For Quick Alerts
  ALLOW NOTIFICATIONS  
  For Daily Alerts

  ಜ್ಞಾನಜ್ಯೋತಿಯಲ್ಲಿ 'ಪವರ್ ಸ್ಟಾರ್' ಶತದಿನೋತ್ಸವ ಸಂಭ್ರಮ

  By Rajendra
  |

  ಈಗಿನ ಫಾಸ್ಟ್ ದುನಿಯಾದಲ್ಲಿ ಚಿತ್ರಗಳು ಸೆಂಚುರಿ ಪೂರೈಸುವ ಮಾತಿರಲಿ ಅರ್ಧ ಶತಕ ಭಾರಿಸುವುದು ಕಷ್ಟ. ಯಾವುದಾದರೂ ಒಂದು ಚಿತ್ರ ಶತಕ ಪೂರೈಸಿದರೆ ಅದೇ ದೊಡ್ಡ ಸುದ್ದಿ. ಇದೀಗ ಆ ರೀತಿಯ ಸಂಭ್ರಮಕ್ಕೆ ಪಾತ್ರವಾಗುತ್ತಿದೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ 'ಪವರ್ ***' ಚಿತ್ರ.

  ಈ ಚಿತ್ರದ ಶತದಿನೋತ್ಸವ ಸಂಭ್ರಮವನ್ನು ಶನಿವಾರ (ಡಿಸೆಂಬರ್ 13) ಹಮ್ಮಿಕೊಳ್ಳಲಾಗಿದೆ. ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಇಂದು ಸಂಜೆ 5.30ರ ಬಳಿಕ ಶತದಿನೋತ್ಸವ ಸಂಭ್ರಮ ನಡೆಯಲಿದೆ. ಇಡೀ ಚಿತ್ರತಂಡ ಈ ಸಂಭ್ರಮದಲ್ಲಿ ಭಾಗಿಯಾಗಲಿದೆ. [ಪವರ್ *** ಚಿತ್ರ ವಿಮರ್ಶೆ]

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಪವರ್ ಪ್ಯಾಕ್ಡ್ ಆಕ್ಷನ್ ಧಮಾಕಾ 'ಪವರ್ ***' ಚಿತ್ರ ಬೆಂಗಳೂರಿನ ಸಂತೋಷ್ ಚಿತ್ರಮಂದಿರದಲ್ಲಿ ಸೆಂಚುರಿ ಪೂರೈಸಿದೆ. ಈ ಮೂಲಕ ಪುನೀತ್ ಅವರು ಮತ್ತೊಮ್ಮೆ ಬಾಕ್ಸ್ ಆಫೀಸ್ ಕಿಂಗ್ ಎಂಬುದು ಸಾಬೀತಾಗಿದೆ. ಕೆ ಮಾದೇಶ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರ ತೆಲುಗಿನ 'ದೂಕುಡು' ಚಿತ್ರದ ರೀಮೇಕ್. ಇದು ರೀಮೇಕ್ ಚಿತ್ರವಾದರೂ ಪುನೀತ್ ಅವರು ಡಾನ್ಸ್, ಫೈಟ್ಸ್ ನಲ್ಲಿ ಗಮನಸೆಳೆಯುತ್ತಾರೆ.

  ಒಂದೇ ವಾರದ ಚಿತ್ರದ ಬಜೆಟ್ ವಸೂಲಿ ಮಾಡಿರುವುದು ಪವರ್ *** ಚಿತ್ರದ ಹೆಗ್ಗಳಿಕೆಗಳಲ್ಲಿ ಒಂದು. ಇದುವರೆಗೂ ಚಿತ್ರದ ಒಟ್ಟಾರೆ ಗಳಿಕೆ ರು.50 ಕೋಟಿ ದಾಟಿದೆ ಎನ್ನುತ್ತವೆ ಮೂಲಗಳು. ರು.50 ಕೋಟಿ ಕ್ರಾಸ್ ಮಾಡಿದ ಸ್ಯಾಂಡಲ್ ವುಡ್ ನ ಮೊದಲ ಚಿತ್ರ 'ಪವರ್ ***' ಎಂಬುದು ಇನ್ನೊಂದು ವಿಶೇಷ.

  ಸರಿಸುಮಾರು ರು.18 ಕೋಟಿ ಬಜೆಟ್ ನಲ್ಲಿ ನಿರ್ಮಿಸಿರುವ ಚಿತ್ರ ಇದುವರೆಗೂ ರು.69 ಕೋಟಿ ಕಲೆಕ್ಷನ್ ಮಾಡಿದ್ದು ನಿರ್ಮಾಪಕರ ಪಾಲಿನ ಡಾರ್ಲಿಂಗ್ ಆಗಿದ್ದಾರೆ ಪುನೀತ್. ಈ ಚಿತ್ರದ ವಿಶಾಲ ಕರ್ನಾಟಕ ಹಂಚಿಕೆದಾರದು ಸಮರ್ಥ್ ವೆಂಚರ್ಸ್, ಹೈದರಾಬಾದ್ ಕರ್ನಾಕಕ್ಕೆ ಶ್ರೀ ಗಣೇಶ್ ಪಿಕ್ಚರ್ಸ್ (ಗಂಗಾವತಿ). ರಾಮ್ ಅಚಂಟ, ಗೋಪಿಚಂದ್ ಅಚಂಟ, ಅನಿಲ್ ಸುಂಕರ ನಿರ್ಮಾಣದ ಈ ಚಿತ್ರಕ್ಕೆ ಎಸ್ ಎಸ್ ಥಮನ್ ಸಂಗೀತ ನೀಡಿದ್ದಾರೆ.

  ಈ ಚಿತ್ರದ ಮೂಲಕ ತ್ರಿಷಾ ಕೃಷ್ಣನ್ ಅವರು ಕನ್ನಡಕ್ಕೆ ಅಡಿಯಿಟ್ಟಿದ್ದಾರೆ. ಆರಂಭದಲ್ಲಿ ಈ ಚಿತ್ರಕ್ಕೆ ರಾಜಕುಮಾರ ಎಂದು ಹೆಸರಿಡಲಾಗಿತ್ತು. ಆದರೆ ಕಾರಣಾಂತರಗಳಿಂದ ಪವರ್ *** ಎಂದು ಬದಲಾಯಿಸಲಾಯಿತು. (ಫಿಲ್ಮಿಬೀಟ್ ಕನ್ನಡ)

  English summary
  Power Star Puneeth Rajkumar's 'Power ***' grand 100 days celebration took place Today (13th December) 5.30 pm onwards at Jnana Jyothi auditorium, Bangalore University. The movie got their budget in just 1 weeks. According to the sources movie already joins Rs.50 crore club and till now it reaches Rs. 69 crore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X