For Quick Alerts
  ALLOW NOTIFICATIONS  
  For Daily Alerts

  ಪೃಥ್ವಿ ಅಂಬರ್ ಮತ್ತು ಮಿಲನಾ ನಾಗರಾಜ್ ಅವರ 'ಫಾರ್ Regn'ಗೆ ಸಿಕ್ತು ಚಾಲನೆ

  |

  ದಿಯಾ ಖ್ಯಾತಿಯ ನಟ ಪೃಥ್ವಿ ಅಂಬರ್ ಮತ್ತು ಮಿಲನಾ ನಾಗರಾಜ್ ನಟನೆಯ 'ಫಾರ್ Regn' ಸಿನಿಮಾ ಅನೌನ್ಸ್ ಆಗಿ ತಿಂಗಳಾಗಿತ್ತು. ಸಿನಿಮಾ ಅನೌನ್ಸ ಆದ ಬಳಿಕ ಚಿತ್ರದಿಂದ ಯಾವುದೇ ಅಪ್ ಡೇಟ್ಸ್ ಸಿಕ್ಕಿರಲಿಲ್ಲ. ನಟಿ ಮಿಲನಾ ನಾಗರಾಜ್ 'ಲವ್ ಮಾಕ್ಟೇಲ್-2' ನಲ್ಲಿ ನಿರತರಾಗಿದ್ದರೇ, ಪೃಥ್ವಿ ಅಂಬರ್ ಬೇರೆ ಬೇರೆ ಸಿನಿಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

  ದಿಯಾ ಸಿನಿಮಾ ಬಳಿಕ ಪೃಥ್ವಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದೀಗ 'ಫಾರ್ Regn' ಸಿನಿಮಾದಿಂದ ಹೊಸ ಅಪ್ ಡೇಟ್ ಸಿಕ್ಕಿದೆ. ಪೃಥ್ವಿ ಮತ್ತು ಮಿಲನಾ ನಟನೆಯ ಹೊಸ ಚಿತ್ರಕ್ಕೆ ಇಂದು (ಡಿಸೆಂಬರ್ 11) ಮುಹೂರ್ತ ಮಾಡಲಾಗಿದೆ. ಹೊಸ ಸಿನಿಮಾ ಪೂಜೆ ಸಮಯದಲ್ಲಿ ಮಿಲನಾ ನಾಗರಾಜ್, ಪೃಥ್ವಿ ಅಂಬರ್, ಹಿರಿಯ ನಟಿ ಸುಧಾರಾಣಿ ಸೇರಿದಂತೆ ಅನೇಕರು ಸಮಾರಂಭದಲ್ಲಿ ಭಾಗಿಯಾಗಿದ್ದರು.

  ಫೆಬ್ರವರಿ 14ಕ್ಕೆ ಮದುವೆ ಆಗುತ್ತಿರುವುದೇಕೆ, ವಿವಾಹ ಬಳಿಕ ಸಿನಿಮಾ ಮಾಡ್ತಾರಾ? ಮಿಲನಾ ಉತ್ತರ ಇಲ್ಲಿದೆ

  ಸದ್ಯ ಚಿತ್ರಕ್ಕೆ ಚಾಲನೆ ಸಿಕ್ಕಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭ ಮಾಡಲು ಸಿನಿಮಾತಂಡ ನಿರ್ಧರಿಸಿದೆ. ಅಂದಹಾಗೆ 'ಫಾರ್ Regn' ಚಿತ್ರಕ್ಕೆ ನವೀನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶ್ಯಾಡೋ, ಹರಿವಿನ ಹಾದಿ, ಯೆಲ್ಲೋ ಬೋರ್ಡ್ ಮುಂತಾದ ಕಿರುಚಿತ್ರಗಳನ್ನು ನಿರ್ದೇಶನ ಮಾಡಿರುವ ನವೀನ್ ಮೊದಲ ಬಾರಿಗೆ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ.

  ಬಯಲಾಯ್ತು ನಟಿ Chaitra ಸಾವಿನ ಹಿಂದಿನ ರಹಸ್ಯ??? | Filmibeat Kannada

  ವಿಭಿನ್ನ ಟೈಟಲ್ ಮೂಲಕ ಈ ಸಿನಿಮಾ ಚಿತ್ರಾಭಿಮಾನಿಗಳ ಗಮನ ಸಳೆಯುತ್ತಿದೆ. ನಟಿ ಮಿಲನಾ ನಾಗರಾಜ್ ಈ ಸಿನಿಮಾ ಒಪ್ಪಿಕೊಳ್ಳಲು ಮುಖ್ಯ ಕಾರಣ ಈ ಶೀರ್ಷಿಕೆಯಂತೆ. ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್ ಟೇನರ್ ಸಿನಿಮಾವಾಗಿದ್ದು, ಪೃಥ್ವಿ ಮತ್ತು ಮಿಲನಾ ಅವರನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

  English summary
  Dia Actor Pruthvi Ambar and Milana Nagaraj Starrer For Regn movie Muhurtha on Dec 11.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X