»   » ಉಗ್ರಂ ಮಾಡಿದ ಎಫೆಕ್ಟ್ ಎಂಥಾದ್ದು ಗೊತ್ತಾ?

ಉಗ್ರಂ ಮಾಡಿದ ಎಫೆಕ್ಟ್ ಎಂಥಾದ್ದು ಗೊತ್ತಾ?

By: ಜೀವನರಸಿಕ
Subscribe to Filmibeat Kannada

ಮುಂಗಾರುಮಳೆ ಅನ್ನೋ ಸಿನಿಮಾ ಅದ್ಭುತವಾಗಿ ಗೆದ್ದ ನಂತ್ರ ಅದರ ಪ್ರೇರಣೆ ಪಡ್ಕೊಂಡ ಅದೆಷ್ಟೋ ಸಿನಿಮಾಗಳು ಬಂದ್ವು. ಅದೆಷ್ಟೋ ಟೈಟಲ್ಗಳು ಮುಂಗಾರುಮಳೆ ಸಿನಿಮಾದ ಸಾಲುಗಳಿಂದ ಹೊರಬಂದ್ವು. ಹಾಗೇ ಸುಮ್ಮನೇ, ಇದಕ್ಕೊಂದು ಎಕ್ಸಾಂಪಲ್ ಅಷ್ಟೇ.

ದುನಿಯಾ ಸಿನಿಮಾದ ಪ್ರೇರಣೆಯಿಂದಲೂ ಹೀಗೇ ಆಗಿತ್ತು. ಇನ್ನು ಒಂದು ಸೂಪರ್ ಡೂಪರ್ ಹಿಟ್ಟಾದ ಹಾಡಿನ ಸಾಲುಗಳೇ ಸಿನಿಮಾದ ಟೈಟಲ್ ಆಗ್ತವೆ. ಇಂಥ ಸಕ್ಸಸ್‌ಪುಲ್ ಸಿನೆಮಾಗಳ ಸಾಲಿಗೆ ಸೇರಿದೆ ಉಗ್ರಂ ಕೂಡ. ಕಳೆದ ವರ್ಷ ಬಂದ ಉಗ್ರಂ ಸಿನಿಮಾ ಸೂಪರ್ ಡೂಪರ್ ಹಿಟ್. [ಇದೋ ಬೊಂಬಾಟ್ ಆಫರ್: 'ಉಗ್ರಂ' ಫುಲ್ ಮೂವಿ]

ಕಂಠಿ ಸಿನಿಮಾದ ನಂತ್ರ ಕಳೆದೇ ಹೋಗಿದ್ದ ಮುರಳಿ ಅನ್ನೋ ನಟನಿಗೆ ಮರುಜನ್ಮ ಕೊಟ್ಟ ಸಿನಿಮಾ ಮರಳಿ ಬರುವಂತೆ ಮಾಡಿದ ಸಿನಿಮಾ ಅಂದ್ರೆ ತಪ್ಪಾಗಲಾರದು. ಈಗ ಉಗ್ರಂ ಪ್ರೇರಣೆಯಿಂದ ಅಂತಹದ್ದೇ ಟೈಟಲ್ಗಳು ಸ್ಯಾಂಡಲ್ವುಡ್ನಲ್ಲಿ ತಿರುಗಾಡ್ತಿವೆ.

ದಿಗ್ಭಯಂ

ಹೊಸಬರ ದಿಗ್ಭಯಂ ಚಿತ್ರ ಉಗ್ರಂ ರಿಲೀಸ್ನ ನಂತ್ರ ಟೈಟಲ್ ರಿಜಿಸ್ಟರ್ ಮಾಡಿ ಶೂಟಿಂಗ್ ಮುಗಿಸಿದ ಚಿತ್ರ. ಚಿತ್ರದಲ್ಲಿ ನಾಯಕನಟನಾಗಿ ಅಮಿತ್ ಕಾಣಿಸಿಕೊಂಡಿದ್ರೆ ಹುಚ್ಚ ವೆಂಕಟ್ ಚಿತ್ರದ ಕವಿತಾ ಬಿಸ್ತ್ ಇಲ್ಲಿ ನಾಯಕಿ. ಉಗ್ರಂ ಅನ್ನೋ ಸೌಂಡಿಂಗ್ ಚೆನ್ನಾಗಿರೋದ್ರಿಂದ ದಿಗ್ಭಯಂ ಅನ್ನೋದನ್ನ ಚಿತ್ರತಂಡ ಟೈಟಲ್ ಮಾಡಿಕೊಂಡಿದೆ.

ಉಗ್ರಾಕ್ಷ

ಜಾಸ್ಮಿನ್ ಡಾಟ್ ಫೈವ್ ಅನ್ನೋ ಚಿತ್ರದಲ್ಲಿ ನಾಯಕನಾಗಿದ್ದ ಮೋಹನ್ ನಟನಾಗಿ ಕಾಣಿಸಿಕೊಳ್ತಿರೋ ಚಿತ್ರ ಉಗ್ರಾಕ್ಷ. ಇದಕ್ಕೂ ಟೈಟಲ್ನಲ್ಲೇ ಉಗ್ರಂನ ಪ್ರೇರಣೆ ಇರೋದು ಕಾಣಿಸುತ್ತೆ..

ಜ್ವಲಂತಂ

ಮತ್ತೊಂದು ಹೊಸಬರೇ ಕಾಣಿಸಿಕೊಂಡಿರೋ ಚಿತ್ರ ಜ್ವಲಂತಂ ಕೂಡ ಉಗ್ರಂ ಚಿತ್ರದಲ್ಲಿ ಬರೋ ಮಾವಿಷ್ಣುವಿನ ಸ್ತೋತ್ರದಲ್ಲಿ ಬರೋ ಒಂದು ಪದ `ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ' ಅನ್ನೋ ಸ್ತೋತ್ರವೇ ಇದಕ್ಕೆ ಮೂಲ

ರೌದ್ರಂ

ರೌದ್ರಂ ಅನ್ನೋ ಹೊಸಬರ ಸಿನಿಮಾ ಕೂಡ ಈಗಾಗ್ಲೇ ಶೂಟಿಂಗ್ ಹಂತದಲ್ಲಿದ್ದು. `ಅಂ'ಕಾರದ ಮೂಲಕ ಮುಗಿಯೋ ಮತ್ತೊಂದು ಸೌಂಡಿಂಗ್ ಚಿತ್ರವಾಗಿ ರೌದ್ರಂ ಈ ವರ್ಷವೇ ಥಿಯೇಟರ್ಗೆ ಬರೋ ಸಾಧ್ಯತೆಯಿದೆ.

ಸರ್ವೇಶಂ

ಉಗ್ರಂ ಬಂದ ನಂತ್ರ `ಅಂ'ಕಾರದ ಚಿತ್ರಗಳನ್ನ ಮಾಡೋಕೆ ನಿರ್ದೇಶಕರು ನಿರ್ಮಾಪಕರು ಹೊರಡ್ತಿರೋದಕ್ಕೆ `ಸರ್ವೇಶಂ' ಅನ್ನೋ ಸಿನಿಮಾ ಮತ್ತೊಂದು ಸೇರ್ಪಡೆ. ತೆಲುಗಿನಲ್ಲಿ ಈ `ಅಂ'ಕಾರವನ್ನ ಹೆಚ್ಚಾಗಿ ಬಳಸ್ತಾರೆ ಆದ್ರೆ ಉಗ್ರಂ ನಂತ್ರ ಇದು ಕನ್ನಡದಲ್ಲೂ ಕಾಮನ್ ಆಗ್ತಿದೆ.

ಉಗ್ರಂ ವೀರಂ

ಉಗ್ರಂ ಸಿನಿಮಾದಲ್ಲಿ ಗಮನಸೆಳೆಯೋ ಟೈಟಲ್ ಸಾಂಗ್ ಉಗ್ರಂ ವೀರಂ ಮಹಾವಿಷ್ಣುಂನ ಮೊದಲ ಎರಡು ಪದ ಈಗಾಗ್ಲೇ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ಆಗಿದೆ. ಅದೇ `ಉಗ್ರಂ ವೀರಂ' ಮುರಳಿ ಕೂಡ ಉಗ್ರಂ ನಂತ್ರ ಇದೇ ಟೈಟಲ್ನಲ್ಲಿ ಸಿನಿಮಾ ಮಾಡ್ತಾರೆ ಅಂತ ಸುದ್ದಿಯಾಗಿತ್ತು ಆದ್ರೆ ರಥಾವರ ಶುರುವಾಯ್ತು.

English summary
Kannada movie producers have been registering and making movie with titles resembling Ugramm, in which Sri Murali played lead role. That is the kind of lasting impact super super hit movie Ugramm has made on producers.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada