»   » ಪವರ್ ಸ್ಟಾರ್ ಪುನೀತ್ ಹೊಸ ಚಿತ್ರಕ್ಕೆ ಮುಹೂರ್ತ ಫಿಕ್ಸ್

ಪವರ್ ಸ್ಟಾರ್ ಪುನೀತ್ ಹೊಸ ಚಿತ್ರಕ್ಕೆ ಮುಹೂರ್ತ ಫಿಕ್ಸ್

Posted By:
Subscribe to Filmibeat Kannada
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೊಸ ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಈ ಬಾರಿ ಆಕ್ಷನ್ ಕಟ್ ಹೇಳುತ್ತಿರುವವರು ಗಿರಿರಾಜ್. ಈ ಹಿಂದೆ ಅವರು ಅದ್ವೈತ ಹಾಗೂ ಜಟ್ಟಾ ಚಿತ್ರಳನ್ನು ನಿರ್ದೇಶಿಸಿದ್ದಾರೆ. ಇದೇ ಮೇ 3ಕ್ಕೆ ಚಿತ್ರಕ್ಕೆ ಮುಹೂರ್ತ ಫಿಕ್ಸ್ ಆಗಿದೆ.

ಈ ಚಿತ್ರವನ್ನು ವಜ್ರೇಶ್ವರಿ ಕುಮಾರ್ ನಿರ್ಮಿಸುತ್ತಿದ್ದಾರೆ. ಚಿತ್ರಕ್ಕೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ. ಇದೇ ಮೊದಲ ಬಾರಿಗೆ ಪುನೀತ್ ಚಿತ್ರಕ್ಕೆ ಇಳಯರಾಜಾ ಸಂಗೀತ ಸಂಯೋಜಿಸುತ್ತಿದ್ದಾರೆ. ಭಾವನಾ ಚಿತ್ರದ ನಾಯಕಿ. ಜೊತೆ ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಚಿತ್ರದಲ್ಲಿ ಅಭಿನಯಿಸಲಿದ್ದಾರೆ.

ಮೋಹನ್ ಲಾಲ್ ಭಾಗದ ಚಿತ್ರೀಕರಣ ಮೇ ತಿಂಗಳಲ್ಲೇ ಆರಂಭವಾಗಲಿದೆಯಂತೆ. ಮೋಹನ್ ಲಾಲ್ ಅವರು ಸೌತ್ ಅಮೆರಿಕಾ ಪ್ರವಾಸಕ್ಕೆ ಹೊರಡುತ್ತಿರುವ ಅವರ ಭಾಗದ ಚಿತ್ರೀಕರಣ ಮೊದಲೇ ಚಿತ್ರೀಕರಿಸಿಕೊಳ್ಳಲಾಗುತ್ತಿದೆ.

ಈಗಾಗಲೆ ಪುನೀತ್ ಬರ್ತ್ ಡೇ ದಿನ ಸೆಟ್ಟೇರಿರುವ ನಿನ್ನಿಂದಲೇ ಚಿತ್ರದ ಬಳಿಕ ಈ ಚಿತ್ರ ಬಿಡುಗಡೆಯಾಗಲಿದೆ. ಇನ್ನು ಪುನೀತ್ ಹೊಸ ಚಿತ್ರಕ್ಕೆ ಶೀರ್ಷಿಕೆ ಆಯ್ಕೆ ನಡೆಯುತ್ತಿದೆ. ಈಗಾಗಲೆ ಹತ್ತು ಶೀರ್ಷಿಕೆಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆಯಂತೆ. ಅವುಗಳಲ್ಲಿ ಜೇಡರಬಲೆ, ನಾಂದಿ, ಲಗೋರಿ ಸೇರಿದಂತೆ ಹಲವು ಹೆಸರುಗಳಿವೆ ಎನ್ನಲಾಗಿದೆ. (ಏಜೆನ್ಸೀಸ್)

English summary
Power Star Puneet Rajkumar's untitled film will start on May 3. The film will be directed by Giriraj. Bhavana will play the heroine for Puneet. 
Please Wait while comments are loading...