»   » ನಿರ್ಮಾಪಕರ ಉಪವಾಸ ಸತ್ಯಾಗ್ರಹ ; ಅಂಬರೀಶ್ ಹೊಸ ವರಸೆ

ನಿರ್ಮಾಪಕರ ಉಪವಾಸ ಸತ್ಯಾಗ್ರಹ ; ಅಂಬರೀಶ್ ಹೊಸ ವರಸೆ

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  ''ಖಾಸಗಿ ವಾಹಿನಿಗಳು ಕನ್ನಡ ಚಿತ್ರಗಳ ಸ್ಯಾಟೆಲೈಟ್ ಹಕ್ಕುಗಳನ್ನ ಕೊಂಡುಕೊಳ್ಳುತ್ತಾಯಿಲ್ಲ. ಸ್ಟಾರ್ ನಟರು ನಿರ್ಮಾಪಕರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಚಾನೆಲ್ ಗಳ ರಿಯಾಲಿಟಿ ಶೋನಲ್ಲಿ ಕಲಾವಿದರು ಭಾಗವಹಿಸುತ್ತಿದ್ದಾರೆ. ಇದರಿಂದ ಸಿನಿಮಾ ಕಲೆಕ್ಷನ್ ಡಲ್ ಆಗುತ್ತಿದೆ.''

  ಇಂತಹ ಸಾಕಷ್ಟು ಕಾರಣಗಳನ್ನ ಕೊಟ್ಟು ಸಮಸ್ಯೆ ಪರಿಹಾರ ಆಗಬೇಕು ಅಂತ ಕಳೆದ 15 ದಿನಗಳಿಂದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಿರ್ಮಾಪಕರು ಧರಣಿ ನಡೆಸುತ್ತಿದ್ದಾರೆ.

  producers

  ಇಂದು ಜಯಸಿಂಹ ಮುಸುರಿ ನೇತೃತ್ವದಲ್ಲಿ ಮೂವರು ನಿರ್ಮಾಪಕರು ಅಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ. ಪರಿಸ್ಥಿತಿ ಕೈಮೀರುತ್ತಿದ್ದರೂ, ''ಪ್ರತಿಭಟನೆ ಸ್ಥಳಕ್ಕೆ ಹೋಗುವ ಪ್ರಶ್ನೆಯೇ ಇಲ್ಲ'' ಅಂತ ರೆಬೆಲ್ ಸ್ಟಾರ್ ಅಂಬರೀಶ್ ಖಾರವಾಗಿ ನುಡಿದಿದ್ದಾರೆ. [ರೆಬೆಲ್ ಸ್ಟಾರ್ ಅಂಬರೀಶ್ ತಂಟೆಗೆ ಬಂದ್ರೆ...ಹುಷಾರ್..!]

  ''ಮಾತುಕತೆಗೆ ಅಂತ ಕರೆದರೆ ಫಲಪ್ರದ ನಿರ್ಣಯ ಕೈಗೊಳ್ಳಬೇಕು. ಏಕಾಏಕಿ ಘೋಷಣೆ, ಧಿಕ್ಕಾರ ಕೂಗಿದರೆ ಯಾವುದೂ ಪರಿಹಾರ ಆಗಲ್ಲ. ಸಮಸ್ಯೆ ಇರುವವರೇ ನನ್ನ ಬಳಿ ಬಂದು ಚರ್ಚಿಸಲಿ. ನಾನಂತೂ ಹೋಗಲ್ಲ'' ಅಂತ ಅಂಬರೀಶ್ ಸ್ಪಷ್ಟವಾಗಿ ತಿಳಿಸಿದ್ದಾರೆ.

  ambareesh

  ಕಳೆದ ಭಾನುವಾರ ಅಂದ್ರೆ ಜೂನ್ 7 ರಂದು ಅಂಬರೀಶ್ ನೇತೃತ್ವದಲ್ಲಿ ಕಲಾವಿದರ ಸಂಘ ಸಭೆ ಕರೆದಿತ್ತು. ಸಭೆಯಲ್ಲಿ ಯಾವುದೇ ಸ್ಟಾರ್ ನಟರು ಭಾಗವಹಿಸಲಿಲ್ಲ. ಯಾವುದೇ ನಿರ್ಣಯ ಕೈಗೊಳ್ಳದೇ ಸಭೆ ವಿಫಲವಾದ ಕಾರಣಕ್ಕೆ ನಿರ್ಮಾಪಕರು ಅಂಬರೀಶ್ ವಿರುದ್ಧ ಧಿಕ್ಕಾರ ಕೂಗಿದರು. [''ರೆಬೆಲ್ ಸ್ಟಾರ್ ಅಂಬರೀಶ್ ಗೆ ಧಿಕ್ಕಾರ...ಧಿಕ್ಕಾರ...'']

  ಇದನ್ನೇ ಕಾರಣವಾಗಿಟ್ಟುಕೊಂಡು, ಅಂಬರೀಶ್ ವಿರುದ್ಧ ಧಿಕ್ಕಾರ ಕೂಗಿದ ನಿರ್ಮಾಪಕರನ್ನ ಅಮಾನತುಗೊಳಿಸುವವರೆಗೂ ಸಮಸ್ಯೆ ಪರಿಹಾರ ಸಾಧ್ಯವಿಲ್ಲ ಅಂತ ಕಲಾವಿದರ ಸಂಘದ ಉಪಾಧ್ಯಕ್ಷ ರಾಕ್ ಲೈನ್ ವೆಂಕಟೇಶ್ ಹೇಳಿದ್ದರು. ಈಗ ಅಂಬರೀಶ್ ಹೊಸ ವರಸೆ ಶುರುಮಾಡಿದ್ದಾರೆ. [ಅಂಬಿ ಮಾತಿಗೆ 'ಇವರಿಂದ' ಕವಡೆ ಕಾಸಿನ ಕಿಮ್ಮತ್ತಿಲ್ಲ]

  ಒಟ್ನಲ್ಲಿ 'ನಾ ಕೊಡೆ...ನೀ ಬಿಡೆ' ಅನ್ನುವ ಪರಿಸ್ಥಿತಿ ನಿರ್ಮಾಪಕರು ಮತ್ತು ಕಲಾವಿದರದ್ದು. ಇದು ಎಲ್ಲಿಯವರೆಗೆ ಹೋಗಿ ತಲುಪುತ್ತೋ ಕಾದು ನೋಡಿ....

  English summary
  Jayasimha Musuri, along with other Kannada Film Producers are on Hunger Strike from today (June 15th). In reaction to this, Kannada Actor Ambareesh clears that he will not enter the protest venue at any cost.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more