Don't Miss!
- Sports
ಆಕ್ಯುಪ್ರೆಶರ್ ಚಿಕಿತ್ಸೆ ಪಡೆಯುತ್ತಿರುವ ಚಿತ್ರವನ್ನು ಹಂಚಿಕೊಂಡ ಶ್ರೇಯಸ್ ಅಯ್ಯರ್
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ನವೆಂಬರ್ 16 ಕ್ಕೆ ಅಪ್ಪುಗಾಗಿ ಒಂದಾಗಲಿದೆ ದಕ್ಷಿಣ ಭಾರತ ಚಿತ್ರರಂಗ
ಪುನೀತ್ ರಾಜ್‌ಕುಮಾರ್ ನಿಧನದಿಂದ ಚಿತ್ರರಂಗಕ್ಕೆ ಮಂಕು ಆವರಿಸಿಬಿಟ್ಟಿದೆ. ಚಿತ್ರೋದ್ಯಮದ ಹಲವರು ಹಲವು ರೀತಿಯಲ್ಲಿ ಈಗಾಗಲೇ ಪುನೀತ್ ಅನ್ನು ನೆನಪಿಸಿಕೊಂಡಿದ್ದಾರೆ. ನೆನಪಿಸಿಕೊಳ್ಳುತ್ತಲೂ ಇದ್ದಾರೆ. ಈ ನಡುವೆ ಇಡೀಯ ಚಿತ್ರೋದ್ಯಮ ಒಟ್ಟು ಸೇರಿ ಪುನೀತ್‌ಗೆ ನಮನ ಸಲ್ಲಿಸಲು ವೇದಿಕೆ ಸಿದ್ದವಾಗುತ್ತಿದೆ.
ಚಲನಚಿತ್ರ ವಾಣಿಜ್ಯ ಮಂಡಳಿ ನೇತೃತ್ವದಲ್ಲಿ ನವೆಂಬರ್ 16 ರಂದು 'ಪುನೀತ್ ನಮನ' ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಇಡೀಯ ಚಿತ್ರಮಂದಿರ ಒಂದಾಗುತ್ತಿದೆ. ಒಂದಾಗಿ ಪುನೀತ್ ರಾಜ್‌ಕುಮಾರ್ ಅನ್ನು ನೆನಪಿಸಿಕೊಳ್ಳಲಿದ್ದಾರೆ, ಅಪ್ಪುವಿಗೆ ನಮನ ಸಲ್ಲಿಸಲಿದ್ದಾರೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಸಾ.ರಾ.ಗೋವಿಂದು, ನವೆಂಬರ್ 06 ರಂದು ಅರಮನೆ ಮೈದಾನದಲ್ಲಿ 'ಪುನೀತ್ ನಮನ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಕನ್ನಡ ಚಿತ್ರೋದ್ಯಮದ ಎಲ್ಲ ಪ್ರಮುಖರು, ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಅವರ ಸಚಿವ ಸಂಪುಟ ಆಗಮಿಸಲಿದ್ದಾರೆ ಎಂದರು.
ನವೆಂಬರ್ 16 ರಂದು ಪುನೀತ್ ನಮನ ಕಾರ್ಯಕ್ರಮದಲ್ಲಿ ಪುನೀತ್ ಗೀತ ನಮನ ಸಹ ಇರಲಿದೆ. ನಾಗೇಂದ್ರ ಪ್ರಸಾದ್ ಅಪ್ಪು ಬಗ್ಗೆ ಬರೆದಿರುವ ಹಾಡೊಂದರ ಪ್ರಸ್ತುತಿ ಮೂಲಕ ಗೀತ ನಮನ ಆರಂಭವಾಗಲಿದ್ದು, ಪುನೀತ್ ರಾಜ್‌ಕುಮಾರ್ ನಟನೆಯ ಹಾಡುಗಳನ್ನು ವಿವಿಧ ಹೆಸರಾಂತ ಗಾಯಕರು ಹಾಡಲಿದ್ದಾರೆ ಎಂದರು ಸಾ.ರಾ.ಗೋವಿಂದು.
ನಮ್ಮ ಚಿತ್ರರಂಗದವರು ಮಾತ್ರವೇ ಅಲ್ಲದೆ ನೆರೆ-ಹೊರೆಯ ಚಿತ್ರರಂಗದ ಗಣ್ಯರು ಸಹ 'ಪುನೀತ್ ನಮನ' ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ನೆರೆಯ ಚಿತ್ರೋದ್ಯಮದವರನ್ನು ಆಹ್ವಾನಿಸಲು ನಾನೂ ಸೇರಿದಂತೆ ಸಮಿತಿಯೊಂದು ತೆರಳಲಿದ್ದು, ಸ್ಟಾರ್ ನಟರು, ಪುನೀತ್‌ಗೆ ಆಪ್ತರಾಗಿದ್ದವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುತ್ತೇವೆ'' ಎಂದಿದ್ದಾರೆ.
ಶಿವರಾಜ್ ಕುಮಾರ್ ಅವರಿಗೆ 'ಪುನೀತ್ ನಮನ'ದ ಬಗ್ಗೆ ಈಗಾಗಲೇ ಮಾಹಿತಿ ನೀಡಿದ್ದೇವೆ, ಇಡೀಯ ರಾಜ್‌ಕುಮಾರ್ ಕುಟುಂಬ ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದೆ. ಅರಮನೆ ಮೈದಾನದ ಯಾವುದಾದರೂ ಹಾಲ್‌ನ ಒಳಗೆ ಒಳಾಂಗಣ ಕಾರ್ಯಕ್ರಮವಾಗಿ 'ಪುನೀತ್ ನಮನ' ನಡೆಯಲಿದ್ದು, ಇನ್ನೂ ಹೆಚ್ಚಿನ ಮಾಹಿತಿಯನ್ನು, ಕಾರ್ಯಕ್ರಮದ ಅಂತಿಮ ರೂಪು-ರೇಷೆಯನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳಲಿದ್ದೇವೆ ಎಂದಿದ್ದಾರೆ ಸಾ.ರಾ.ಗೋವಿಂದು.
ಪುನೀತ್ ರಾಜ್‌ಕುಮಾರ್ ಸ್ಮರಣಾರ್ಥ ಈಗಾಗಲೇ ಹಲವಾರು ಕಾರ್ಯಕ್ರಮಗಳಲ್ಲಿ ಅವರ ಅಭಿಮಾನಿಗಳು ರಾಜ್ಯದಾದ್ಯಂತ ಹಮ್ಮಿಕೊಂಡಿದ್ದಾರೆ. ನಟಿ ಪ್ರಣಿತಾ ಸುಭಾಶ್, ಪುನೀತ್ ನೆನಪಿನಲ್ಲಿ ಉಚಿತ ಆರೋಗ್ಯ ಶಿಬಿರವನ್ನು ಇಂದಷ್ಟೆ ಆಯೋಜಿಸಿದ್ದರು. ಪುನೀತ್ ಅವರ ಹಲವು ಅಭಿಮಾನಿ ಸಂಘಗಳು ಅಪ್ಪು ನೆನಪಿಗೆ ಹಲವು ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿವೆ. ಇದೀಗ ಚಿತ್ರರಂಗವು ದೊಡ್ಡದಾಗಿ ಅಪ್ಪುವಿಗೆ ನಮನ ಸಲ್ಲಿಸಲು ಮುಂದಾಗಿದೆ.
ಪುನೀತ್ ರಾಜ್‌ಕುಮಾರ್ ಅಂತಿಮ ದರ್ಶನಕ್ಕೆ ಬರಲಾಗದಿದ್ದ ಹಲವಾರು ನೆರೆ-ಹೊರೆಯ ಸ್ಟಾರ್ ನಟರು ಈಗ ಪುನೀತ್ ನಿವಾಸಕ್ಕೆ ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವ ಹೇಳುತ್ತಿದ್ದಾರೆ. ನಿನ್ನೆ ನಟ ನಾಗಾರ್ಜುನ, ತಮಿಳು ನಟ ಶಿವಕಾರ್ತಿಕೇಯನ್ ಬಂದಿದ್ದರು. ಇಂದು ರಾಮ್ ಚರಣ್ ತೇಜ, ತಮಿಳುನಾಡಿನ ಸೆಲೆಬ್ರಿಟಿ ಪರ್ತಕರ್ತ ನಕ್ಕೀರನ್ ಗೋಪಾಲ್ ಬಂದಿದ್ದರು. ನಟ ವಿಜಯ್ ಸೇತುಪತಿ ಇಂದು ಅಪ್ಪು ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿದ್ದಾರೆ.
ಕಂಠೀರವ ಸ್ಟುಡಿಯೋದ ಪುನೀತ್ ರಾಜ್‌ಕುಮಾರ್ ಸಮಾಧಿ ಸ್ಥಳಕ್ಕೆ ಇಂದಿನಿಂದ ಸಾರ್ವಜನಿಕ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಮೊದಲ ದಿನವೇ ಸಾವಿರಾರು ಮಂದಿ ಅಭಿಮಾನಿಗಳು ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.