Just In
Don't Miss!
- News
ಭಾರತದಲ್ಲಿ 20.29 ಲಕ್ಷ ಜನರಿಗೆ ಕೊರೊನಾವೈರಸ್ ಲಸಿಕೆ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚಿತ್ರರಂಗಕ್ಕೆ ಹೊಸ ಚಾಲೆಂಜ್ ಹಾಕಿದ ಪುನೀತ್ ರಾಜ್ ಕುಮಾರ್

ಚಂದನವನದಲ್ಲಿ ಹೊಸ ರೀತಿಯ ಚಾಲೆಂಜ್ ಗಳು ನಡೆಯುತ್ತಲೇ ಇರುತ್ತೆ. ಕಿಚ್ಚ ಸುದೀಪ್ ಕೆಲವು ದಿನಗಳ ಹಿಂದೆಯಷ್ಟೇ ಪೈಲ್ವಾನ್ ಚಾಲೆಂಜ್ ಹಾಕಿ ಕನ್ನಡ ಸಿನಿಮಾ ಕಲಾವಿದರೆಲ್ಲರನ್ನೂ ಜಿಮ್ ನಲ್ಲಿ ಬೆವರು ಸುರಿಸುವಂತೆ ಮಾಡಿದ್ದರು.
ಅದರ ನಂತರ ಇಡೀ ಇಂಡಿಯಾದ ಜನರನ್ನು ಫಿಟ್ ಮಾಡಲು 'ಹಮ್ ಫಿಟ್ ತೋ ಇಂಡಿಯಾ ಫಿಟ್ ಹೇ' ಚಾಲೆಂಜ್ ಸ್ವೀಕಾರ ಮಾಡಿ ಎಲ್ಲರೂ ತಮ್ಮದೇ ಸ್ಟೈಲ್ ನಲ್ಲಿ ವರ್ಕ್ ಔಟ್ ಮಾಡಿ ವಿಡಿಯೋ ಮತ್ತು ಫೋಟೋವನ್ನು ಅಪ್ಲೋಡ್ ಮಾಡಿದ್ದರು. ಈ ಚಾಲೆಂಜ್ ಅನ್ನು ನಟ ಪುನೀತ್ ರಾಜ್ ಕುಮಾರ್ ಕೂಡ ಸ್ವೀಕಾರ ಮಾಡಿ ಸಿನಿಮಾ ಸೆಟ್ ನಲ್ಲಿ ತಮ್ಮ ತಂಡದ ಜೊತೆಯಲ್ಲಿ ವರ್ಕ್ ಔಟ್ ಮಾಡಿ ವಿಡಿಯೋ ಅಪ್ಲೋಡ್ ಮಾಡಿದ್ದರು.
ಈ ಫೋಟೋದಲ್ಲಿರುವ ನಟ ಯಾರೆಂದು ಕಂಡುಹಿಡಿಯಲು ಸಾಧ್ಯವೇ ಇಲ್ಲ
ಇವುಗಳ ಮಧ್ಯೆ ಕಿಕಿ ಚಾಲೆಂಜ್ ಅನ್ನು ಕನ್ನಡದ ಬಹುತೇಕ ಕಲಾವಿದರು ಸ್ವೀಕರಿಸಿದ್ದಾರೆ. ಸದ್ಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿತ್ರರಂಗದ ಸ್ಟಾರ್ ಕಲಾವಿದರಿಗೆ ಹೊಸ ಚಾಲೆಂಜ್ ಹಾಕಿದ್ದಾರೆ. ಅವರ ಫೇಸ್ ಬುಕ್ ಮೂಲಕ ಈ ಚಾಲೆಂಜ್ ಬಗ್ಗೆ ತಿಳಿಸಿದ್ದಾರೆ. ಹಾಗಾದರೆ ಯಾವುದು ಆ ಹೊಸ ಚಾಲೆಂಜ್? ಯಾವ ಕಲಾವಿದರಿಗೆ ಚಾಲೆಂಜ್ ಹಾಕಿದ್ದಾರೆ? ಇಲ್ಲಿದೆ ಸಂಪೂರ್ಣ ಮಾಹಿತಿ ಮುಂದೆ ಓದಿ

ಪುನೀತ್ ರಾಜ್ ಕುಮಾರ್ ಹಾಕಿದ ಹೊಸ ಚಾಲೆಂಜ್
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕನ್ನಡ ಸಿನಿಮಾ ಸ್ಟಾರ್ ಗಳಿಗೆ ಹೊಸ ಚಾಲೆಂಜ್ ಹಾಕಿದ್ದಾರೆ. ಸಾಮಾನ್ಯವಾಗಿ ಯಾರೇ ಸಿಕ್ಕಾಗ ಹ್ಯಾಂಡ್ ಶೇಕ್ ಮಾಡುವುದು ಕಾಮನ್, ಅದನ್ನು ಎಷ್ಟು ಕಾನ್ಫಿಡೆನ್ಸ್ ಆಗಿ ಮಾಡುತ್ತೇವೆ ಎನ್ನುವುದು ತುಂಬಾ ಮುಖ್ಯ. ಈಗ ಕೈ ಕುಲುಕುವ ಬಗ್ಗೆಯೇ ಪವರ್ ಸ್ಟಾರ್ ಚಾಲೆಂಜ್ ಹಾಕಿದ್ದಾರೆ.

ಚಿತ್ರರಂಗದಲ್ಲಿ 'ಹ್ಯಾಂಡ್ ಶೇಕ್ ಚಾಲೆಂಜ್'
ಪುನೀತ್ ರಾಜ್ ಕುಮಾರ್ ಹ್ಯಾಂಡ್ ಶೇಕ್ ಮಾಡುತ್ತಿರುವ ಫೋಟೋವನ್ನು ಫೇಸ್ ಬುಕ್ ನಲ್ಲಿ ಶೇರ್ ಮಾಡಿ ಈ ಮೂಲಕ ಹೊಸ ಚಾಲೆಂಜ್ ಅನ್ನು ಹುಟ್ಟುಹಾಕಿದ್ದಾರೆ. ಸದ್ಯ ಈ 'ಹ್ಯಾಂಡ್ ಶೇಕ್ ಚಾಲೆಂಜ್' ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನಟ-ನಿರ್ದೇಶಕರಿಗೆ ಚಾಲೆಂಜ್
ಕನ್ನಡದ ಕಲಾವಿದರಾದ ರಕ್ಷಿತ್ ಶೆಟ್ಟಿ ಮತ್ತು ಡ್ಯಾನಿಶ್ ಸೇಠ್ ಹಾಗೂ 'ರಾಜಕುಮಾರ' ಸಿನಿಮಾ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರಿಗೆ ಪುನೀತ್ ಈ ಹ್ಯಾಂಡ್ ಶೇಕ್ ಚಾಲೆಂಜ್ ಸ್ವೀಕರಿಸುವಂತೆ ತಿಳಿಸಿದ್ದಾರೆ.

ಹ್ಯಾಂಡ್ ಶೇಕ್ ಚಾಲೆಂಜ್ ಬಗ್ಗೆ ಮಾಹಿತಿ
'ಹ್ಯಾಂಡ್ ಶೇಕ್ ಚಾಲೆಂಜ್' ಅನ್ನು ಯಾರು ಬೇಕಾದರೂ ಸ್ವೀಕರಿಸಬಹುದು. ಪರಿಚಯವಿಲ್ಲದವರು, ಆತ್ಮೀಯರನ್ನು ಪರಿಚಯ ಮಾಡಿಕೊಳ್ಳುವಾಗ ಕೈ ಕುಲುಕುವಾಗ ಒಂದು ಫೋಟೋ ತೆಗೆದುಕೊಂಡು #handshakechallenge. ಹ್ಯಾಷ್ ಟ್ಯಾಗ್ ಮೂಲಕ ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದರೆ ಆಯ್ತು. ಅದೇ ಹ್ಯಾಂಡ್ ಶೇಕ್ ಚಾಲೆಂಜ್