»   » ಪತ್ನಿಯೊಂದಿಗೆ ಯುಎಸ್ಎಗೆ ಹಾರಿದ ಪುನೀತ್

ಪತ್ನಿಯೊಂದಿಗೆ ಯುಎಸ್ಎಗೆ ಹಾರಿದ ಪುನೀತ್

By: ಉದಯರವಿ
Subscribe to Filmibeat Kannada
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈಗ ಹಾಲಿಡೇ ಮೂಡ್ ನಲ್ಲಿದ್ದಾರೆ. ವರ್ಷಕ್ಕೊಮ್ಮೆ ಅವರು ಪತ್ನಿ ಮಕ್ಕಳ ಜೊತೆ ಪ್ರವಾಸ ಕೈಗೊಳ್ಳುವುದು ಮಾಮೂಲು ಸಂಗತಿ. ಈ ಬಾರಿ ಅವರ ಫೇವರೇಟ್ ಟೂರಿಸ್ಟ್ ಸ್ಪಾಟ್ ಯುಎಸ್ಎ.

ಆದರೆ ಯುಎಸ್ಎನ ಯಾವ ಪ್ರದೇಶದಲ್ಲಿ ಅವರು ವಿಹರಿಸುತ್ತಿದ್ದಾರೆ ಎಂಬುದು ಸದ್ಯಕ್ಕೆ ಸಸ್ಪೆನ್ಸ್ ಆಗಿ ಇಡಲಾಗಿದೆ. ವರ್ಷಕ್ಕೆ ಒಂದೇ ಚಿತ್ರದಲ್ಲಿ ಅಭಿನಯಿಸಿದರೂ ಅದಕ್ಕಾಗಿ ಅವರು ಸಾಕಷ್ಟು ಪೂರ್ವಸಿದ್ಧತೆಗಳನ್ನು ಮಾಡಿಕೊಳ್ಳುತ್ತಾರೆ. ವರ್ಷ ಪೂರ್ತಿ ಒಂದೇ ಚಿತ್ರಕ್ಕಾಗಿ ಬೆವರರಿಸುತ್ತಾರೆ.

ಇದರ ಜೊತೆಗೆ ಇದ್ದೇ ಇದೆ ಸುವರ್ಣವಾಹಿನಿಯ 'ಕೋಟ್ಯಾಧಿಪತಿ' ರಿಯಾಲಿಟಿ ಶೋ. ಈ ಬಿಜಿ ಶೆಡ್ಯೂಲ್ ನಲ್ಲಿ ಪತ್ನಿ ಮಕ್ಕಳೊಂದಿಗೆ ಸಮಯ ಕಳೆಯಲು ಅವರಿಗೆ ಟೈಮೆಲ್ಲಿ ಸಿಗುತ್ತದೆ. ಹಾಗಾಗಿ ವರ್ಷಕ್ಕೊಮ್ಮೆ ಅವರು ರಿಲ್ಯಾಕ್ಸ್ ಆಗಲು ವಿದೇಶಕ್ಕೆ ಹಾರುತ್ತಾರೆ.

ದೇಹ ಮತ್ತು ಮನಸ್ಸು ಎರಡನ್ನೂ ಹಗುರ ಮಾಡಿಕೊಂಡು ಮತ್ತೆ ಚಿತ್ರೀಕರಣದಲ್ಲಿ ತೊಡಗಿಕೊಳ್ಳುತ್ತಾರೆ. ಸಾಮಾನ್ಯವಾಗಿ ಅವರ ನೆಚ್ಚಿನ ಪ್ರವಾಸಿ ತಾಣ ಆಸ್ಟ್ರೇಲಿಯಾ. ಆದರೆ ಈ ಬಾರಿ ಅವರು ಯುಎಸ್ಎಗೆ ಪ್ರಯಾಣ ಬೆಳಸಿರುವುದು ವಿಶೇಷ. ಅಲ್ಲಿನ ಅಭಿಮಾನಿಗಳೊಂದಿಗೂ ಕೊಂಚ ಸಮಯ ಕಳೆಯಲಿದ್ದಾರಂತೆ.

ಪುನೀತ್ ನಾಯಕ ನಟನಾಗಿ ಅಭಿನಯಿಸಿದ ಚೊಚ್ಚಲ ಚಿತ್ರ 'ಅಪ್ಪು' ಹಿಂದಿಗೆ ರೀಮೇಕ್ ಆಗುತ್ತಿರುವುದು ಗೊತ್ತೇ ಇದೆ. ಯುಎಸ್ ನಿಂದ ಅವರು ಹಿಂತಿರುಗಿದ ಬಳಿಕ ಎರಡು ಚಿತ್ರಗಳಲ್ಲಿ ತೊಡಗಿಕೊಳ್ಳುತ್ತಾರೆ. ಇನ್ನೂ ಶೀರ್ಷಿಕೆ ಇಡದ ಅವರ ಹೊಸ ಚಿತ್ರಕ್ಕೆ ಮೇ 3ರಂದು ಮುಹೂರ್ತ ಫಿಕ್ಸ್ ಆಗಿದೆ.

English summary
Power Star Puneet Rajkumar heading for her favorite holiday destination USA. The actor prefers spending quality time with his family. Puneet is scheduled to return by the end of April.
Please Wait while comments are loading...