»   » ಸತ್ಯಮೇವ ಜಯತೇ ಡಬ್ಬಿಂಗ್ ವಿರುದ್ಧ ತಿರುಗಿಬಿದ್ದ ಪುನೀತ್

ಸತ್ಯಮೇವ ಜಯತೇ ಡಬ್ಬಿಂಗ್ ವಿರುದ್ಧ ತಿರುಗಿಬಿದ್ದ ಪುನೀತ್

Posted By:
Subscribe to Filmibeat Kannada
ಅಮೀರ್ ಖಾನ್ ಪ್ರಾಯೋಜಿಸಿ, ನಡೆಸಿಕೊಡುತ್ತಿರುವ 'ಸತ್ಯಮೇವ ಜಯತೇ' ಟಿವಿ ಟಾಕ್ ಶೋವನ್ನು ಕನ್ನಡಕ್ಕೆ ಡಬ್ಬಿಂಗ್ ಮಾಡಲು ಅವಕಾಶ ಮಾಡಿಕೊಡಲ್ಲ ಎಂದು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗುಡುಗಿದ್ದಾರೆ. ಅವರು ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.

ಕೆಲದಿನಗಳ ಹಿಂದೆ ಅಮೀರ್ ಖಾನ್ ಅವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಸತ್ಯಮೇವ ಜಯತೇ ಕನ್ನಡ ಡಬ್ಬಿಂಗ್‌ಗೆ ಅವಕಾಶ ಮಾಡಿಕೊಡುವಂತೆ ವಿನಂತಿಸಿಕೊಂಡಿದ್ದರು. ಆದರೆ ಕೆಫಿಸಿಸಿ ಅಧ್ಯಕ್ಷರಾದ ಕೆವಿ ಚಂದ್ರಶೇಖರ್ ಅವರು ಮಂಡಳಿ ನಿಯಮಗಳಿಗೆ ವಿರುದ್ಧ ಎಂದು ಹೇಳಿ ಡಬ್ಬಿಂಗ್‌ಗೆ ನಕಾರ ಸೂಚಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಆದರೆ ಸತ್ಯಮೇವ ಜಯತೇ ಕನ್ನಡ ಡಬ್ಬಿಂಗ್ ಆವೃತ್ತಿ ಅದು ಹೇಗೋ ಏನೋ ಜನಪ್ರಿಯ ವಿಡಿಯೋ ಹಂಚಿಕೆ ತಾಣ ಯೂಟ್ಯೂಬ್‍‌ಗೆ ಸೇರಿತ್ತು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪುನೀತ್ ರಾಜ್ ಕುಮಾರ್ ಡಬ್ಬಿಂಗ್ ವಿರುದ್ಧ ಗುಡುಗಿದ್ದಾರೆ.

ತಮ್ಮ ಅಣ್ಣಾಬಾಂಡ್ ಚಿತ್ರ ಯಶಸ್ವಿಯಾಗಿ ಪ್ರದರ್ಶನವಾಗುತ್ತಿರುವ ಕಾರಣ ಅವರು ಹುಬ್ಬಳ್ಳಿ, ಧಾರಾವಾಡ ಹಾಗೂ ಬೆಳಗಾವಿಗೆ ಭೇಟಿ ನೀಡುತ್ತಿದ್ದಾರೆ. ಕಲಾವಿದನಿಗೆ ಪ್ರತಿ ಚಿತ್ರವೂ ಹೊಸ ಅನುಭವ ನೀಡುತ್ತದೆ. ಉತ್ತಮ ಚಿತ್ರಗಳನ್ನು ನೀಡಲು ಪ್ರಯತ್ನಿಸುತ್ತಾನೆ. ಒಪ್ಪುವುದು ಬಿಡುವುದು ಪ್ರೇಕ್ಷಕರಿಗೆ ಬಿಟ್ಟ ವಿಚಾರ ಎಂದರು. (ಏಜೆನ್ಸೀಸ್)

English summary
Despite facing opposition from Sandalwood for Aamir Khan's Satyameva Jayate dubbing in Kannada, now Power Star Puneeth Rajkumar also raise voice against its Kannada dubbing. He has speaking media persons in Hubli.
Please Wait while comments are loading...