»   » ನವೆಂಬರ್ 30ಕ್ಕೆ ಯಾರೇ ಕೂಗಾಡಲಿ ಆಡಿಯೋ

ನವೆಂಬರ್ 30ಕ್ಕೆ ಯಾರೇ ಕೂಗಾಡಲಿ ಆಡಿಯೋ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಯೋಗೀಶ್ ಹಾಗೂ ಭಾವನಾ ಅಭಿನಯದ 'ಯಾರೇ ಕೂಗಾಡಲಿ' ಚಿತ್ರ ಈಗಾಗಲೆ ಕನ್ನಡ ಚಿತ್ರೋದ್ಯಮದಲ್ಲಿ ಬಹಳಷ್ಟು ಕುತೂಹಲ ಮೂಡಿಸಿದೆ. ಈ ಚಿತ್ರದ ಆಡಿಯೋ ನವೆಂಬರ್ 30ರಂದು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದೆ.

ಆಡಿಯೋ ಬಿಡುಗಡೆ ಸಮಾರಂಭ ಬೆಂಗಳೂರಿನಲ್ಲಿ ನಡೆಯಲಿದೆ. ಡಿಸೆಂಬರ್ 1ರಿಂದ ಯಾರೇ ಕೂಗಾಡಲಿ ಆಡಿಯೋ ದೊರೆಯಲಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಚಿತ್ರ ಡಿಸೆಂಬರ್ 20ಕ್ಕೆ ತೆರೆಕಾಣಲಿದೆ. ತಮಿಳಿನ ಪೊರಾಲಿ ಚಿತ್ರದ ರೀಮೇಕ್ ಆದ ಈ ಚಿತ್ರವನ್ನು ಮೂಲ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಸಮುದ್ರ ಕಣಿ ನಿರ್ದೇಶಿಸಿದ್ದಾರೆ.

ವಿ ಹರಿಕೃಷ್ಣ ಅವರ ಸಂಗೀತ ನಿರ್ದೇಶನ ಇರುವ ಚಿತ್ರಕ್ಕೆ ಯೋಗರಾಜ್ ಭಟ್ ಹಾಗೂ ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿದೆ. ರವಿವರ್ಮ ಅವರ ಸಾಹಸ ಸಂಯೋಜನೆ ಚಿತ್ರದ ಇನ್ನೊಂದು ಆಕರ್ಷಣೆ. ಈಗಾಗಲೆ ಯೂಟ್ಯೂಬ್ ನಲ್ಲಿ ಚಿತ್ರದ ಟ್ರೇಲರ್ ಹೊಸ ಹವಾ ಎಬ್ಬಿಸಿದ್ದು ಚಿತ್ರದ ಬಿಡುಗಡೆಗಾಗಿ ಪುನೀತ್ ಅಭಿಮಾನಿಗಳು ಜಾತಕಪಕ್ಷಿಯಂತೆ ಕಾಯುತ್ತಿದ್ದಾರೆ.

'ಯಾರೇ ಕೂಗಾಡಲಿ' ಚಿತ್ರ ಹಲವಾರು ಕಾರಣಗಳಿಗೆ ವಿಶೇಷವಾಗಿದೆ. ಮೊದಲನೆಯದಾಗಿ 'ಮಠ' ಗುರು ಪ್ರಸಾದ್ ಅವರ ಸಂಭಾಷಣೆ. ಎರಡನೆಯ ವಿಶೇಷ ಎಂದರೆ ಸಮುದ್ರ ಖಣಿ ಮೊದಲ ಬಾರಿಗೆ ಕನ್ನಡದಲ್ಲಿ ಆಕ್ಷನ್ ಕಟ್ ಹೇಳಿರುವ ಚಿತ್ರ ಎಂಬುದು.

ಇನ್ನೊಂದು ಆಕರ್ಷನೆ ಚಾರ್ಮಿ ಕೌರ್ ಐಟಂ ಸಾಂಗ್. ಹುಡುಗರು ಚಿತ್ರದ ಬಳಿಕ ಲೂಸ್ ಮಾದ ಯೋಗೀಶ್ ಮತ್ತೊಮ್ಮೆ ಪುನೀತ್ ಗೆ ಸಾಥ್ ನೀಡಿರುವುದು. ಈಗಾಗಲೆ ಪುನೀತ್ ಜೊತೆ 'ಜಾಕಿ' ಚಿತ್ರದಲ್ಲಿ ನಾಯಕಿಯಗಿ ಮಿಂಚಿದ್ದ ಭಾವನಾ ಇಲ್ಲೂ ಕಣ್ಮನ ತಣಿಸುವುದರಲ್ಲಿ ಅನುಮಾನವಿಲ್ಲ. (ಏಜೆನ್ಸೀಸ್)

English summary
Power Star Puneeth Rajkumar and Bhavana starrer Kannada film Yaare Koogadali audio to be releases on 30th November. V Harikrishna has ocmposed music for the film for which Yogaraj Bhat and Dr. Nagendra Prasad have written the lyrics.
Please Wait while comments are loading...