»   » ಕನ್ನಡ ಪವರ್ ಸ್ಟಾರ್ ಜೊತೆ ಸೂಪರ್ ಸ್ಟಾರ್ ಚಿತ್ರ

ಕನ್ನಡ ಪವರ್ ಸ್ಟಾರ್ ಜೊತೆ ಸೂಪರ್ ಸ್ಟಾರ್ ಚಿತ್ರ

Posted By:
Subscribe to Filmibeat Kannada
ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಮಲಯಾಳಂ ಸೂಪರ್ ಸ್ಟಾರ್ ಮೋಹಲ್ ಲಾಲ್ ಕೈಜೋಡಿಸಿದ್ದಾರೆ. ಇದೇ ಮೊದಲ ಬಾರಿಗೆ ಇಬ್ಬರೂ ಒಟ್ಟಿಗೆ ಒಂದೇ ಚಿತ್ರದಲ್ಲಿ ಅಭಿನಯಿಸುತ್ತಿದ್ದು ಈ ಚಿತ್ರದ ಮುಹೂರ್ತ ಇತ್ತೀಚೆಗೆ ಬೆಂಗಳೂರಿನ ಕೆಂಪಾಪುರದಲ್ಲಿ ನೆರವೇರಿತು.

ಮೈನಾ, ಪೃಥ್ವಿ, ಜಟ್ಟಾ ಚಿತ್ರಗಳ ನಿರ್ಮಾಪಕ ಎನ್ ಎಸ್ ರಾಜ್ ಕುಮಾರ್ ನಿರ್ಮಾಣ ಚಿತ್ರಕ್ಕೆ ಗಿರಿರಾಜ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ಅವರು ಸದ್ಯಕ್ಕೆ ವಿದೇಶಿ ಪ್ರವಾಸದಲ್ಲಿರುವ ಕಾರಣ ಅವರ ಅನುಪಸ್ಥಿತಿಯಲ್ಲಿ ಚಿತ್ರದ ಮುಹೂರ್ತ ನೆರವೇರಿತು.

ಚಿತ್ರದ ಪಾತ್ರವರ್ಗದಲ್ಲಿ ಭಾವನಾ, ರವಿಕಾಳೆ, ಅರ್ಚನಾ, ಅತುಲ್ ಕುಲಕರ್ಣಿ ಮುಂತಾದವರು ಇದ್ದಾರೆ. ಪುನೀತ್ ಅವರ ಬಹುತೇಕ ಚಿತ್ರಗಳಿಗೆ ಕ್ಲಾಪ್ ಮಾಡಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಈ ಹೊಸ ಚಿತ್ರಕ್ಕೂ ಕ್ಲಾಪ್ ಮಾಡಿದರು.

ಕೇವಲ ರು.35 ಸಾವಿರ ಕ್ಯಾಮೆರಾ ಬಳಸಿ ನವಿಲಾದವರು ಚಿತ್ರವನ್ನು ಮಾಡಿದ್ದ ಗಿರಿರಾಜ್ ಬಳಿಕ ಅದ್ವೈತ ಹಾಗೂ ಜಟ್ಟಾ ಚಿತ್ರಗಳಿಗೆ ನಿರ್ದೇಶನ ಮಾಡಿದ್ದಾರೆ. ಇನ್ನೂ ಹೆಸರಿಡ ಈ ಚಿತ್ರಕ್ಕೆ ಇಳಯರಾಜಾ ಅವರ ಸಂಗೀತವಿದೆ.

ಈಗಾಗಲೆ ಪುನೀತ್ ಬರ್ತ್ ಡೇ ದಿನ ಸೆಟ್ಟೇರಿರುವ 'ನಿನ್ನಿಂದಲೇ' ಚಿತ್ರದ ಬಳಿಕ ಈ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರಕ್ಕೆ ಶೀರ್ಷಿಕೆ ಆಯ್ಕೆ ನಡೆಯುತ್ತಿದೆ. ಈಗಾಗಲೆ ಹತ್ತು ಶೀರ್ಷಿಕೆಗಳನ್ನು ಶಾರ್ಟ್ ಲಿಸ್ಟ್ ಮಾಡಲಾಗಿದೆಯಂತೆ. ಅವುಗಳಲ್ಲಿ ಜೇಡರಬಲೆ, ನಾಂದಿ, ಲಗೋರಿ ಸೇರಿದಂತೆ ಹಲವು ಹೆಸರುಗಳಿವೆ ಎನ್ನಲಾಗಿದೆ. (ಏಜೆನ್ಸೀಸ್)

English summary
Power star Puneeth Rajakumar and Mohan Lal combination untitled Kannada film starts rolling. The film will be directed by Giriraj. Bhavana will play the heroine for Puneet.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada