»   » ನಟ ಸಾರ್ವಭೌಮನಾದ ರಾಜರತ್ನ

ನಟ ಸಾರ್ವಭೌಮನಾದ ರಾಜರತ್ನ

Posted By:
Subscribe to Filmibeat Kannada
ನಟ ಸಾರ್ವಭೌಮನಾದ ರಾಜರತ್ನ | Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಮುಂದಿನ ಚಿತ್ರದ ಶೀರ್ಷಿಕೆ ಫೈನಲ್ ಆಗಿದೆ. ಪುನೀತ್ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರದ ಪೋಸ್ಟರ್ ಬಿಡುಗಡೆ ಆಗಿದ್ದು ಸಿನಿಮಾಗೆ ನಟ ಸಾರ್ವಭೌಮ ಎಂದು ಹೆಸರಿಡಲಾಗಿದೆ.

ಅಪ್ಪು ಪೋಸ್ಟರ್ ನಲ್ಲಿ ಕ್ಯಾಮೆರಾ ಹಿಡಿದು ಕ್ಲಾಸ್ ಲುಕ್ ನಲ್ಲಿ ಪೋಸ್ ಕೊಟ್ಟಿದ್ದಾರೆ. ರಾಕ್ ಲೈನ್ ವೆಂಕಟೇಶ್ ಸಿನಿಮಾವನ್ನ ನಿರ್ಮಾಣ ಮಾಡುತ್ತಿದ್ದು ಈಗಾಗಲೇ ಚಿತ್ರದ ಶೂಟಿಂಗ್ ಶುರುವಾಗಿದೆ. ಸಿನಿಮಾದ ಆಕ್ಷನ್ ಸೀನ್ ಗಳನ್ನ ಪೀಟರ್ ಹೆನ್ ನಿರ್ದೇಶನ ಮಾಡುತ್ತಿದ್ದು ಈಗಾಗಲೇ ಪೀಟರ್ ಚಿತ್ರತಂಡವನ್ನ ಸೇರಿಕೊಂಡಿದ್ದಾರೆ.

Puneet Rajkumars movie title released. film is named Nata Sarvabowma.

ಹೆಸರು ಬದಲಿಸಿಕೊಳ್ಳುವ ಪರಂಪರೆ 'ರಾಜವಂಶ'ಕ್ಕೆ ಅದೃಷ್ಟ ತಂದಿದೆ

ಸಾರ್ವಭೌಮ ಟೈಟಲ್ ಹಾಗೂ ಫಸ್ಟ್ ಪೋಸ್ಟರ್ ನೋಡಿರುವ ಸಿನಿಮಾ ಮಂದಿ ಹಾಗೂ ಅಭಿಮಾನಿಗಳು ಮೆಚ್ಚುಗೆಯನ್ನ ವ್ಯಕ್ತ ಪಡಿಸಿದ್ದಾರೆ. ಯಾರೇ ಕೂಗಾಡಲಿ ಸಿನಿಮಾದ ನಂತರ ಅಪ್ಪು ತಮ್ಮ ಹೇರ್ ಬದಲಾಯಿಸಿಕೊಂಡಿದ್ದು ಚಿತ್ರದ ಬಗ್ಗೆ ಈಗಾಗಲೇ ನಿರೀಕ್ಷೆಗಳು ಹುಟ್ಟುಕೊಂಡಿದೆ. ಇಂದು ಮಧ್ಯರಾತ್ರಿ (ಮಾರ್ಚ್ 16) ಸಾರ್ವಭೌಮ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆ ಆಗುವ ಸಾಧ್ಯತೆಗಳು ಹೆಚ್ಚಾಗಿದೆ.

Puneet Rajkumars movie title released. film is named Nata Sarvabowma.

ನಾಳೆಯ ಹುಟ್ಟುಹಬ್ಬಕ್ಕಾಗಿ ಅಭಿಮಾನಿಗಳು ಭರ್ಜರಿ ಸಿದ್ದತೆಗಳನ್ನ ಮಾಡಿಕೊಂಡಿದ್ದು ರಾಜಕುಮಾರ ಸಿನಿಮಾ ತಂಡದಿಂದಲೂ ಅಪ್ಪು ಅಭಿನಯದ ಮುಂದಿನ ಚಿತ್ರದ ಪೋಸ್ಟರ್ ಕೂಡ ರಿಲೀಸ್ ಆಗಿದೆ. ಒಟ್ಟಾರೆ ಈ ಬಾರಿಯ ಹುಟ್ಟುಹಬ್ಬ ಸಖತ್ ಸ್ಪೆಷಲ್ ಆಗಿರುವುದಂತು ಗ್ಯಾರೆಂಟಿ.

ಚಿತ್ರರಂಗಕ್ಕೆ ಎಂದಿಗೂ ಬರಲ್ಲ ಎಂದ ರಾಜ್ ಮೊಮ್ಮಗಳು

English summary
Kannada film actor Puneet Rajkumar's movie title was released. the film is named Nata Sarvabowma. The film is produced by Rockline Venkatesh. Sarvabowma movie first look will be released. Puneet Rajkumar's Birthday specially Sarvabowma movie first look will be released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X