For Quick Alerts
  ALLOW NOTIFICATIONS  
  For Daily Alerts

  ಪವರ್ ಸ್ಟಾರ್ 'ದೊಡ್ಮನೆ ಹುಡುಗ' ಪಕ್ಕಾ ಲೋಕಲ್ ಫ್ಲೇವರ್ ಕಣ್ರೀ

  By Suneetha
  |

  ದುನಿಯಾ ಸೂರಿ ಅವರ ಆಕ್ಷನ್-ಕಟ್ ನಲ್ಲಿ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ರಾಧಿಕಾ ಪಂಡಿತ್ ಅವರ ಜುಗಲ್ ಬಂದಿಯಲ್ಲಿ ಮೂಡಿ ಬರುತ್ತಿರುವ 'ದೊಡ್ಮನೆ ಹುಡುಗ' ಸಿನಿಮಾ ಸಂಪೂರ್ಣ ಸ್ಥಳೀಯ ಭಾಷೆಯ ಮೇಲೆ ನಿರ್ಮಾಣವಾಗುತ್ತಿದೆ.

  ಇನ್ನು ಕೋಲಾರ, ಮಂಡ್ಯ, ಹಾಗೂ ಹುಬ್ಬಳ್ಳಿ ಭಾಷೆಯನ್ನು ಚಿತ್ರದಲ್ಲಿ ಬಳಸಿಕೊಳ್ಳುವ ಮೂಲಕ ಕರ್ನಾಟಕದ ಭಾಷಾ ವೈವಿಧ್ಯತೆಯನ್ನು ಸೆರೆ ಹಿಡಿಯಲಾಗಿದೆ. ಇದೀಗ ಚಿತ್ರದ ಹೊಚ್ಚ ಹೊಸ ಪೋಸ್ಟರ್ ಬಿಡುಗಡೆ ಆಗಿದ್ದು, ಪೋಸ್ಟರ್ ನಲ್ಲಿ ಪುನೀತ್ ಮತ್ತು ರಾಧಿಕಾ ಅವರು ಬೈಕ್ ನಲ್ಲಿ ಜಾಲಿ ರೈಡ್ ಮಾಡಿದ್ದಾರೆ.[ಪವರ್ ಸ್ಟಾರ್ ಅಪ್ಪು ಹುಟ್ಟುಹಬ್ಬಕ್ಕೆ 'ಚಕ್ರವ್ಯೂಹ' ಉಡುಗೊರೆ]

  ಫೆಬ್ರವರಿ 8 ರಿಂದ ಚಿತ್ರದ ಹಾಡಿನ ಚಿತ್ರೀಕರಣ ಆರಂಭವಾಗಲಿದ್ದು, ಮೊದಲ ಟ್ರ್ಯಾಕ್ ಸಂಪೂರ್ಣ ಹುಬ್ಬಳ್ಳಿ ಭಾಷೆಯಲ್ಲಿದೆ. 'ಯಾಕ್ ಮಗನ ಮೈಯಾಗ ಹೆಂಗೈತಿ..ಹಂಗೆ ಹೋಗಬ್ಯಾಡ್ ನಿಲ್ಲ..ಎಲ್ಲೋ ನೋಡಬ್ಯಾಡ..ಚುರು ಗಾಡಿ ನಿಲ್ಸು..ಐಸ್ ಕ್ಯಾಂಡಿ ಕೊಡ್ಸು..' ಎಂಬ ಹಾಡು ಪಕ್ಕಾ ಹುಬ್ಬಳ್ಳಿ ಭಾಷೆಯಲ್ಲಿ ಮೂಡಿಬಂದಿದೆ.

  ಅಂದಹಾಗೆ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ಪ್ರಿನ್ಸಸ್ ನಟಿ ರಾಧಿಕಾ ಪಂಡಿತ್ ಅವರು ಕೋಲಾರ ಹುಡುಗಿಯಾಗಿ ಮಿಂಚಿದ್ದು, ಅವರು ಹುಬ್ಬಳ್ಳಿಗೆ ಏಕೆ ಬರುತ್ತಾರೆ ಅನ್ನೋದೇ ಚಿತ್ರದ ಕಥೆ.[ಪವರ್ ಸ್ಟಾರ್ ಚಿತ್ರಕ್ಕೆ ಧ್ವನಿ ನೀಡಿದ ಯಂಗ್ ಟೈಗರ್ NTR]

  ವಿಶೇಷವಾಗಿ ಈ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ಅವರು ಕೂಡ ಹುಬ್ಬಳ್ಳಿ ಭಾಷೆಯಲ್ಲಿ ಮಾತನಾಡಿದ್ದಾರೆ. ಅಲ್ಲದೇ ಈ ಸಿನಿಮಾದಲ್ಲಿ ಕರ್ನಾಟಕದ ಇತರೆ ಭಾಗದ ಭಾಷೆಗಳನ್ನು ಬಳಸಿಕೊಳ್ಳುವ ಯತ್ನ ಮಾಡಿದ್ದೇವೆ ಎಂದು ನಿರ್ದೇಶಕ ಸೂರಿ ತಿಳಿಸಿದ್ದಾರೆ.

  ನಿರ್ದೇಶಕ ಯೋಗರಾಜ್ ಭಟ್ರ ಸಾಹಿತ್ಯಕ್ಕೆ ವಿ.ಹರಿಕೃಷ್ಣ ಅವರು ಸಂಗೀತ ನೀಡಿದ್ದು, ಹಿನ್ನಲೆ ಗಾಯಕರನ್ನು ಮತ್ತು ನೃತ್ಯ ನಿರ್ದೇಶಕರ ಹುಡುಕಾಟದಲ್ಲಿ ಸೂರಿ ಬ್ಯುಸಿಯಾಗಿದ್ದಾರೆ.

  English summary
  Puneeth Rajkumar and Radhika Pandit starrer, Doddmane Hudga, are banking on many Kannada flavours. Using dialects common in Kolar, Mandya and Hubballi, the team has pitched an approach to capture the verbal diversity of Karnataka. Beginning the colloquial flavour with the songs which will start shoot from February 8.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X