twitter
    For Quick Alerts
    ALLOW NOTIFICATIONS  
    For Daily Alerts

    'ಕೋಟಿಗೊಬ್ಬ-3' ಟೀಸರ್ ಡಿಲೀಟ್: ನಿರ್ಮಾಪಕ ಸೂರಪ್ಪ ಬಾಬು ಹೇಳಿದ್ದೇನು?

    |

    ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-೩ ಸಿನಿಮಾದ ಟೀಸರ್ ಯೂಟ್ಯೂಬ್ ನಲ್ಲಿ ದಿಢೀರ್ ಕಣ್ಮರೆಯಾಗಿರುವ ಬಗ್ಗೆ ನಿರ್ಮಾಪಕ ಸೂರಪ್ಪ ಬಾಬು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಇತ್ತೀಚಿಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸೂರಪ್ಪ ಬಾಬು, ಈ ವಿಚಾರ ಕೊರೊನಾ ವೈರಸ್ ಗಿಂತ ಜಾಸ್ತಿ ಸುದ್ದಿ ಆಗಿದೆ ಎಂದರು.

    Recommended Video

    ನನ್ನ ಜೊತೆ ಸುದೀಪ್ ಇದ್ದಾರೆ ತಲೆ ಕೆಡಿಸಿಕೊಳ್ಳಲ್ಲ | Sudeep | Sorappa babu | Kotigobba 3 | Anand Audio

    ಯೂಟ್ಯೂಬ್ ನಲ್ಲಿ ಟೀಸರ್ ಡಿಲೀಟ್ ಆಗುತ್ತಿದ್ದಂತೆ ಸಿನಿಮಾದ ಬಗ್ಗೆ ಇಲ್ಲಸಲ್ಲದ ಸುದ್ದಿಗಳು ಹರಿದಾಡಲು ಪ್ರಾರಂಭವಾಗಿತ್ತು. ಆದರೆ ಇದೆಲ್ಲದಕ್ಕೂ ನಿರ್ಮಾಪಕ ಸೂರಪ್ಪ ಬಾಬು ಉತ್ತರಿಸಿದ್ದಾರೆ. ಸುಳ್ಳು ಸುದ್ದಿಗಳನ್ನು ಹಬ್ಬಿಸಿ, ನನ್ನ ಸಿನಿಮಾ ವ್ಯಾಪಾರ ಹಾಳು ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಮುಂದೆ ಓದಿ..

    'ಕೋಟಿಗೊಬ್ಬ-3' ಟೀಸರ್ ಯೂಟ್ಯೂಬ್ ನಿಂದ ಡಿಲೀಟ್: ಕಾರಣವೇನು?'ಕೋಟಿಗೊಬ್ಬ-3' ಟೀಸರ್ ಯೂಟ್ಯೂಬ್ ನಿಂದ ಡಿಲೀಟ್: ಕಾರಣವೇನು?

    ಸೂರಪ್ಪ ಬಾಬು ಹೇಳಿದ್ದೇನು?

    ಸೂರಪ್ಪ ಬಾಬು ಹೇಳಿದ್ದೇನು?

    ಮುಂಬೈ ಮೂಲದ ಅಜಯ್ ಪಾಲ್ ಸಹೋದರರಿಗೆ ಕೊಡಬೇಕಾದ ಹಣ ಕೊಟ್ಟಿದ್ದೇನೆ. ಅದಕ್ಕೆಲ್ಲ ನನ್ನ ಬಳಿ ದಾಖಲೆ ಇದೆ. ಈಗ ಕಾನೂನು ಪ್ರಕಾರ ಹೋರಾಡಲು ನಾನು ರೆಡಿ ಇದ್ದೀನಿ. ಯೂಟ್ಯೂಬ್ ವಿರುದ್ಧ ಯಾರೆ ದೂರು ಕೊಟ್ಟರೊ ಆ ವಿಡಿಯೋ ಡಿಲೀಟ್ ಆಗುತ್ತೆ. ಅದರ ವಿರುದ್ಧ ಈಗಾಗಲೆ ಆನಂದ್ ಆಡಿಯೋದ ಮುಖ್ಯಸ್ಥ ಶ್ಯಾಮ್ ಲೀಗಲ್ ಆಕ್ಷನ್ ತೆಗೆದುಕೊಂಡಿದ್ದಾರೆ. ಎಂದರು.

    ಸದಾನಂದ ಗೌಡರು ಸಹಾಯ ಮಾಡಿದ್ದಾರೆ

    ಸದಾನಂದ ಗೌಡರು ಸಹಾಯ ಮಾಡಿದ್ದಾರೆ

    ಈ ಹಿಂದೆ ಆದ ಅನ್ಯಾಯವನ್ನು ಮತ್ತೆ ಈಗ ಹೇಳುತ್ತ, ಕೋರ್ಟ್ ಗೆ ಹೋಗುತ್ತೇನೆ ಎಂದು ಹೇಳುವ ಅವಶ್ಯಕತೆ ಇಲ್ಲ. ನನ್ನ ಎರಡು ತಂತ್ರಜ್ಞರನ್ನು ಬ್ಲಾಕ್ ಮೇಲೆ ಮಾಡಿ ಇಟ್ಟುಕೊಂಡಿದ್ದರು. ಆದರೆ ಕೇಂದ್ರ ಸಚಿವ ಸದಾನಂದ ಗೌಡರ ಮುಕಾಂತರ ಅವರನ್ನು ಕರೆಸಿಕೊಂಡಿರುವುದು ನಿಜ ಎಂದು ಸೂರಪ್ಪ ಬಾಬು ಹೇಳಿದ್ದಾರೆ.

    ಬಾಂಬೆವಾಲನಿಂದ 'ಕೋಟಿಗೊಬ್ಬ'ನಿಗೆ ಮೋಸ: ನಿರ್ಮಾಪಕರ ಆರೋಪಬಾಂಬೆವಾಲನಿಂದ 'ಕೋಟಿಗೊಬ್ಬ'ನಿಗೆ ಮೋಸ: ನಿರ್ಮಾಪಕರ ಆರೋಪ

    ಕಾನೂನಿನ ಮೂಲಕ ಹೋರಾಟ ಮಾಡುತ್ತೇನೆ

    ಕಾನೂನಿನ ಮೂಲಕ ಹೋರಾಟ ಮಾಡುತ್ತೇನೆ

    ಪೋಲೆಂಡ್ ನ ಶೂಟಿಂಗ್ ಲೊಕೇಶನ್ ಗೆ ದುಡ್ಡು ಕೊಟ್ಟಿದ್ದೇವೆ. ಆದರೆ ಅವರು ಈಗನು ದುಡ್ಡು ಕೊಟ್ಟಿಲ್ಲ ಎಂದು ಅವರ ಕಡೆಯವರಿಂದ ಫೋನ್ ಮಾಡಿಸಿ ಕೇಳುತ್ತಿದ್ದಾರೆ. ಮೊದಲು 95 ಲಕ್ಷ ಕೊಟ್ಟರೆ ಮಾತ್ರ ಅಲ್ಲಿಂದ ಹೊರಡಬಹುದು ಎಂದು ಹೇಳಿದ್ದರು. ಆ ನಂತರ ನಮ್ಮ ಅಕೌಂಟರ್ ಸರಿಯಾದ ಲೆಕ್ಕ ಕೇಳಿದ ಮೇಲೆ, ಕೊನೆಗೆ ೪೫ ಲಕ್ಷಕ್ಕೆ ಬಂದರು. 45 ಲಕ್ಷವನ್ನು ಕೋರ್ಟ್ ನಲ್ಲಿ ಇಟ್ಟು ಕಾನೂನು ಮೂಲಕ ಹೋರಾಟ ಮಾಡುತ್ತಿದ್ದೇನೆ. ಎಂದರು.

    ಜಗ್ಗೇಶ್ ಸಹಕಾರದಿಂದ 'ಕೋಟಿಗೊಬ್ಬ-3' ಪೋಲ್ಯಾಂಡ್ ಸಮಸ್ಯೆ ಸುಖಾಂತ್ಯಜಗ್ಗೇಶ್ ಸಹಕಾರದಿಂದ 'ಕೋಟಿಗೊಬ್ಬ-3' ಪೋಲ್ಯಾಂಡ್ ಸಮಸ್ಯೆ ಸುಖಾಂತ್ಯ

    ಸುದೀಪ್ ಡಬ್ಬಿಂಗ್ ಮಾಡಿಲ್ಲವಾ?

    ಸುದೀಪ್ ಡಬ್ಬಿಂಗ್ ಮಾಡಿಲ್ಲವಾ?

    ಚಿತ್ರಕ್ಕೆ ಸುದೀಪ್ ಡಬ್ಬಿಂಗ್ ಮಾಡಿಲ್ಲ, ಸಿನಿಮಾ ಏಪ್ರಿಲ್ ಅಥವಾ ಮೇ ಸಮಯಕ್ಕೆ ರಿಲೀಸ್ ಆಗುವುದು ಅನುಮಾನ ಹೀಗೆ ಸಾಕಷ್ಟು ಸುದ್ದಿ ಹರದಾಡುತ್ತಿತ್ತು. ಈ ಬಗ್ಗೆ ಮಾತನಾಡಿದ ಸೂರಪ್ಪ ಬಾಬು ಇದೆಲ್ಲ ಸುಳ್ಳು ಎಂದಿದ್ದಾರೆ. ಸುದೀಪ್ ನಿರ್ಮಾಪಕರ ಪರ ನಿಂತುಕೊಳ್ಳುವ ವ್ಯಕ್ತಿ. ಎಲ್ಲಾ ಸಮಯದಲ್ಲೂ ಸಾಥ್ ನೀಡಿದ್ದಾರೆ. ಚಿತ್ರಕ್ಕೆ ಡಬ್ ಮಾಡುತ್ತಾರೆ ಎಂದರು. ಇನ್ನು ಅರ್ಜುನ್ ಜನ್ಯ ಅವರಿಗೆ ಅರೋಗ್ಯ ಸರಿ ಇಲ್ಲದ ಕಾರಣ ಆಡಿಯೋ ರಿಲೀಸ್ ಮುಂದಕ್ಕೆ ಹೋಗಿದೆ ಅಷ್ಟೆ. ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಹಬ್ಬಿಸಬೇಡಿ ಎಂದು ಮನವಿ ಮಾಡಿಕೊಂಡರು.

    English summary
    Producer Soorappa Babu clarified about kotigobba-3 teaser delete in youtube. sudeep starrer Kotigobba-3 most expected movie in kannada film Industry.
    Tuesday, March 10, 2020, 10:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X