»   » ದಾಖಲೆಗಳ ಮೇಲೆ ದಾಖಲೆ ಬರೀತಾನೆ ಪವರ್ ಸ್ಟಾರ್

ದಾಖಲೆಗಳ ಮೇಲೆ ದಾಖಲೆ ಬರೀತಾನೆ ಪವರ್ ಸ್ಟಾರ್

By: ಜೀವನರಸಿಕ
Subscribe to Filmibeat Kannada

ಪುನೀತ್ ಅಭಿಮಾನಿಗಳಿಗೆ ಇನ್ನು ನಿರಾಶೆ ಖಂಡಿತ ಆಗೋದಿಲ್ಲ. 'ನಿನ್ನಿಂದಲೇ' ಸಿನಿಮಾ ಹೀನಾಯವಾಗಿ ಸೋತಾಗ ಪುನೀತ್ ಅಭಿಮಾನಿಗಳಿಗೆ ಹೇಳಿದ್ರು 3-4 ತಿಂಗಳು ಕಾಯ್ತಾ ಇರಿ ಒಳ್ಳೆಯ ಸಿನಿಮಾ ಕೊಡ್ತೀನಿ ಅಂದಿದ್ರು. ಅದಾಗಿ ಆರು ತಿಂಗಳಾಗಿದೆ. ಒಂದೆರೆಡು ತಿಂಗಳು ಹೆಚ್ಚಾಗಿದೆ ಅನ್ನೋದು ಬಿಟ್ರೆ ಪುನೀತ್ ಅಭಿಮಾನಿಗಳಿಗೆ ಹಬ್ಬ ಗ್ಯಾರಂಟಿ.

ಪವರ್ ಸ್ಟಾರ್ ಸಿನಿಮಾ ಈ ತಿಂಗಳ ಕೊನೆಯಲ್ಲಿ ತೆರೆಗೆ ಬರ್ತಿದೆ. ಪವರ್ ಸ್ಟಾರ್ ಸಿನಿಮಾ ಸಿಂಪಲ್ಲಾಗಿ ತೆರೆಗೆ ಬರ್ತಿದೆ ಅಂದ್ರೆ ಸಾಲದು. ಒಂದು ಪವರ್ ಜೊತೆ ಪವರ್ ಫುಲ್ ಫೋರ್ಸ್ ಜೊತೆ ಚಿತ್ರ ಥಿಯೇಟರ್ ಗಳಿಗೆ ಲಗ್ಗೆ ಇಡುತ್ತೆ. ನಾವು ಹೀಗೆ ಹೇಳೋದಕ್ಕೆ ಕಾರಣಾನೂ ಇದೆ. [ಇದೇ ತಿಂಗಳಲ್ಲಿ ಪವರ್ ಫುಲ್ 'ಪವರ್ * * *' ತೆರೆಗೆ]

ಇದು ಪುನೀತ್ ಮತ್ತು ನಿರ್ದೇಶಕ ಕೆ ಮಾದೇಶ ಕಾಂಬಿನೇಷನ್ ಮೂರನೇ ಸಿನಿಮಾ. ಈ ಹಿಂದೆ ಯಶಸ್ವಿ ಸಿನಿಮಾಗಳನ್ನೇ ಕೊಟ್ಟಿರೋ ಪುನೀತ್-ಮಾದೇಶ ಕಾಂಬಿನೇಷನ್ ಕೂಡ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ. ಆದ್ರೆ ದಾಖಲೆಗಳೊಂದಿಗೆ ತೆರೆಗೆ ಬರ್ತಿರೋ ಪವರ್ಸ್ಟಾರ್ ಚಿತ್ರದ ಇಂಟರೆಷ್ಟಿಂಗ್ ಡೀಟೈಲ್ಸ್ ಇಲ್ಲಿದೆ ನೋಡು.

ಧಂ ಪವರೇ ಹಾಡಿನ ರೀಮಿಕ್ಸ್ ದಾಖಲೆ

ಈಗಾಗ್ಲೇ ಟ್ರೇಲರ್ ನಲ್ಲಿ ಮೋಡಿ ಮಾಡಿರೋ ಚಂದನ್ ಶೆಟ್ಟಿ ಸಾಹಿತ್ಯ ಬರೆದು ಹಾಡಿರೋ ಧಮ್ ಪವರೇ ಹಾಡು ಕನ್ನಡದಲ್ಲೇ ಮೊದಲ ಬಾರಿಗೆ ರೀಮಿಕ್ಸ್ ವರ್ಷನ್ ನಲ್ಲಿ ಬರ್ತಿರೋದು ದಾಖಲೆ. ರೀಮಿಕ್ಸ್ ವರ್ಷನ್ ಅದ್ದೂರಿ ಫಸ್ಟ್ ಲುಕ್ ಒನ್ ಇಂಡಿಯಾಗೆ ಲಭ್ಯವಾಗಿದೆ.

ಪ್ಲಾಟಿನಂ ಡಿಸ್ಕ್ ದಾಖಲೆ

ಬಹಳ ವರ್ಷಗಳ ನಂತರ ಪುನೀತ್ ಸಿನಿಮಾವೊಂದರ ಹಾಡುಗಳು ಭರ್ಜರಿಯಾಗಿ ಸೇಲಾಗಿವೆ. ಇಂಟರ್ನೆಟ್ ಡೌನ್ ಲೋಡ್ ನಲ್ಲಿ ಅತಿಹೆಚ್ಚು ಡೌನ್ಲೋಡ್ ದಾಖಲೆ ಬರೆದು ಲಹರಿ ಆಡಿಯೋ ಸಂಸ್ಥೆಗೆ ಕೂಡ ಮತ್ತೊಂದು ಗರಿ ಮೂಡಿಸ್ತು.

ಪುನೀತ್ ಹಾಡಿರೋ ಗುರುವಾರ ಸಂಜೆ ದಾಖಲೆ

ಪುನೀತ್ ಮೊದಲ ಬಾರಿಗೆ ಮೆಲೋಡಿ ಹಾಡೊಂದನ್ನ ಹಾಡಿದ್ದು ಪವರ್ ಸ್ಟಾರ್ ಸಿನಿಮಾಗೆ. ಗುರುವಾರ ಸಂಜೆ ಹಾಡು ಪುನೀತ್ ಕಂಠದಲ್ಲಿ ಲವ್ಲೀಯಾಗಿ ಮೂಡಿ ಬಂದಿದೆ. ಸಂಗೀತ ಪ್ರೇಮಿಗಳು ಅತಿಹೆಚ್ಚು ಡೌನ್ಲೋಡ್ ಮಾಡಿಕೊಳ್ತಿರೋ ಹಾಡುಕೂಡ ಗುರುವಾರ ಸಂಜೆ.

ಥಿಯೇಟರ್ ಗಳ ಸಂಖ್ಯೆಯಲ್ಲೂ ದಾಖಲೆ?

ಸದ್ಯ ತೆರೆಯಲ್ಲಿರೋ ಸಿನಿಮಾಗಳು ಪವರ್ ಸ್ಟಾರ್ ಸಿನಿಮಾ ಅಂದ್ರೆ ತೆರೆಮರೆಗೆ ಸರಿಯೋದು ಕನ್ಫರ್ಮ್. ಇನ್ನು ಮಲ್ಟಿಪ್ಲೆಕ್ಸ್ ಗಳಲ್ಲಿ ಪುನೀತ್ ಸಿನಿಮಾಗೆ ಸಿಕ್ಕಾಪಟ್ಟೆ ಬೇಡಿಕೆ. ಈ ಬಾರಿ ಥಿಯೇಟರ್ ಗಳ ಲೆಕ್ಕಾಚಾರದಲ್ಲಿ ಪವರ್ ಸ್ಟಾರ್ ದಾಖಲೆ ಪಕ್ಕಾ ಅಂತಿದೆ ಗಾಂಧಿನಗರದ ಪಂಡಿತರ ಪಡಸಾಲೆ.

ಡಿಸ್ಟ್ರಿಬ್ಯೂಷನ್ ನಲ್ಲಿ ಹೊಸ ದಾಖಲೆ

ಹುಬ್ಬಳ್ಳಿ ಒಂದು ವಲಯವನ್ನ ಹೊರತು ಪಡಿಸಿದ್ರೂ 'ದೂಕುಡು' ರೀಮೇಕ್ ಪವರ್ ಸ್ಟಾರ್ ಸಿನಿಮಾ ರು.11 ಕೋಟಿಗೆ ಮಾರಾಟವಾಗಿದ್ದು ಕೂಡ ಒಂದು ದಾಖಲೆ. ಹೀಗೆ ಪುನೀತ್ ಸಿನಿಮಾ ಪವರ್ ಫುಲ್ ದಾಖಲೆ ಬರೀತಾನೇ ಇದೆ.

ಇದೇ ತಿಂಗಳ 22ಕ್ಕೆ ಪವರ್ ಸ್ಟಾರ್

ಹೀಗೆ ದಾಖಲೆಗಳಲ್ಲೇ ದಾಂಧಲೆ ಮಾಡಲಿರೋ ಪವರ್ ಸ್ಟಾರ್ ಇದೇ ಆಗಸ್ಟ್ 22ಕ್ಕೆ ತೆರೆಗೆ ಬರೋ ಸಾಧ್ಯತೆಗಳು ಹೆಚ್ಚಿದೆ. ಇಷ್ಟೆಲ್ಲಾ ದಾಖಲೆಗಳನ್ನ ದಾಖಲಿಸ್ತಿರೋ ಚಿತ್ರ ಈ ಬಾರಿ ಗೆಲ್ಲೋದು ಮಿಸ್ ಆಗಲ್ಲ ಅನ್ನೋದು ಅಭಿಮಾನಿಗಳ ನಿರೀಕ್ಷೆ.

English summary
Power Star Puneeth Rajkumar upcoming movie Power creates new record. The movie is all set to release on 22nd August. The audio, number of theaters, distribution rights created a new record.
Please Wait while comments are loading...