»   » ಬಾಲಿವುಡ್ ಗೆ ಪುನೀತ್ ರಾಜ್ ಕುಮಾರ್ 'ಅಪ್ಪು'

ಬಾಲಿವುಡ್ ಗೆ ಪುನೀತ್ ರಾಜ್ ಕುಮಾರ್ 'ಅಪ್ಪು'

Posted By:
Subscribe to Filmibeat Kannada
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪೂರ್ಣ ಪ್ರಮಾಣದ ನಾಯಕ ನಟನಾಗಿ ಅಭಿನಯಿಸಿದ ಮೊಟ್ಟ ಮೊದಲ ಚಿತ್ರ 'ಅಪ್ಪು'. ಈ ಚಿತ್ರ ಈಗ ಹಿಂದಿ ಭಾಷೆಗೆ ರೀಮೇಕ್ ಆಗುತ್ತಿದೆ. ಪುರಿ ಜಗನ್ನಾಥ್ ನಿರ್ದೇಶನದ 'ಅಪ್ಪು' (2002) ಚಿತ್ರ ತೆರೆಕಂಡು ಬರೋಬ್ಬರಿ 11 ವರ್ಷಗಳಷ್ಟು ಸುದೀರ್ಘ ಸಮಯವೇ ಕಳೆದುಹೋಗಿದೆ.

ಈಗ ಹಿಂದಿ ಚಿತ್ರಕ್ಕೂ ಪುರಿ ಜಗನ್ನಾಥ್ ಅವರೇ ಆಕ್ಷನ್ ಕಟ್ ಹೇಳಲಿದ್ದಾರೆ. ಬಹುಶಃ ಅರ್ಜುನ್ ಕಪೂರ್ ಅಥವಾ ಸಿದ್ಧಾರ್ಥ್ ಮಲ್ಹೋತ್ರಾ ಇಬ್ಬರಲ್ಲಿ ಒಬ್ಬರು ನಾಯಕ ನಟರಾಗುವ ಸಾಧ್ಯತೆಗಳಿವೆ. ಇನ್ನು ಚಿತ್ರದ ನಾಯಕಿ ಪಾತ್ರಕ್ಕೆ ಹೊಸ ಮುಖದ ಹುಡುಕಾಟದಲ್ಲಿದ್ದಾರೆ ಪುರಿ ಎನ್ನುತ್ತವೆ ಮೂಲಗಳು.

ಈ ಹಿಂದೆ 'ಅಪ್ಪು' ಚಿತ್ರ ತೆಲುಗಿಗೆ 'ಈಡಿಯಟ್' ಹಾಗೂ ತಮಿಳಿನಲ್ಲಿ 'ದಮ್' ಎಂದು ರೀಮೇಕ್ ಆಗಿತ್ತು. ಬಳಿಕ ಬಂಗಾಳಿಯಲ್ಲಿ 'ಪ್ರಿಯಾ ಅಮರ್ ಪ್ರಿಯಾ' ಹೆಸರಲ್ಲಿ ರೀಮೇಕ್ ಆಗಿದೆ. ಕನ್ನಡ ಹಾಗೂ ತೆಲುಗು ಚಿತ್ರಗಳಲ್ಲಿ 'ಸುಂಟರಗಾಳಿ' ರಕ್ಷಿತಾ ನಾಯಕಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಇನ್ನು ಪುರಿ ಜಗನ್ನಾಥ್ ವಿಷಯಕ್ಕೆ ಬರುವುದಾದರೆ, ಯುವ ನಾಯಕ ನಟರಿಗೆ ಹೊಂದಿಕೆಯಾಗುವ ಕಥೆಗಳನ್ನು ಹೆಣೆಯುವುದರಲ್ಲಿ ಸಿದ್ಧಹಸ್ತರು. ಅವರ ನಿರ್ದೇಶನದ ಪೋಕಿರಿ, ಬದ್ರಿ ಚಿತ್ರಗಳು ಹಿಂದಿಗೆ ರೀಮೇಕ್ ಆಗಿವೆ. ಈಗ 'ಅಪ್ಪು' ಸರದಿ. (ಏಜೆನ್ಸೀಸ್)

English summary
Power Star Puneet Rajkumar's super hit Kannada film Appu (2002) planning to remade in Hindi. It is said that the director Puri Jagannath is considering some of the younger heroes in Bollywood. Arjun Kapoor and Siddarth Malhotra to play the lead role.
Please Wait while comments are loading...