»   » ಹೀಗೊಂದು ಪುನೀತ್ ರಾಜ್ 'ಪವರ್'ಫುಲ್ ಸ್ವಾರಸ್ಯ

ಹೀಗೊಂದು ಪುನೀತ್ ರಾಜ್ 'ಪವರ್'ಫುಲ್ ಸ್ವಾರಸ್ಯ

By: ಜೀವನರಸಿಕ
Subscribe to Filmibeat Kannada

ಮೊದಲಿನ ಸ್ವಾರಸ್ಯ ಅಂದರೆ ಸ್ಯಾಂಡಲ್ ವುಡ್ ನ 'ಪವರ್' ಟಾಲಿವುಡ್ 'ಪವರ್' ಈ ಬಾರಿ ಗೌರಿಗಣೇಶ ಹಬ್ಬದಲ್ಲಿ ಮುಖಾಮುಖಿಯಾಗಲಿವೆ. ಆಗಸ್ಟ್ 29ಕ್ಕೆ ಕನ್ನಡ ಪವರ್ ಸ್ಟಾರ್ ಮತ್ತು ತೆಲುಗಿನ 'ಪವರ್' ಚಿತ್ರ ರಿಲೀಸಾಗೋಕೆ ರೆಡಿಯಾಗಿದೆ.

ಅಲ್ಲಿ ಮಾಸ್ ಮಹಾರಾಜ ರವಿತೇಜ ಇಲ್ಲಿ ಪವರ್ ಸ್ಟಾರ್ ಪುನೀತ್. ಆದರೆ ಸ್ವಾರಸ್ಯ ಇರೋದೇ ಇಲ್ಲಿ. ಕನ್ನಡದ ಪವರ್ ಗೆ ರಿಯಲ್ ಪವರ್ ತುಂಬಿರೋದು ತೆಲುಗಿನ ನಿರ್ಮಾಪಕರಾದ 14 ರೀಲ್ಸ್ ಎಂಟರ್ ಟೈನ್ ಮೆಂಟ್. ಆದರೆ ತೆಲುಗಿನ 'ಪವರ್'ಗೆ ರಿಯಲ್ ಪವರ್ ತುಂಬಿರೋದು ಕನ್ನಡದ ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್. [ಪವರ್ ಸ್ಟಾರ್ ಪುನೀತ್ ಇಂಟರೆಸ್ಟಿಂಗ್ ಸಂಗತಿಗಳು]


ಅದಕ್ಕೆ ಹೇಳಿದ್ದು ತೆಲುಗು 'ಪವರ್' ಹಿಂದಿರೋದು ಕನ್ನಡದ ಶಕ್ತಿ. ಇನ್ನು ಕನ್ನಡದ 'ಪವರ್' ಹಿಂದಿರೋದು ತೆಲುಗು ಶಕ್ತಿ. ಅದೂ ಕೂಡ ಎರಡೂ ಚಿತ್ರಗಳು ಸ್ಪರ್ಧೆಗಿಳೀತಾ ಇರೋದು ಒಂದೇ ದಿನ.

ಟೈಟಲ್ ನಲ್ಲಿ ಕೂಡ ಹೆಚ್ಚು ಕಡಿಮೆ ಒಂದೇ ಪವರ್. ಯಾವ ನಿರ್ಮಾಪಕರಿಗೆ ಲಾಭ ಆಗುತ್ತೆ. ಯಾವ ಹೀರೋಗೆ ಲಕ್ಕು ಕುದುರುತ್ತೆ ಅಂತ ಪ್ರೇಕ್ಷಕರು ಕಾದಿದ್ದಾರೆ. ತೆಲುಗಿನ 'ದೂಕುಡು' ಚಿತ್ರದ ರೀಮೇಕ್ 'ಪವರ್'. ಮೂಲ ಚಿತ್ರದಲ್ಲಿ ಮಹೇಶ್ ಬಾಬು, ಸಮಂತಾ ಮುಖ್ಯಭೂಮಿಕೆಯಲ್ಲಿದ್ದಾರೆ. 14 ರೀಲ್ಸ್ ಎಂಟರ್ ಟೈನ್ ಮೆಂಟ್ ಪ್ರೈ ಲಿ ಹಾಗೂ ಕೊಲ್ಲ ಎಂಟರ್ ಟೈನ್ ಮೆಂಟ್ ಲಾಂಛನದಲ್ಲಿ ಗೋಪಿ ಅಚಂಟ, ರಾಮ್ ಅಚಂಟ ಹಾಗೂ ಅನಿಲ್ ಸುಂಕರ ನಿರ್ಮಿಸುತ್ತಿದ್ದಾರೆ.

English summary
Two 'power'ful movies are clashing at the box office this month with films with similar names. Puneeth Rajkumar's upcoming movie Power*** which is a remake of the Telugu film Dookudu is releasing on 22nd August, Ravi Teja lead Telugu film 'Power' produced by Rockline Venkatesh is releasing the following week.
Please Wait while comments are loading...