For Quick Alerts
  ALLOW NOTIFICATIONS  
  For Daily Alerts

  ಪೈರಸಿ ವಿರುದ್ಧ ಒಂದಾದ ನಿರ್ಮಾಪಕರು: ಪೊಲೀಸ್ ಆಯುಕ್ತರಿಗೆ ದೂರು

  |

  ಇಂದಿನಿಂದ (ಅಕ್ಟೋಬರ್ 01) ಚಿತ್ರಮಂದಿರಗಳು ಪೂರ್ಣ ಸೀಟು ಸಾಮರ್ಥ್ಯದೊಂದಿಗೆ ಕಾರ್ಯ ನಿರ್ವಹಿಸುತ್ತಿವೆ. ಸಾಲು-ಸಾಲು ಕನ್ನಡ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ.

  ಸಿನಿಮಾ ಬಿಡುಗಡೆ ಮಾಡುವ ಖುಷಿಯಲ್ಲಿದ್ದ ನಿರ್ಮಾಪಕರಿಗೆ ಪೈರಸಿ ಪೆಡಂಭೂತವಾಗಿ ಕಾಡಲು ಆರಂಭಿಸಿದೆ. ಸಿನಿಮಾ ಬಿಡುಗಡೆ ಘೋಷಿಸುತ್ತಿದ್ದಂತೆಯೇ ಟೆಲಿಗ್ರಾಂನಲ್ಲಿ ಕೆಲವರು ಸಿನಿಮಾಗಳ ಪೈರಸಿ ಕಾಪಿಯನ್ನು ಅಪ್‌ಲೋಡ್ ಮಾಡುವುದಾಗಿ ಹೇಳಿದ್ದಾರೆ. ಇದು ನಿರ್ಮಾಪಕರಿಗೆ ಆತಂಕ ತಂದಿದೆ.

  ಹೀಗಾಗಿ ಕನ್ನಡದ ಕೆಲವು ನಿರ್ಮಾಪಕರು ಪೈರಸಿ ವಿರುದ್ಧ ಒಂದಾಗಿದ್ದು, ಇಂದು ಬೆಂಗಳೂರು ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ದೂರು ನೀಡಿದ್ದಾರೆ.

  ನಿರ್ಮಾಪಕರ ಸಂಘದ ಅಧ್ಯಕ್ಷ ಕೆಪಿ ಶ್ರೀಕಾಂತ್ ನೇತೃತ್ವದಲ್ಲಿ ಹಲವು ಕನ್ನಡ ಸಿನಿಮಾ ನಿರ್ಮಾಪಕರುಗಳು ಇಂದು ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರನ್ನು ಭೇಟಿಯಾಗಿದ್ದು ಪೈರಸಿ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಮನವಿ ನೀಡಿದ್ದಾರೆ. ಕೆ.ಪಿ.ಶ್ರೀಕಾಂತ್ ಜೊತೆಗೆ ನಿರ್ಮಾಪಕ ಕೆ ಮಂಜು, ಎ.ಗಣೇಶ್, ರಮೇಶ್ ಯಾದವ್ ಹಾಗೂ ಇನ್ನೂ ಕೆಲವರಿದ್ದರು.

  'ಸಲಗ' ಹಾಗೂ 'ಕೋಟಿಗೊಬ್ಬ 3' ಸಿನಿಮಾಗಳು ಅಕ್ಟೋಬರ್ 14ಕ್ಕೆ ತೆರೆಗೆ ಬರಲಿವೆ. ಆದರೆ ಆ ಸಿನಿಮಾಗಳ ಹೆಸರಲ್ಲಿ ಟೆಲಿಗ್ರಾಂ ಚಾನೆಲ್‌ಗಳು ಈಗಾಗಲೇ ಓಪನ್ ಆಗಿದ್ದು, ಸಿನಿಮಾದ ಪೈರಸಿ ಕಾಪಿಯನ್ನು ಅಪ್‌ಲೋಡ್ ಮಾಡುವುದಾಗಿ ಘೋಷಿಸಿಕೊಂಡಿವೆ.

  ಇದೇ ವಿಷಯವಾಗಿ ನಿನ್ನೆ 'ಕೋಟಿಗೊಬ್ಬ 3' ಸಿನಿಮಾದ ನಿರ್ಮಾಪಕ ಸೂರಪ್ಪ ಬಾಬು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರನ್ನು ಭೇಟಿಯಾಗಿ ದೂರು ನೀಡಿದ್ದರು. ಸೈಬರ್ ಪೊಲೀಸ್ ಆಯುಕ್ತರಿಗೂ ದೂರು ನೀಡಿದ್ದಾರೆ ಸೂರಪ್ಪ ಬಾಬು.

  ಅಕ್ಟೋಬರ್ 14 ರಂದು 'ಸಲಗ', 'ಕೋಟಿಗೊಬ್ಬ 3' ಆ ನಂತರ ಶಿವರಾಜ್ ಕುಮಾರ್ ನಟನೆಯ 'ಬಜರಂಗಿ 2', ಪ್ರೇಮ್ ನಟನೆಯ 'ಪ್ರೇಮಂ ಪೂಜ್ಯಂ', ರಾಜ್‌ಕುಮಾರ್ ಮೊಮ್ಮಗಳು ನಟಿಸಿರುವ 'ನೀ ಸನಿಹಕೆ', ಇನ್ನೂ ಹಲವು ಸಿನಿಮಾಗಳು ಬಿಡುಗಡೆ ಆಗಲಿವೆ.

  ದೂರು ನೀಡಿದ ಬಳಿಕ ಮಾತನಾಡಿದ ನಿರ್ಮಾಪಕ ಕೆ.ಮಂಜು, ''ಪೈರಸಿ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಭರವಸೆ ನೀಡಿದ್ದಾರೆ. ಕಮೀಷನರ್ ಕೇರಿಯಲ್ಲಿಯೆ ಟಾಸ್ಕ್ ಫೋರ್ಸ್ ರಚಿಸಲಾಗುತ್ತಿದ್ದು, ಗುಪ್ತವಾಗಿ ಕಾರ್ಯನಿರ್ವಹಿಸಿ ಪೈರಸಿ ಮಾಡುವವರನ್ನು ಸೆರೆ ಹಿಡಿಯಲಾಗುತ್ತದೆ'' ಎಂದಿದ್ದಾರೆ.

  ನಿನ್ನೆ ಗೃಹ ಸಚಿವರಿಗೆ ದೂರು ನೀಡಿದ ಬಳಿಕ ಮಾತನಾಡಿದ್ದ 'ಕೋಟಿಗೊಬ್ಬ 3' ಸಿನಿಮಾದ ನಿರ್ಮಾಪಕ ಸೋರಪ್ಪ ಬಾಬು, ''ನಮ್ಮ ಸಿನಿಮಾಕ್ಕೆ ಮಾತ್ರವಲ್ಲ, ಪೈರಸಿ ಎಂಬುದು ಇಡೀಯ ಚಿತ್ರರಂಗಕ್ಕೆ ಮಾರಕ. ನಮ್ಮನ್ನು ಕುಗ್ಗಿಸಲು ಹೀಗೆ ಮಾಡುತ್ತಿದ್ದಾರೆಯೇ? ಇದರಿಂದ ಅವರಿಗೆ ಏನಾದರೂ ಲಾಭವಿದೆಯೇ ಗೊತ್ತಾಗಬೇಕಿದೆ. 50-60 ಮಂದಿ ಪೈರಸಿ ಮಾಡುವ ಯತ್ನ ಮಾಡುತ್ತಿದ್ದಾರೆ. ಅವರಲ್ಲಿ ನಮಗೆ ಒಬ್ಬರು ಸಿಕ್ಕಲಿ ಸಾಕು ಇಡೀಯ ತಂಡವನ್ನು ನಾವು ಹಿಡಿದು ಪೊಲೀಸರ ಮುಂದೆ ಕರೆದುಕೊಂಡು ಬರುತ್ತೀವಿ. ನಾವು ಈ ಬಗ್ಗೆ ಬಹಳ ಗಂಭೀರವಾಗಿದ್ದೇವೆ'' ಎಂದಿದ್ದರು.

  English summary
  Kannada Producers association gave complaint to Bengaluru police commissioner against piracy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X