ವ್ಯಯ ಮಾಡದೆ, ಸಾಹಸಸಿಂಹ ಡಾ.ವಿಷ್ಣುವರ್ಧನ್ ಹೆಸರಲ್ಲಿ ಒಂದು ಅರ್ಥ ಪೂರ್ಣ ಕಾರ್ಯಕ್ರಮ ಮಾಡಲು ನಿರ್ಮಾಪಕ ಸೊಹೈಲ್ ಅನ್ಸಾರಿ ಮುಂದಾಗಿದ್ದಾರೆ. ಮುಂದೆ ಓದಿ....

  25 ಲಕ್ಷ ರೂಪಾಯಿಯಲ್ಲಿ ಹೀಗೂ ಮಾಡಬಹುದು.!

  25 ಲಕ್ಷ ರೂಪಾಯಿಯಲ್ಲಿ ಹೀಗೂ ಮಾಡಬಹುದು.!

  ಆಡಿಯೋ ರಿಲೀಸ್ ಹೆಸರಲ್ಲಿ 25 ಲಕ್ಷ ಖರ್ಚು ಮಾಡುವ ಬದಲು, ಸರ್ಕಾರಿ ಆಸ್ಪತ್ರೆಗಳಲ್ಲಿ ನಾನಾ ರೀತಿಯ ಕಾಯಿಲೆಗಳಿಂದ ನರಳುತ್ತಿರುವ, ತೀರಾ ಅವಶ್ಯಕತೆಯಷ್ಟು ಹಣ ಪಾವತಿ ಮಾಡಲಾರದೆ ಸಂದಿಗ್ಧ ಸಂಕಟದಲ್ಲಿರುವವರಿಗೆ 25 ಲಕ್ಷ ರೂಪಾಯಿ ಹಂಚಲು 'ನಾಗರಹಾವು' ನಿರ್ಮಾಪಕ ಸಾಜಿದ್ ಖುರೇಶಿ ಮುಂದಾಗಿದ್ದಾರೆ. [ಡಾ.ವಿಷ್ಣು 'ನಾಗರಹಾವು' ನೋಡಲು ತುದಿಗಾಲಲ್ಲಿ ನಿಂತಿರುವ 'ಸಿಂಗಂ' ಸೂರ್ಯ]

  'ಸಿಂಹ ಹಸ್ತ'

  'ಸಿಂಹ ಹಸ್ತ'

  ಕರ್ನಾಟಕದ ಬಹುತೇಕ ಸರ್ಕಾರಿ ಆಸ್ಪತ್ರೆಗಳ ವೈದ್ಯರನ್ನು ಸಂಪರ್ಕಿಸಿ, ಅಲ್ಲಿರುವ ರೋಗಿಗಳ ಬಗ್ಗೆ, ಅದರಲ್ಲಿ ಕನಿಷ್ಠ ಮಟ್ಟದ ಹಣವನ್ನೂ ಪಾವತಿ ಮಾಡಲಾಗದೆ, ಔಷಧಿಗಳನ್ನೂ ಖರೀದಿ ಮಾಡಲಾರದೆ ಅಸಹಾಯಕ ಸ್ಥಿತಿಯಲ್ಲಿರುವ ರೋಗಿಗಳ ಬಗ್ಗೆ ಸರ್ವೇ ಮಾಡಿ, ಅದರಲ್ಲಿ 25 ಜನರನ್ನು ನಿರ್ಮಾಪಕ ಸಾಜಿದ್ ಖುರೇಶಿ ನೇತೃತ್ವದ 'ಸಿಂಹ ಹಸ್ತ' ತಂಡ ಗುರುತಿಸಲಿದೆ. ['ನಾಗರಹಾವು' ಬಗ್ಗೆ 'ನಾಗಿಣಿ' ರಮ್ಯಾ ಉದುರಿಸಿದ ಮಾತಿನ ಮುತ್ತು]

  ಹದಿನಾಲ್ಕನೇ ತಾರೀಖು ಹಣ ಪಾವತಿ

  ಹದಿನಾಲ್ಕನೇ ತಾರೀಖು ಹಣ ಪಾವತಿ

  ಆಗಸ್ಟ್ 14 ರಂದು ಸರ್ಕಾರಿ ಆಸ್ಪತ್ರೆಯಲ್ಲೇ 'ನಾಗರಹಾವು' ಚಿತ್ರದ ಆಡಿಯೋ ಬಿಡುಗಡೆ ಸರಳವಾಗಿ ನಡೆಯಲಿದೆ. ಅಲ್ಲೇ, 25 ಜನರಿಗೆ ತಲಾ ಒಂದೊಂದು ಲಕ್ಷದ ಡಿ.ಡಿ ವಿತರಿಸಲಾಗುವುದು.

  ಇದು ಪ್ರಚಾರದ ಗಿಮಿಕ್ ಅಲ್ಲ.!

  ಇದು ಪ್ರಚಾರದ ಗಿಮಿಕ್ ಅಲ್ಲ.!

  ''ಈ ಕಾರ್ಯಕ್ರಮದ ಹಿಂದೆ ಖಂಡಿತವಾಗಿಯೂ ಪ್ರಾಮಾಣಿಕ ಉದ್ದೇಶ ಇದೆ. ನಾನು 25 ಜನರಿಗೆ ತಲಾ ಒಂದೊಂದು ಲಕ್ಷ ನೀಡಬಹುದು. ಅದಕ್ಕಿಂತ ಹೆಚ್ಚಿನ ಹಣದ ಅವಶ್ಯಕತೆ ಜನರಿಗೆ ಇರಬಹುದು. ಹೀಗಾಗಿ, ಇನ್ನಿತರೆ ಮೂಲಗಳಿಂದಲೂ ಹಣ ಹೊಂದಿಸಿಕೊಡುವ ಉದ್ದೇಶ ನನ್ನದು. ವಿಷ್ಣುವರ್ಧನ್ ಅವರ ಅಭಿಮಾನಿಗಳು ಮಾತ್ರವಲ್ಲದೆ, ಮಾನವೀಯ ಕಳಕಳಿ ಹೊಂದಿರುವ ಯಾರೇ ಆದರೂ ಕಷ್ಟದಲ್ಲಿರುವ ರೋಗಿಗಳಿಗೆ ಅವಶ್ಯಕತೆ ಇರುವಷ್ಟು ನೆರವು ನೀಡುವಂತಾದರೆ, ನಮ್ಮ ಈ ಕಾರ್ಯ ನಿಜಕ್ಕೂ ವಿಷ್ಣುವರ್ಧನ್ ರವರಿಗೆ ಸಲ್ಲಿಸುವ ಗೌರವ'' ಎನ್ನುತ್ತಾರೆ ನಿರ್ಮಾಪಕ ಸಾಜಿದ್ ಖುರೇಶಿ.

  ಬ್ಯಾಂಕ್ ಖಾತೆ ತೆರೆಯಲಾಗುತ್ತದೆ.!

  ಬ್ಯಾಂಕ್ ಖಾತೆ ತೆರೆಯಲಾಗುತ್ತದೆ.!

  ನಿರ್ಮಾಪಕರು ನೀಡುವ 25 ಲಕ್ಷ ರೂಪಾಯಿ ಜೊತೆಗೆ ಆಗಸ್ಟ್ 7 ನೇ ತಾರೀಖಿನಿಂದ 14 ರವರೆಗೆ 'ಸಿಂಹ ಹಸ್ತ' ಹೆಸರಿಗೆ ಬ್ಯಾಂಕ್ ಖಾತೆ ಚಾಲ್ತಿಯಲ್ಲಿ ಇರುತ್ತದೆ. ಆ ಖಾತೆಗೆ ಹಣ ಹೂಡಲು ಮುಂದೆ ಬರುವ ದಾನಿಗಳ ಹೆಸರು ಮತ್ತು ಅವರು ನೀಡುವ ಮೊತ್ತ 'ನಾಗರಹಾವು ಡಾಟ್ ಕಾಮ್' ವೆಬ್ ಸೈಟ್ ನಲ್ಲಿ ದಾಖಲಾಗುತ್ತದೆ. ಹೀಗೆ ಏಳು ದಿನಗಳ ಅವಧಿಯಲ್ಲಿ ಸಂಗ್ರಹವಾಗುವ ಹಣವನ್ನು ಆಯಾ ರೋಗಿಗಳ ಅವಶ್ಯಕತೆ ತಕ್ಕಂತೆ ವಿತರಿಸಲಾಗುವುದು.

  ಭಾರತಿ ವಿಷ್ಣುವರ್ಧನ್ ಗೆ ವಿಷಯ ಗೊತ್ತಿಲ್ಲ.!

  ಭಾರತಿ ವಿಷ್ಣುವರ್ಧನ್ ಗೆ ವಿಷಯ ಗೊತ್ತಿಲ್ಲ.!

  ವಿಷ್ಣುವರ್ಧನ್ ಪತ್ನಿ ಭಾರತಿ ವಿಷ್ಣುವರ್ಧನ್ ರವರಿಗೆ ಈ ವಿಚಾರ ಇನ್ನೂ ಗೊತ್ತಿಲ್ಲ. ಅದನ್ನ ಸರ್ ಪ್ರೈಸ್ ಆಗಿ ತಿಳಿಸುವ ಯೋಚನೆ ಹಾಕಿಕೊಂಡಿದ್ದಾರೆ ನಿರ್ಮಾಪಕ ಸಾಜಿದ್ ಖುರೇಶಿ

  ನೀವೂ ಸಹಾಯ ಮಾಡಬಹುದು.!

  ನೀವೂ ಸಹಾಯ ಮಾಡಬಹುದು.!

  ಸಹಾಯ ಮಾಡುವ ಮನಸ್ಸು ನಿಮಗೂ ಇದ್ದರೆ, 'ನಾಗರಹಾವು' ಚಿತ್ರತಂಡದ ಜೊತೆಗೆ ಕೈ ಜೋಡಿಸಿ....

  English summary
  Producer Sajid Qureshi revealed his special plans about Legendary Actor Dr.Vishuvardhan's 201st movie 'Nagarahavu' Audio Release.
  Sunday, July 17, 2016, 11:37
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X