»   » 'ಅನ್ನಿಯನ್' ಗೆಟಪ್ ನಲ್ಲಿ ಪುನೀತ್ ರಾಜ್ ಕುಮಾರ್!

'ಅನ್ನಿಯನ್' ಗೆಟಪ್ ನಲ್ಲಿ ಪುನೀತ್ ರಾಜ್ ಕುಮಾರ್!

Posted By: ರವಿಕಿಶೋರ್
Subscribe to Filmibeat Kannada
ಈ ಫೋಟೋ ನೋಡಿದರೆ 2005ರಲ್ಲಿ ತೆರೆಕಂಡ ಶಂಕರ್ ನಿರ್ದೇಶನದ ತಮಿಳಿನ ಬಿಗ್ ಬಜೆಟ್ ಚಿತ್ರ 'ಅನ್ನಿಯನ್' ನೆನಪಾಗುತ್ತದೆ. ಆ ಚಿತ್ರದಲ್ಲಿ ವಿಕ್ರಮ್ ಅವರ ಗೆಟಪ್ ಅನ್ನು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ವಿಭಿನ್ನ ಗೆಟಪ್ ಬಹುತೇಕ ಹೋಲುತ್ತದೆ. ಆದರೆ ಆ ಚಿತ್ರಕ್ಕೂ ಪುನೀತ್ ಫೊಟೋಗೂ ಏನು ಸಂಬಂಧ ಎಂಬುದು ತಾನೆ ನಿಮ್ಮ ಡೌಟು.

ಅದು ಗೊತ್ತಾಗಬೇಕಾದರೆ ಸ್ವಲ್ಪ ಸಮಯ ಕಾಯಲೇಬೇಕು. ಏಕೆಂದರೆ ಈ ಫೋಟೋ ಈಗ ಭಾರಿ ಸದ್ದು ಮಾಡುತ್ತಿದೆ. ಇದು ಸಮುದ್ರ ಖಣಿ ನಿರ್ದೇಶನದ 'ಯಾರೇ ಕೂಗಾಡಲಿ' ಚಿತ್ರದ್ದು. ಈ ಚಿತ್ರದ ನಿರ್ದೇಶಕರು ತಮಿಳಿನವರೇ ಆದ ಕಾರಣ ಅನ್ನಿಯನ್ ಪ್ರಭಾವ ಅವರಿಗೂ ಆಗಿರಬಹುದು. ಆದರೆ ಚಿತ್ರ ಬಿಡುಗಡೆಯಾಗುವವರೆಗೆ ಈ ಬಗ್ಗೆ ಏನೂ ಹೇಳಲಿಕ್ಕಾಗಲ್ಲ.

ಏನಪ್ಪಾ ಈ ಗೆಟಪ್ ಎಂದು ಪುನೀತ್ ಅಭಿಮಾನಿಗಳು ತಲೆಕೆಡಿಸಿಕೊಂಡು ಕೂತಿದ್ದಾರೆ. ಈ ಹಿಂದೆ ಪುನೀತ್ ಅವರು ಪ್ರೇಮ್ ನಿರ್ದೇಶನದ 'ರಾಜ್ ದಿ ಶೋ ಮ್ಯಾನ್' ಚಿತ್ರದಲ್ಲೂ ಒಂಚೂರು ಇದೇ ರೀತಿ ಕೂದಲು ಬಿಟ್ಟುಕೊಂಡು ಗಮನಸೆಳೆದಿದ್ದರು. ಈಗ ತಮ್ಮ ಕೇಶರಾಶಿಯನ್ನು ಇನ್ನೊಂದಿಷ್ಟು ಪೊದೆಯ ತರಹ ಮಾಡಿಕೊಂಡು ಆಗಮಿಸಿದ್ದಾರೆ.

ಇರಲಿ ಈ ಗೆಟಪ್ ಮಹತ್ವ ಗೊತ್ತಾಗಬೇಕಾದರೆ ಚಿತ್ರ ಬಿಡುಗಡೆಯವರೆಗೂ ಕಾಯಲೇಬೇಕು. ನವೆಂಬರ್ ನಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ. ಪೂರ್ಣಿಮಾ ಎಂಟರ್ ಪ್ರೈಸಸ್ ಲಾಂಛನದಲ್ಲಿ ಪಾರ್ವತಮ್ಮ ರಾಜ್ ಕುಮಾರ್ ಅವರು ನಿರ್ಮಿಸುತ್ತಿರುವ ಈ ಚಿತ್ರದ ನಾಯಕಿ ಭಾವನಾ. ತಮಿಳಿನ ಪೊರಾಲಿ ಚಿತ್ರದ ರೀಮೇಕ್ ಇದು. ಮೂಲ ಚಿತ್ರಕ್ಕೂ ಸಮುದ್ರ ಖನಿ ಅವರೇ ಆಕ್ಷನ್ ಕಟ್ ಹೇಳಿದ್ದರು. (ಒನ್ಇಂಡಿಯಾ ಕನ್ನಡ)

English summary
Power Star Puneeth Rajkumar appears diffrent get up in Kannada film Yaare Koogadali. His hair style looks like Vikram's get up in Shankar's Anniyan (2005) film. The film directed by Samuthirakani, starring Puneeth Rajkumar, Yogesh and Bhavana in the lead roles.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada