For Quick Alerts
  ALLOW NOTIFICATIONS  
  For Daily Alerts

  ಶಿವರಾಜ್ ಕುಮಾರ್ ಜೊತೆ ನಟಿಸಲು ಅವಕಾಶ: ನಿದ್ದೆ ಕಳೆದುಕೊಂಡ ಯುವನಟ!

  |

  ನಟ ಶಿವರಾಜ್ ಕುಮಾರ್ ಜೊತೆಗೆ ತೆರೆ ಹಂಚಿಕೊಳ್ಳುವ ಅವಕಾಶಕ್ಕಾಗಿ ದೊಡ್ಡ-ದೊಡ್ಡ ನಟರೇ ಕಾಯುತ್ತಿದ್ದಾರೆ. ಅಂಥಹುದರಲ್ಲಿ ಹೊಸ ನಟರಿಗೆ ಆ ಅವಕಾಶ ಅರಸಿ ಬಂದರೆ!

  ಶಿವಣ್ಣನ ಜೊತೆ ಸಿನಿಮಾ ಅಂತ ತುಂಬಾ ಭಯ ಆಗ್ತಾ ಇದೆ | Filmibeat Kannada

  ದಿಯಾ ಸಿನಿಮಾ ಮೂಲಕ ಗಮನ ಸೆಳೆದಿರುವ ನಟ ಪೃಥ್ವಿ ಅಂಬರ್ ಅವರಿಗೆ ಈ ಅವಕಾಶ ಅರಸಿ ಬಂದಿದ್ದು, ಶಿವರಾಜ್ ಕುಮಾರ್, ಡಾಲಿ ಧನಂಜಯ್ ಅಭಿನಯದ 'ಶಿವಪ್ಪ' ಸಿನಿಮಾದಲ್ಲಿ ಪೃಥ್ವಿ ಅಂಬರ್ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.

  ನಿನ್ನೆಯಷ್ಟೆ (ನವೆಂಬರ್ 19) ಸಿನಿಮಾದ ಮುಹೂರ್ತ ಮುಗಿದಿದ್ದು, ಶಿವರಾಜ್ ಕುಮಾರ್ ಜೊತೆಗೆ ಪೃಥ್ವಿ ಅಂಬರ್ ಅವರ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಮುಹೂರ್ತದ ಸಂಭ್ರಮದಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಪೃಥ್ವಿ ಅಂಬರ್, ಶಿವಣ್ಣನ ಜೊತೆ ನಟಿಸಲು ದೊರೆತ ಅವಕಾಶದ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ.

  ಜೋಗಿ 15 ಬಾರಿ ನೋಡಿದ್ದೆ: ಪೃಥ್ವಿ

  ಜೋಗಿ 15 ಬಾರಿ ನೋಡಿದ್ದೆ: ಪೃಥ್ವಿ

  'ಪದವಿ ತರಗತಿಯಲ್ಲಿದ್ದಾಗ ಜೋಗಿ ಸಿನಿಮಾ ಬಿಡುಗಡೆ ಆಗಿತ್ತು. ಆಗ ಹದಿನೈದು ಬಾರಿ ಸಿನಿಮಾವನ್ನು ನೋಡಿದ್ದೆ. ಆಗೆಲ್ಲಾ ಕನಸೂ ಕಂಡಿರಲಿಲ್ಲ ಶಿವರಾಜ್ ಕುಮಾರ್ ಅವರೊಟ್ಟಿಗೆ ನಟಿಸುತ್ತೇನೆಂದು' ಎಂದಿದ್ದಾರೆ ಪೃಥ್ವಿ ಅಂಬರ್.

  ಭಾವನಾತ್ಮಕವಾಗಿ ಕನೆಕ್ಟ್ ಆಗಿರುವ ಪಾತ್ರ ನನ್ನದು: ಪೃಥ್ವಿ

  ಭಾವನಾತ್ಮಕವಾಗಿ ಕನೆಕ್ಟ್ ಆಗಿರುವ ಪಾತ್ರ ನನ್ನದು: ಪೃಥ್ವಿ

  ಶಿವರಾಜ್ ಕುಮಾರ್ ಅವರ ಪಾತ್ರದೊಡನೆ ಭಾವನಾತ್ಮಕವಾಗಿ ಕನೆಕ್ಟ್ ಆಗಿರುವ ಪಾತ್ರ ನನ್ನದು, ಶಿವಣ್ಣನ ಜೊತೆಗೆಯೇ ಇರುವ ಪಾತ್ರ. ಶಿವರಾಜ್ ಕುಮಾರ್ ಅವರ ಎನರ್ಜಿಯೊಂದಿಗೆ ನನ್ನ ಎನರ್ಜಿಯನ್ನು ಮ್ಯಾಚ್ ಮಾಡುವ ಸವಾಲು ಇದೆ' ಎಂದಿದ್ದಾರೆ ಪೃಥ್ವಿ.

   ನಿದ್ದೆ ಸಹ ಸರಿಯಾಗಿ ಬರುತ್ತಿಲ್ಲ ನನಗೆ: ಪೃಥ್ವಿ

  ನಿದ್ದೆ ಸಹ ಸರಿಯಾಗಿ ಬರುತ್ತಿಲ್ಲ ನನಗೆ: ಪೃಥ್ವಿ

  ಮೊದಲ ಬಾರಿ ಕ್ಯಾಮೆರಾ ಎದುರಿಸಿದಾಗ ಎಷ್ಟು ನರ್ವಸ್ ಆಗಿದ್ದೆನೊ ಅದಕ್ಕಿಂತಲೂ ಹೆಚ್ಚು ನರ್ವಸ್ ಶಿವರಾಜ್ ಕುಮಾರ್ ಅವರೊಟ್ಟಿಗೆ ನಟಿಸುವಾಗ ಆಗಿದ್ದೆ. ನನ್ನ ವೃತ್ತಿ ಜೀವನದ ಆರಂಭದಲ್ಲಿಯೇ ಶಿವಣ್ಣ ಜೊತೆಗೆ ನಟಿಸುತ್ತೇನೆ ಎಂದುಕೊಂಡಿರಲಿಲ್ಲ. ನನಗೆ ಸರಿಯಾಗಿ ನಿದ್ದೆ ಸಹ ಬರುತ್ತಿಲ್ಲ' ಎಂದರು ಪೃಥ್ವಿ.

  ಪೃಥ್ವಿಯನ್ನು ಹೊಗಳಿದ ಶಿವರಾಜ್ ಕುಮಾರ್

  ಪೃಥ್ವಿಯನ್ನು ಹೊಗಳಿದ ಶಿವರಾಜ್ ಕುಮಾರ್

  ನಟ ಶಿವರಾಜ್ ಕುಮಾರ್ ಸಹ ಪೃಥ್ವಿಯನ್ನು ಹೊಗಳಿ ಮಾತನಾಡಿದರು. 'ಪೃಥ್ವಿ ಒಳ್ಳೆಯ ನಟ, ಭಯವಿಲ್ಲದೆ ಪರ್ಫಾರ್ಮನ್ಸ್ ಮಾಡುತ್ತಾರೆ. ನೋಡಲು ಸಹ ಚೆನ್ನಾಗಿದ್ದಾರೆ. ಅವರ 'ದಿಯಾ' ಸಿನಿಮಾವನ್ನು ನಾನು ಎರಡೆರಡು ಬಾರಿ ನೋಡಿದ್ದೇನೆ' ಎಂದರು.

  English summary
  New hero Pruthvi Ambar said he is thrilled he got chance to act with Shiva Rajkumar early in his career.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X