For Quick Alerts
  ALLOW NOTIFICATIONS  
  For Daily Alerts

  ಜನವರಿಯಲ್ಲಿ ತೆರೆಗೆ ಪುನೀತ್ ರಾಜ್ 'ನಿನ್ನಿಂದಲೇ'

  By Rajendra
  |

  ಹೊಸವರ್ಷದಲ್ಲಿ ಹೊಸ ಭರವಸೆ ಮೂಡಿಸಿರುವ ಚಿತ್ರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಿನ್ನಿಂದಲೇ'. ಈ ಚಿತ್ರದ ಬಗ್ಗೆ ಚಿತ್ರೋದ್ಯಮ ಬಹಳ ನಿರಿಕ್ಷೆಗಳನ್ನಿಟ್ಟುಕೊಂಡಿದೆ. ಆ ನಿರೀಕ್ಷೆಗಳು ಹುಸಿಯಾಗದಂತೆ ಚಿತ್ರವನ್ನು ತೆರೆಗೆ ತಂದಿದ್ದಾರೆ ನಿರ್ದೇಶಕ ಜಯಂತ್ ಸಿ ಪರಾಂಜೆ.

  ಇತ್ತೀಚೆಗಷ್ಟೇ ಚಿತ್ರೀಕರಣ ಮುಗಿದಿದ್ದು ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಮೂಲಗಳ ಪ್ರಕಾರ 'ನಿನ್ನಿಂದಲೇ' ಚಿತ್ರ ಜನವರಿ 9, 2014ಕ್ಕೆ ತೆರೆಗೆ ಅಪ್ಪಳಿಸುತ್ತಿದೆ. 'ಯಾರೇ ಕೂಗಾಡಲಿ' ಚಿತ್ರದ ಬಳಿಕ ತೆರೆಕಾಣುತ್ತಿರುವ ಪುನೀತ್ ಚಿತ್ರ ಇದಾಗಿದೆ. ['ನಿನ್ನಿಂದಲೇ' ಆಡಿಯೋ ರಿಲೀಸ್ಗೆ ಮಹೇಶ್ ಬಾಬು]

  ಸದ್ಯಕ್ಕೆ ಚಿತ್ರ ಸೆನ್ಸಾರ್ ನಲ್ಲಿ ಪಾಸಾಗಬೇಕಿದೆ. ಚಿತ್ರಕ್ಕೆ ಕ್ಲೀನ್ ಸರ್ಟಿಫಿಕೇಟ್ ಸಿಕ್ಕೇಸಿಗುತ್ತದೆ ಭರವಸೆಯಲ್ಲಿ ಚಿತ್ರತಂಡವಿದೆ. ಏಕೆಂದರೆ ಅಣ್ಣಾವ್ರ ಕುಟುಂಬದ ಚಿತ್ರಗಳು ಯಾವತ್ತೂ ಸದಭಿರುಚಿಯ ಚೌಕಟ್ಟನ್ನು ಮೀರಿಲ್ಲ. ಇನ್ನು ಚಿತ್ರದ ಧ್ವನಿಸುರುಳಿ ಬಗ್ಗೆಯೂ ಸಾಕಷ್ಟು ನಿರೀಕ್ಷೆಗಳಿವೆ. ಚಿತ್ರದ ಆಡಿಯೋ ಬಹುಶಃ ಇನ್ನೊಂದು ವಾರದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಬಹುದು.

  ಮುಂಬೈ ಚೆಲುವೆ, ಮಾಜಿ ಮಿಸ್ ಇಂಡಿಯಾ ಎರಿಕಾ ಫರ್ನಾಂಡೀಸ್ ಚಿತ್ರದ ನಾಯಕಿ. ಇದೇ ಮೊಟ್ಟಮೊದಲ ಬಾರಿಗೆ ತೆಲುಗಿನ ಖ್ಯಾತ ಹಾಸ್ಯ ನಟ ಬ್ರಹ್ಮಾನಂದಂ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ಚಿತ್ರದ ಪಾತ್ರವರ್ಗದಲ್ಲಿ ತಿಲಕ್ ಶೇಖರ್, ವಿನಾಯಕ ಜೋಶಿ, ಅವಿನಾಶ್ ಮುಂತಾದವರಿದ್ದಾರೆ.

  ಡಿಸೆಂಬರ್ 19ರಂದು ಚಿತ್ರದ ಆಡಿಯೋ ಬಿಡುಗಡೆಯಾಗುತ್ತಿದ್ದು ಅರಮನೆ ಮೈದಾನ ಅಥವಾ ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದೆ. ತೆಲುಗಿನ 'ಪ್ರಿನ್ಸ್' ಖ್ಯಾತಿಯ ಮಹೇಶ್ ಬಾಬು ಮುಖ್ಯ ಅತಿಥಿಯಾಗಿ ಆಗಮಿಸುತ್ತಿರುವುದು ವಿಶೇಷ.

  ಹೊಂಬಾಳೆ ಫಿಲಂಸ್ ಲಾಂಛನದಲ್ಲಿ ಈ ಚಿತ್ರವನ್ನು ವಿಜಯ್ ಕುಮಾರ್ ನಿರ್ಮಿಸುತ್ತಿದ್ದಾರೆ. ಚಿತ್ರವನ್ನು ಭಾರಿ ಬಜೆಟ್ ನಲ್ಲಿ ನಿರ್ಮಿಸಲಾಗಿದೆ. ಅಮೆರಿಕಾದಲ್ಲಿ ನೆಲೆನಿಂತ ಭಾರತೀಯ ಕುಟುಂಬ, ಅಲ್ಲಿಗೆ ಬರುವ ಮತ್ತೊಂದು ಕುಟುಂಬದ ನಡುವಿನ ಕಥಾಹಂದರವನ್ನು 'ನಿನ್ನಿಂದಲೇ' ಒಳಗೊಂಡಿದೆ.

  ಬಹುತೇಕ ಭಾಗದ ಚಿತ್ರೀಕರಣ ನ್ಯೂಯಾರ್ಕ್ ನಲ್ಲಿ ನಡೆದಿದೆ. ಕೊನೆಯ ಹಂತದ ಚಿತ್ರೀಕರಣವನ್ನು ಬೆಂಗಳೂರಿನಲ್ಲಿ ನಡೆದಿದೆ. ಮಣಿಶರ್ಮ ಸಂಗೀತ ಚಿತ್ರಕ್ಕಿದೆ. ಈ ಚಿತ್ರದ ಬಗ್ಗೆ ಮಾತನಾಡಿರುವ ಜಯಂತ್, "ಈ ಚಿತ್ರವನ್ನು ಹಿಂದಿಯಲ್ಲಿ ಮಾಡಬೇಕು ಎಂದುಕೊಂಡಿದ್ದೆ. ಆದರೆ ಪುನೀತ್ ಗೆ ಕಥೆ ಹೇಳಿದಾಗ ಅವರು ಕೂಡಲೆ ಒಪ್ಪಿಕೊಂಡರು" ಎಂದಿದ್ದಾರೆ. (ಏಜೆನ್ಸೀಸ್)

  English summary
  Power Star Puneet Rajkumar starrer Ninnindale, which has wrapped up its shooting recently has announced the release date. If sources are to be believed, the movie is likely to hit silver screen on January 9, 2014.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X