»   » ಪುನೀತ್ ರಾಜ್ 'ನಿನ್ನಿಂದಲೇ' ಚಿತ್ರಕ್ಕೆ ಕತ್ತರಿ ಪ್ರಯೋಗ

ಪುನೀತ್ ರಾಜ್ 'ನಿನ್ನಿಂದಲೇ' ಚಿತ್ರಕ್ಕೆ ಕತ್ತರಿ ಪ್ರಯೋಗ

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ನಿನ್ನಿಂದಲೇ' ಚಿತ್ರ ಸಿಕ್ಕಾಪಟ್ಟೆ ಲೆಂತ್ ಆಯಿತು. ಕೆಲವು ಸನ್ನಿವೇಶಗಳಿಗೆ ಕತ್ತರಿಹಾಕಿದ್ದರೆ ಚೆನ್ನಾಗಿತ್ತು. ದ್ವಿತೀಯಾರ್ಧದಲ್ಲಂತೂ ಅಷ್ಟೆಲ್ಲಾ ಎಳೆದಾಟ ಅಗತ್ಯವಿರಲಿಲ್ಲ ಎಂಬ ಮಾತುಗಳು ಪ್ರೇಕ್ಷಕರ ವರ್ಗದಿಂದ ಕೇಳಿಬಂದಿದ್ದವು.

ಈಗ ಚಿತ್ರದ ನಿರ್ದೇಶಕ ಜಯಂತ್ ಸಿ ಪರಾಂಜಿ ಅವರು 19 ನಿಮಿಷಗಳಷ್ಟು ಮೊಟಕುಗೊಳಿಸಿದ್ದಾರೆ. ಕತ್ತರಿ ಹಾಕುವ ಮುನ್ನ ನಿನ್ನಿಂದಲೇ ಚಿತ್ರ 2 ಗಂಟೆ 40 ನಿಮಿಷಗಳಷ್ಟು ಸುದೀರ್ಘವಾಗಿತ್ತು. ಈಗ 2 ಗಂಟೆ 21 ನಿಮಿಷಗಳಿಗೆ ಸೀಮಿತವಾಗಿದೆ. [ನಿನ್ನಿಂದಲೇ ಚಿತ್ರವಿಮರ್ಶೆ]


ಕಳೆದ ಒಂದು ವರ್ಷದಿಂದ ಪುನೀತ್ ಚಿತ್ರವಿಲ್ಲದೆ ಅಭಿಮಾನಿಗಳು ಚಡಪಡಿಸಿದ್ದರು. ಈಗ ಚಿತ್ರಕ್ಕೆ ಬಾಕ್ಸ್ ಆಫೀಸಲ್ಲಿ ಭರ್ಜರಿ ಓಪನಿಂಗ್ ಸಿಕ್ಕಿದೆ. ಮೊದಲ ದಿನವೇ ರಾಜ್ಯದಾದ್ಯಂತ 800 ಪ್ರದರ್ಶನಗಳನ್ನು ಕಂಡಿರುವ ಚಿತ್ರ ರು.2.5 ಕೋಟಿ ಬಾಚಿದೆ. ಈ ಮೂಲಕ ಪುನೀತ್ ಬಾಕ್ಸ್ ಆಫೀಸ್ ಕಿಂಗ್ ಎಂಬುದನ್ನು ಸಾಬೀತುಪಡಿಸಿದ್ದಾರೆ.

ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಸಿಂಪಲ್ ಲವ್ ಸ್ಟೋರಿಗೆ ಇಷ್ಟೆಲ್ಲಾ ರೀಲು ಸುತ್ತುವ ಬದಲು ಕೊಂಚ ಕಡಿಮೆ ಮಾಡಿದ್ದರೆ ಚೆನ್ನಾಗಿತ್ತು ಎಂಬ ಅಪಸ್ವರಗಳು ಕೇಳಿಬಂದಿದ್ದವು. ಈ ಅಪಸ್ವರಕ್ಕೆ ಸ್ಪಂದಿಸಿರುವ ಚಿತ್ರತಂಡ 19 ನಿಮಿಷಗಳಷ್ಟು ಮೊಟಕುಗೊಳಿಸಿದೆ. (ಏಜೆನ್ಸೀಸ್)

English summary
Sources says that, Power Star Puneth Rajkumar lead 'Ninnindale' trimmed by 19 minutes. The film is 2 hours 40 minutes long. The film will now be 2 hours 20 minutes long.
Please Wait while comments are loading...