For Quick Alerts
  ALLOW NOTIFICATIONS  
  For Daily Alerts

  ಡೈನಾಮಿಕ್ 'ಜಂಟಲ್ ಮ್ಯಾನ್'ಗೆ ಪವರ್ ನೀಡಿದ ಆಕ್ಷನ್ ಪ್ರಿನ್ಸ್

  |

  ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ನಟಿಸುತ್ತಿರುವ ಜಂಟಲ್ ಮ್ಯಾನ್ ಸಿನಿಮಾಗೆ ಸ್ಯಾಂಡಲ್ವುಡ್ ಸ್ಟಾರ್ ನಟರು ಸಾಥ್ ಕೊಡ್ತಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಧ್ರುವ ಸರ್ಜಾ ಜಂಟಲ್ ಮ್ಯಾನ್ ಜೊತೆ ಕೈಜೋಡಿಸುತ್ತಿದ್ದಾರೆ.

  ಜನವರಿ 6 ರಂದು ಜಂಟಲ್ ಮ್ಯಾನ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗುತ್ತಿದ್ದು, ಪುನೀತ್ ಮತ್ತು ಧ್ರುವ ಸರ್ಜಾ ಲಾಂಚ್ ಮಾಡ್ತಿದ್ದಾರೆ. ಈ ಮೂಲಕ ಡೈನಾಮಿಕ್ ಗೆ ಆಕ್ಷನ್ ಪ್ರಿನ್ಸ್ ಮತ್ತು ಪುನೀತ್ ಅವರ ಬಲ ಸೇರುತ್ತಿದೆ.

  ಈಗಾಗಲೇ ಜಂಟಲ್ ಮ್ಯಾನ್ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಥ್ರಿಲ್ ಹೆಚ್ಚಿಸಿತ್ತು. ಸ್ಲೀಪಿಂಗ್ ಬ್ಯೂಟಿ ಸಿಂಡ್ರೋಮ್‌ (ನಿದ್ರೆ ಮಾಡುವ ಕಾಯಿಲೆ) ಎಂಬ ರೋಗದಿಂದ ನಾಯಕ ಬಳಲುತ್ತಿದ್ದು, 18 ಗಂಟೆ ನಿದ್ದೆ ಮಾಡುವುದು ಹಾಗೂ 6 ಗಂಟೆ ಮಾತ್ರ ಎಚ್ಚರ ಆಗಿರುವ ವ್ಯಕ್ತಿತ್ವ ಹೊಂದಿರುತ್ತಾರೆ. ಅವನ ಜೀವನದಲ್ಲಿ ಏನೆಲ್ಲಾ ಆಗುತ್ತೆ ಎಂಬುದನ್ನು ಬಹಳ ರೋಚಕವಾಗಿ ಮೂಡಿಬಂದಿದೆ ಎಂಬ ಭರವಸೆ ಹುಟ್ಟಿಸಿದೆ.

  ಜಡೇಶ್ ಕುಮಾರ್ ಹಂಪಿ ನಿರ್ದೇಶನ ಮಾಡುತ್ತಿರುವ ಈ ಚಿತ್ರವನ್ನ ಗುರುದೇಶ ಪಾಂಡೆ ನಿರ್ಮಿಸಿದ್ದಾರೆ. ನಿಶ್ವಿಕಾ ನಾಯ್ಡು ಈ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸಂಚಾರಿ ವಿಜಯ್, ಬೇಬಿ ಆರಾಧ್ಯ, ಭರತ್ ಕಲ್ಯಾಣ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  ಹತ್ತು ವರ್ಷದಲ್ಲಿ ಮಾಡಿದ ಮೂವತ್ತು ಸಿನಿಮಾಗಳಿಂದ ಬದಲಾದ ಪ್ರಜ್ವಲ್ ಹತ್ತು ವರ್ಷದಲ್ಲಿ ಮಾಡಿದ ಮೂವತ್ತು ಸಿನಿಮಾಗಳಿಂದ ಬದಲಾದ ಪ್ರಜ್ವಲ್

  ಸುಧಾಕರ್ ಶೆಟ್ಟಿ ಅವರ ಛಾಯಾಗ್ರಹಣ, ಅಜನೀಶ್ ಲೋಕನಾಥ್ ಅವರ ಸಂಗೀತ, ವೆಂಕಟೇಶ್ ಯುಡಿವಿ ಅವರ ಸಂಕಲನ ಚಿತ್ರಕ್ಕಿದ್ದು, ಮುರಳಿ ಮಾಸ್ಟರ್ ಮತ್ತು ಗುಂಗುಮ್ ರಾಜು ಅವರ ನೃತ್ಯ ಸಂಯೋಜನೆ ಒಳಗೊಂಡಿದೆ.

  ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಧನಂಜಯ್, ಕಿನ್ನಲ್ ರಾಜ್ ಅವರ ಸಾಹಿತ್ಯವಿದ್ದು, ಸಂಚಿತ್ ಹೆಗ್ಡೆ, ವಿಜಯ್ ಪ್ರಕಾಶ್, ವಸಿಷ್ಠ ಸಿಂಹ ಅವರ ಧ್ವನಿಯಲ್ಲಿ ಹಾಡುಗಳು ಮೂಡಿಬಂದಿದೆ. ಪ್ರಜ್ವಲ್ ನಟನೆಯ ನಿರೀಕ್ಷೆಯ ಚಿತ್ರಗಳಲ್ಲಿ ಜಂಟಲ್ ಮ್ಯಾನ್ ಪ್ರಮುಖವಾಗಿದ್ದು, ಈ ವರ್ಷದಲ್ಲಿ ತೆರೆಗೆ ಬರಲಿದೆ.

  English summary
  Powerstar Puneeth Rajkumar and action prince Dhruva Sarja join hands with dynamic prince for the Gentleman trailer launch on january 6th at GT Mall.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X