For Quick Alerts
  ALLOW NOTIFICATIONS  
  For Daily Alerts

  ಪುನೀತ್ 'ನಿನ್ನಿಂದಲೇ' ಚಿತ್ರದಿಂದ ಸಾಗರ್ ರೀ ಓಪನ್

  By ಜೀವನರಸಿಕ
  |

  ಸ್ಯಾಂಡಲ್ ವುಡ್ ನ ಲಕ್ಕಿ ಥಿಯೇಟರ್ ಸಾಗರ್ ಚಿತ್ರಮಂದಿರ ಮತ್ತೆ ಓಪನ್ ಆಗಲಿದೆ. ಈ ಸುದ್ದಿ ಕೇಳಿ ವಿತರಕರು ಮತ್ತು ನಿರ್ಮಾಪಕರು ಚಿತ್ರಮಂದಿರದ ಮುಂದೆ ಕ್ಯೂ ನಿಂತಿರೋ ಸುದ್ದಿಯೂ ಇದೆ. ಆದರೆ ಸಾಗರ್ ಚಿತ್ರಮಂದಿರ ಓಪನಿಂಗ್ ಪಡ್ಕೋತಿರೋದು ಪುನೀತ್ ಅಭಿನಯದ 'ನಿನ್ನಿಂದಲೇ' ಚಿತ್ರದಿಂದ.

  ಸಾಗರ್ ಚಿತ್ರಮಂದಿರ ಸ್ಯಾಂಡಲ್ ವುಡ್ ನ ನೂರಾರು ಯಶಸ್ವಿ ಸಿನಿಮಾಗಳಿಗೆ ಸಾಕ್ಷಿಯಾದ ಚಿತ್ರಮಂದಿರ. ಇಲ್ಲಿ ತೆರೆಗೆ ಬಂದ ಹೆಚ್ಚಿನ ಸಿನಿಮಾಗಳು ಯಶಸ್ವಿಯಾಗ್ತಿದ್ದದ್ದು ಚಿತ್ರಪ್ರೇಮಿಗಳಿಗೆ ಮತ್ತು ನಿರ್ಮಾಪಕ, ವಿತರಕರ ಫೇವರೀಟ್ ಚಿತ್ರಮಂದಿರವಾಗಿತ್ತು. ಸಾಗರ್ ಚಿತ್ರಮಂದಿರವನ್ನ ಕೆಡವಿ ಹಾಕಿ ಅಲ್ಲಿ ಮಾಲ್ ನಿರ್ಮಿಸೋ ಯೋಜನೆ ಮಾಲೀಕರಿಗಿತ್ತು. [ಕೊನೇ ಆಟ ಮುಗಿಸಿದ ಕೆ ಜಿ ರಸ್ತೆಯ ಸಾಗರ್]

  ಚಿತ್ರಮಂದಿರದ ಎರಡು ವರ್ಷದ ಅಗ್ರೀಮೆಂಟ್ ಇನ್ನೂ ಬಾಕಿ ಉಳಿದಿದೆಯಂತೆ. ಆದ್ದರಿಂದಲೇ ಮತ್ತೆ ಎರಡು ವರ್ಷ ಚಿತ್ರಮಂದಿರದಲ್ಲಿ ಪ್ರದರ್ಶನಕ್ಕೆ ರೀ ಓಪನಿಂಗ್ ಕೊಡಲು ಮಾಲೀಕರು ರೆಡಿಯಾಗಿದ್ದಾರೆ. ಏನೇ ಆಗ್ಲೀ ಕೆ.ಜಿ ರಸ್ತೆಯಲ್ಲಿ ಚಿತ್ರಪ್ರೇಮಿಗಳ ಅಚ್ಚುಮೆಚ್ಚಿನ ಚಿತ್ರಮಂದಿರದಲ್ಲಿ ಹಿಂದೆ 'ಮೈನಾ' ಚಿತ್ರ ನೂರು ದಿನಗಳ ಪ್ರದರ್ಶನ ಕಂಡಿತ್ತು.

  ಅದಾದ ನಂತರ ಬಂದ್ ಆದ ಸಾಗರ್ ಚಿತ್ರಮಂದಿರ 'ನಿನ್ನಿಂದಲೇ' ರಿಲೀಸ್ ಗೆ ರೆಡಿಯಾಗ್ತಿದೆ. ಅಂದಹಾಗೆ ಪುನೀತ್ ಹಾಗೂ ಎರಿಕಾ ಫರ್ನಾಂಡೀಸ್ ಅಭಿನಯದ 'ನಿನ್ನಿಂದಲೇ' ಚಿತ್ರ ಜನವರಿ 16ಕ್ಕೆ ತೆರೆಗೆ ಬರೋ ಸಾಧ್ಯತೆಯಿದೆ. ಅಂದೇ ಸಾಗರ್ ಕೂಡ ರೀಓಪನ್ ಆಗಲಿದೆ.

  English summary
  Bangalore's lucky theatre Sagar reopens from January 16th, 2014, if sources are to be believed. Sagar stopped screening the film, thus making Mynaa the last film to be screened there.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X